Advertisement

ಬಾಲಿವುಡ್ ಲೆಜೆಂಡರಿ ಸಿನಿಮಾ ನಿರ್ದೇಶಕ ಬಸು ಚಟರ್ಜಿ ವಿಧಿವಶ, ಅಂತ್ಯಕ್ರಿಯೆ

01:52 PM Jun 04, 2020 | Nagendra Trasi |

ನವದೆಹಲಿ:ಬಾಲಿವುಡ್ ನ ಖ್ಯಾತ ಹಾಗೂ ದಂತಕಥೆ ಎನ್ನಿಸಿಕೊಂಡಿರುವ ನಿರ್ದೇಶಕ ಬಸು ಚಟರ್ಜಿ(90ವರ್ಷ) ಗುರುವಾರ ವಿಧಿವಶರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ರಜನಿಗಂಧ, ಚೋಟಿ ಸಿ ಬಾತ್, ಖಟ್ಟಾ ಮೀಠಾ, ಬಾತೋನ್ ಬಾತೋನ್ ಮೈನ್, ಸೌಕೀನ್ ಸೇರಿದಂತೆ ಹಲವಾರು ಕ್ಲಾಸಿಕ್ ಚಿತ್ರಗಳ ನಿರ್ದೇಶಕರಾಗಿ ಹೆಸರಾಗಿದ್ದವರು ಬಸು ಚಟರ್ಜಿ.

ಖ್ಯಾತ ನಿರ್ದೇಶಕ ಬಸು ಚಟರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಐಎಫ್ ಟಿಡಿಎ ಅಧ್ಯಕ್ಷ ಅಶೋಕೆ ಪಂಡಿತ್, ಇಂದು ಮಧ್ಯಾಹ್ನ 2ಗಂಟೆಗೆ ಮುಂಬೈನ ಸಾಂತಾ ಕ್ರೂಝ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಲೆಜೆಂಡರಿ ಚಿತ್ರ ನಿರ್ಮಾಪಕ ಚಟರ್ಜಿ ಅವರ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಾಪ, ನೆನಪುಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next