ಮುಂಬೈ: ಐಶಾರಾಮಿ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಾಲಿವುಡ್ ದಂತಕತೆ ನಟ, ನಿರ್ದೇಶಕ, ನಿರ್ಮಾಪಕ ದಿ.ರಾಜ್ ಕಪೂರ್ ಅವರ ಬೃಹತ್ ಬಂಗಲೆಯನ್ನು ಖರೀದಿಸಿರುವುದಾಗಿ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಶುಕ್ರವಾರ (ಫೆ.17) ತಿಳಿಸಿದೆ.
ಇದನ್ನೂ ಓದಿ:ಸಾಂಸ್ಕೃತಿಕ ಲೋಕದಲ್ಲಿ ಛಾಪು; ಬಲಿಪ ಭಾಗವತರ ನಿಧನಕ್ಕೆ ಪ್ರಧಾನಿ ಸಂತಾಪ
ಮುಂಬೈನ ಚೆಂಬೂರ್ ನಲ್ಲಿರುವ ರಾಜ್ ಕಪೂರ್ ಅವರ ಒಡೆತನದ ಭೂಮಿಯನ್ನು ಕಪೂರ್ ಕುಟುಂಬದ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಖರೀದಿಸಿರುವುದಾಗಿ ಗೋದ್ರೇಜ್ ಪ್ರಾಪರ್ಟೀಸ್ ಮಾಹಿತಿ ನೀಡಿದ್ದು, ಬಂಗಲೆಯನ್ನು ಎಷ್ಟು ಮೊತ್ತಕ್ಕೆ ಖರೀದಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಈ ಸ್ಥಳ ಮುಂಬೈನ ಚೆಂಬೂರ್ ನ ಡಿಯೋನಾರ್ ಫಾರಂ ರಸ್ತೆಯಲ್ಲಿರುವ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್(ಟಿಐಎಸ್ ಎಸ್) ಸಮೀಪದಲ್ಲಿದೆ.
2019ರ ಮೇನಲ್ಲಿ ಗೋದ್ರೇಜ್ ಪ್ರಾಪರ್ಟೀಸ್ ಚೆಂಬೂರ್ ನಲ್ಲಿ ಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋವನ್ನು ಖರೀದಿಸಿದ್ದು, ಅದನ್ನು ಗೋದ್ರೇಜ್ ಆರ್ ಕೆಎಸ್ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು, ಇದು 2023ರ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಈ ಮಹತ್ವದ ಯೋಜನೆಯನ್ನು ನಮ್ಮ ಕಾರ್ಯಸೂಚಿಯಲ್ಲಿ ಸೇರಿಸಿಕೊಳ್ಳಲು ತುಂಬಾ ಸಂತೋಷಪಡುತ್ತೇವೆ. ಜೊತೆಗೆ ನಮಗೆ ಈ ಅವಕಾಶವನ್ನು ಒದಗಿಸಿಕೊಟ್ಟ ಕಪೂರ್ ಕುಟುಂಬಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಗೋದ್ರೇಜ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ, ಸಿಇಒ ಗೌರವ್ ಪಾಂಡೆ ತಿಳಿಸಿದ್ದಾರೆ.