ಬೆಳಗಾವಿ: ರೈತರನ್ನು ಭಯೋತ್ಪಾದಕರು ಎಂದು ಟೀಕಿಸಿರುವ ಚಿತ್ರ ನಟಿ ಕಂಗನಾ ರಾಣಾವತ್ ವಿರುದ್ಧ ಬೆಳಗಾವಿಯ ವಕೀಲ ಹರ್ಷವರ್ಧನ ಪಾಟೀಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಫೆ.6 ರಂದು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದರು.
ಕಂಗನಾ ರಾಣಾವತ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೇ ಅವರ ಟ್ವಿಟರ್ ಖಾತೆ ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ:ಉತ್ತರಾಖಂಡ ನೀರ್ಗಲ್ಲು ಸ್ಫೋಟ; 200 ಮಂದಿ ಜಲಸಮಾಧಿ? ಕೊಚ್ಚಿ ಹೋದ ರಸ್ತೆ, ಸೇತುವೆ
ದೇಶದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಆದರೆ ಅದು ದುರುಪಯೋಗ ಆಗಬಾರದು. ಕೇಂದ್ರ ದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಅವರನ್ನು ರೈತರಲ್ಲ. ದೇಶವನ್ನು ಒಡೆಯುವ ಭಯೋತ್ಪಾದಕರು ಎಂದು ಟೀಕೆ ಮಾಡಿರುವುದು ಖಂಡನೀಯ ಎಂದು ಹರ್ಷವರ್ಧನ ಪಾಟೀಲ್ ಹೇಳಿದರು.