Advertisement
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೂಡ್‌ವೇಸ್ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆ. ಇದರಲ್ಲಿ 300 ಜನ ಕೆಲಸ ಮಾಡುತ್ತಿದ್ದಾರೆ. ಐಎಸ್‌ಒ ಪ್ರಮಾಣ ಪತ್ರ ಪಡೆದಿದೆ. ಆದರೆ ಸಂಸ್ಥೆಯ ಹೆಸರು ಕೆಡಿಸಲು ಕೆಲವರು ಯತ್ನಿಸಿದ್ದು, ಈಗ ಅವರ ವಿರುದ್ಧ ದಾಖಲೆ ಸಹಿತ ಕಾನೂನು ಹೋರಾಟ ಮುಂದುವರಿಯಲಿದೆ ಎಂದೂ ಹೇಳಿದರು.
Related Articles
Advertisement
ಈಗ ಬಸವರಾಜ ನಂದಿಕೇಶ್ವರಮಠ ಹಾಗೂ ಅಜಯ್ ಭಟ್ ದೂರಿಗೆ ಲಗತ್ತಿಸಿದ ಪತ್ರ ನಕಲಿ. ಅವರು ಡಿಎಚ್‌ಒ ಕಚೇರಿ ಪತ್ರ, ಲೆಟರ್ ಹೆಡ್, ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಕಾರವಾರ, ದಾವಣಗೆರೆ ಡಿಎಚ್‌ಒ ಪತ್ರ ಬರೆದಿದ್ದಾರೆ. ಹಾಗೂ ನಂದಿಕೇಶ್ವರ ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಪತ್ರ ಸಹ ನಕಲಿ ಎಂದಾಗಿದೆ. ಶಿರಸಿ ಮಾರಿಕಾಂಬಾ ದೇವಸ್ಥಾನ ಲೆಟರ್ ಹೆಡ್ ಸಹ ಫೋರ್ಜರಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಇವರ ಮೇಲೆ ದೂರು ದಾಖಲಿಸಿದ್ದೇವೆ. ಅಲ್ಲದೆ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಕ್ರಿಮಿನಲ್ ಪ್ರಕರಣ ಸಹ ದಾಖಲಿಸಿದ್ದೇವೆ ಎಂದರು.
ನಾವು ಶಿರಸಿಯ ಬ್ಲಾಕ್‌ವೆುàಲ್ ತಂಡಕ್ಕೆ ಹೆದರುವುದಿಲ್ಲ. ಕಾನೂನಾತ್ಮಕ ಹೋರಾಟ ಹಾಗೂ ಪ್ರತಿಭಟನೆ ನಡೆಸುತ್ತೇವೆ. ನಾವು ಸರ್ಕಾರಿ ಸಂಸ್ಥೆ, ಸಂಘ ಸಂಸ್ಥೆ ಹಾಗೂ ಕಾರ್ಪೂರೇಟ್ ಸಂಸ್ಥೆಗಳ ಜೊತೆ ಕೆಲಸ ಮುಂದುವರಿಸಲಿದ್ದೇವೆ. ಫೋರ್ಜರಿ ಪತ್ರ ಬರೆದು, ಸಂಸ್ಥೆಯ ಹೆಸರು ಕೆಡಿಸುವುದು ಸರಿಯಲ್ಲ. ಇದು ಮುಂದುವರಿದರೆ, ಇಂತಹ ಕಿಡಗೇಡಿಗಳಿಗೆ ತೊಂದರೆ ಆಗಲಿದೆ ಎಂದು ಹೇಳಿದರು.
ಸ್ಕೂಡ್‌ವೇಸ್ ಯೋಜನಾಧಿಕಾರಿ ರಿಯಾಜ್ ಮಾತನಾಡಿ, ಸಂಸ್ಥೆ ಸಮಾಜ ಸೇವೆಯ ಜೊತೆಗೆ ಹಲವು ಉತ್ತಮ ಕೆಲಸ ಮಾಡಿದೆ. ಸಂಸ್ಥೆಯಲ್ಲಿ 300 ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಕಾರಣವೇ ಇಲ್ಲದೆ ಸಂಸ್ಥೆ ವಿರುದ್ಧ ಪಿತೂರಿ ಮಾಡುವುದು ಸರಿಯಲ್ಲ. ಸಂಸ್ಥೆಗೆ ಕೇಡು ಬಯಸಬಾರದು ಎಂದು ವಿನಂತಿಸಿದರು.
ಯೋಜನೆಗಳ ಮ್ಯಾನೇಜರ್ ಮಾಲತಿ ಕರ್ಕಿ ಮಾತನಾಡಿ, ಸ್ಕೂಡ್‌ವೇಸ್ ದಶಕಗಳಿಗೂ ಹೆಚ್ಚು ಕಾಲದಿಂದ ಜನರ ನಡುವೆ ಇದೆ. ಸಂಸ್ಥೆಯ ಕಾರ್ಯವೈಖರಿಯನ್ನು ಜನ, ಸರ್ಕಾರ ನೋಡಿದೆ. ಸ್ಕೂಡ್‌ವೇಸ್ ಯಶಸ್ವಿಯಾಗಿ ಜಾರಿ ಮಾಡಿದ ಯೋಜನೆಯನ್ನು ಮುಖ್ಯಮಂತ್ರಿ ರಾಜ್ಯವ್ಯಾಪಿ ಘೋಷಣೆ ಮಾಡಿದ್ದಾರೆ. ಇಂಥ ಸಂಸ್ಥೆ ಮೇಲೆ ಕಾರಣವೇ ಇಲ್ಲದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಸುಧೀರ್ ಶೆಟ್ಟಿ, ಪ್ರಜ್ಞಾ ಕುಮಾರ್ ಉಪಸ್ಥಿತರಿದ್ದರು.