Advertisement

Baba Siddique Case: ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ: ಖರ್ಗೆ

02:45 PM Oct 13, 2024 | Team Udayavani |

ಕಲಬುರಗಿ: ಮಾಜಿ ಸಚಿವ ಸಿದ್ದಿಖಿ ಹತ್ಯೆ ದಿಗ್ಧಮೆ ಉಂಟು ಮಾಡಿದೆ. ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. 15 ದಿನಗಳಿಂದ ಸಿದ್ದಿಖಿ ಹತ್ಯೆ ಸಂಚು ನಡೆದಿತ್ತು. ಇದು ಮಹಾರಾಷ್ಟ್ರಕ್ಕೂ ಗೊತ್ತಿತ್ತು. ಆದರೂ, ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮೂರು ಸರಕಾರಗಳ ಹೇಳಿಕೆಗಳಿಂದ ಅಧಿಕಾರಿಗಳು ಗೊಂದಲಕ್ಕೆ ಬಿದ್ದ ಪರಿಣಾಮ ಇಂತಹ ಘಟನೆ ನಡೆದಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಹಾಡುಹಗಲೇ ಕಚೇರಿಗೆ ನುಗ್ಗಿ ಶೂಟ್ ಮಾಡುತ್ತಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಕಳೆದ 15 ದಿನಗಳಿಂದ ಹತ್ಯೆಗೆ ಸಂಚು ನಡೆದಿತ್ತು ಎಂದು ಅಧಿಕಾರಿಗಳಿಗೆ ಗೊತ್ತಿದೆ. ಅದಕ್ಕಾಗಿ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಆದರೂ, ಹತ್ಯೆಯಾಗಿರುವುದು ಸೂಜಿಗದ ಸಂಗತಿ ಎಂದರು.

ತಮ್ಮ ಸಾವಿನ ಕುರಿತು ಖುದ್ದು ಸಿದ್ದಿಖಿ ಹೇಳಿದ್ದರು. ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ. ಜೀವ ಉಳಿಯುತ್ತೋ ಇಲ್ಲವೋ ಎಂದು ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆದರೂ ಕೂಡ ಸಿದ್ದಿಖಿ ಮಾತನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ಸಿದ್ದಿಖಿ ಹತ್ಯೆ ಆರೋಪಿಗಳ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಇದೆಲ್ಲದಕ್ಕೂ ಮುಂದಿನ ಚುನಾವಣೆಯಲ್ಲಿ‌ ಜನರೇ‌ ಉತ್ತರ ಕೊಡಲಿದ್ದಾರೆ ಎಂದರು. ಎಂಎಲ್‌ಸಿ ತಿಪ್ಪಣ್ಣಪ್ಪ‌ಕಮಕನೂರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next