Advertisement

ಟೋಲ್‌ ವಿಲೀನಕ್ಕೆ ಕಾನೂನು ಸಮಸ್ಯೆ: ನಳಿನ್‌ ಕುಮಾರ್‌ ಕಟೀಲು 

01:31 AM Feb 27, 2022 | Team Udayavani |

ಮಂಗಳೂರು: ಸುರತ್ಕಲ್‌ ಟೋಲ್‌ ಪ್ಲಾಝಾವನ್ನು ಹೆಜಮಾಡಿ ಟೋಲ್‌ ಪ್ಲಾಝಾ ಜತೆ ವಿಲೀನ ಮಾಡುವ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಹೋಗಿದ್ದು ಕಾನೂನಾತ್ಮಕ ಸಮಸ್ಯೆಗಳು ಇರುವ ಕಾರಣ ಬಾಕಿಯುಳಿದಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಈಗಾಲೇ ಮೂರು ಸುತ್ತಿನ ಮಾತುಕತೆ ಗಳಾಗಿವೆ. ಆದರೆ ಕೆಲವು ಕಾನೂನಾತ್ಮಕ ಸಮಸ್ಯೆಗಳು ವಿಲೀನಕ್ಕೆ ಅಡ್ಡಿಯಾಗಿದ್ದು ಇದು ಬಗೆಹರಿಯಬೇಕಾಗಿದೆ ಎಂದರು.

60 ಕಿ.ಮೀ. ಅಂತರದಲ್ಲಿ ಟೋಲ್‌ ಇರಬೇಕು ಎಂಬ ನಿಯಮ ಪರಿಷ್ಕರಣೆಗೊಂಡಿದ್ದು ಅದಕ್ಕಿಂತ ಕಡಿಮೆ ದೂರದಲ್ಲೂ ಟೋಲ್‌ ಅಳವಡಿಸಲು ಅವಕಾಶ ಇದೆ. ಬ್ರಹ್ಮರಕೂಟ್ಲು-ಸುರತ್ಕಲ್‌ ನಡುವೆ ರಾಷ್ಟ್ರೀಯ ಹೆದ್ದಾರಿ ಯೋಜನಾ ವೆಚ್ಚ 383 ಕೋ. ರೂ. ಖರ್ಚು ಆಗಿದೆ. ಇದು ಸಂಗ್ರಹ ಆಗುವವರೆಗೂ ಸುರತ್ಕಲ್‌ ಟೋಲ್‌ ಇರಬೇಕಾಗು ತ್ತದೆ. ಸದ್ಯ 229 ಕೋಟಿ ರೂ. ಮಾತ್ರ ಸಂಗ್ರಹ ವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದರು.

ಜನರ ಆಗ್ರಹದ ಮೇರೆಗೆ ಸುರತ್ಕಲ್‌- ಹೆಜಮಾಡಿ ಟೋಲ್‌ಗ‌ಳನ್ನು ವಿಲೀನ ಮಾಡುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ. ರಾಜ್ಯದಿಂದಲೂ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ.ವಿಲೀನಕ್ಕೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದರು.

ಟೋಲ್‌ ಸಮಸ್ಯೆ ಗಡ್ಕರಿ ಗಮನಕ್ಕೆ ತರುವಂತೆ ಆಗ್ರಹ
ಸುರತ್ಕಲ್‌: ಸೋಮವಾರ ಜಿಲ್ಲೆಗೆ ಆಗಮಿಸುವ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಎನ್‌ಐಟಿಕೆ ಟೋಲ್‌ಗೇಟ್‌ ತೆರವು ಮಾಡುವ ಬಗ್ಗೆ ನೆನಪಿಸಿ ಎಂದು ಟೋಲ್‌ಗೇಟ್‌ ಹೋರಾಟ ಸಮಿತಿಯು ಸಂಸದ ನಳಿನ್‌ ಅವರನ್ನು ಆಗ್ರಹಿಸಿದೆ.

Advertisement

ಈ ಹಿಂದೆ ದಿಲ್ಲಿಯಲ್ಲಿ ನೀಡಿರುವ ಜಂಟಿ ಹೇಳಿಕೆಯ ವಿಚಾರವನ್ನು ಸಚಿವರ ಗಮನಕ್ಕೆ ತರುವ ಅಗತ್ಯವಿದೆ. ಹೇಳಿಕೆಯ ಬಳಿಕ ವಿಶೇಷ ಸಭೆ ನಡೆಯಲಿಲ್ಲ. ಬದಲಿಗೆ ಟೋಲ್‌ ದರ ದುಪ್ಪಟ್ಟಾಯ್ತು. ಬಸ್‌, ಲಾರಿಗಳ ರಿಯಾಯಿತಿ ಕಡಿತ ಆಯ್ತು. ಟೋಲ್‌ ಗೇಟ್‌ ಅಧಿಕೃತ ಎಂಬ ಬೋರ್ಡ್‌ ಅಳವಡಿಸಿದ್ದಾರೆ. ಸಂಸದರು ನೀಡಿರುವ ಮಾತನ್ನು ಉಳಿಸಿಕೊಳ್ಳುವ ಭರವಸೆಯನ್ನು ಜನತೆ ಹೊಂದಿದ್ದಾರೆ. ಹೆದ್ದಾರಿ ಅಧಿಕಾರಿಗಳ ಸಭೆ ಮಂಗಳೂರಿನಲ್ಲಿ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಸಮಿತಿ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next