Advertisement

ವಾಡಿಯಲ್ಲಿ ಕಾನೂನು ಜಾಗೃತಿ ಸಭೆ

07:00 AM Jun 21, 2020 | Suhan S |

ವಾಡಿ: ಗ್ರಹಣದ ನಿಮಿತ್ತ ಅನಾರೋಗ್ಯ ಮಕ್ಕಳನ್ನು ಭೂಮಿಯೊಳಗೆ ಹೂತಿಟ್ಟು ಮೌಢ್ಯಚರಣೆಗೆ ಮುಂದಾದರೆ, ಅಂತಹ ಪೋಷಕರ ವಿರುದ್ಧ ಮಕ್ಕಳ ಕೊಲೆ ಕೇಸ್‌ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ ಎಚ್ಚರಿಸಿದರು.

Advertisement

ರವಿವಾರ ಸೌರಮಂಡಲದಲ್ಲಿ ಸಂಭವಿಸಲಿರುವ ಸೂರ್ಯಗ್ರಹಣದ ಅಂಗವಾಗಿ ಸಾರ್ವಜನಿಕರು ನಡೆಸಬಹುದಾದ ಮೌಢ್ಯಚರಣೆ ಕುರಿತ ಕಾನೂನು ಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ವಿಕಲಚೇತನ ಮಕ್ಕಳ ಆರೋಗ್ಯ ಚೇತರಿಕೆಗೆ ರವಿವಾರದ ಸೂರ್ಯಗ್ರಹಣ ಪೂರಕ ಎಂದು ನಂಬುವ ಅನಕ್ಷರಸ್ಥ ಜನರು, ಅಂದು ವಿವಿಧ ರೀತಿಯ ಮೌಢ್ಯಚರಣೆಗೆ ಮುಂದಾಗುತ್ತಾರೆ. ನಾನಾ ರೋಗಕ್ಕೆ ತುತ್ತಾದ ಮಕ್ಕಳನ್ನು ಮಣ್ಣಿನಲ್ಲಿ ಅಥವಾ ಸೆಗಣಿಯಿಂದ ಆವರಿಸಿದ ತಿಪ್ಪೆ ಕಸದಲ್ಲಿ ಕುತ್ತಿಗೆವರೆಗೆ ಮಗುವನ್ನು ಹೂತಿಟ್ಟು ಸೂರ್ಯಗ್ರಹಣ ಅಂತ್ಯಕ್ಕಾಗಿ ಕಾಯುವ ಪೋಷಕರು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿದ್ದಾರೆ. ಅಂತಹ ಪ್ರಕರಣಗಳು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು. ಚಂದ್ರಸೇನ ಮೇನಗಾರ, ಬಾಬುಮಿಯ್ನಾ ಮಾತನಾಡಿ, ವಿಜ್ಞಾನ ಬೆಳೆಯುತ್ತಿದ್ದಂತೆ ಅಜ್ಞಾನ ಅಂಧವಿಶ್ವಾಸಗಳು ಬೆಳೆಯುತ್ತಿವೆ. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ಎಂಬುದು ನಿಸರ್ಗದ ಬದಲಾವಣೆಗಳಲ್ಲಿ ಇದೂ ಒಂದು. ಇದರಿಂದ ಭೂಮಿಯ ಮೇಲಿನ ಯಾವುದೇ ಜೀವಿಗೆ ಕೇಡೂ ಇಲ್ಲ ಶುಭವೂ ಇಲ್ಲ. ಮಾಟ, ಮಂತ್ರ, ತಂತ್ರ, ಕುತಂತ್ರಗಳನ್ನು ನಂಬಬೇಡಿ ಎಂದರು.

ಪುರಸಭೆ ಸದಸ್ಯ ಶರಣು ನಾಟೀಕಾರ, ಮುಖಂಡರಾದ ಇಂದ್ರಜಿತ್‌ ಸಿಂಗೆ, ಬಸವರಾಜ ಕೇಶ್ವಾರ, ಸಿದ್ದಯ್ಯಶಾಸ್ತ್ರೀ ನಂದೂರಮಠ, ನಾಗೇಂದ್ರ ಜೈಗಂಗಾ, ರಾಜಾ ಪಟೇಲ, ಮಹ್ಮದ್‌ ಬಾಬಾ, ಸುಭಾಷ ಸನಬಲ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next