Advertisement

ಲೆಫ್ಟ್‌-ರೈಟ್‌ ಧೋರಣೆ ಸರಿಯಲ್ಲ: ಖರ್ಗೆ

03:39 PM Mar 01, 2017 | Team Udayavani |

ವಾಡಿ: ಶೋಷಿತ ದಲಿತ ಜನರು ಲೆಫ್ಟ್‌-ರೈಟ್‌ ಎಂದು ಒಡೆದು ಹೋಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಇಬ್ಬರೂ ಶೋಷಿತರೇ ಎನ್ನುವುದನ್ನು ಅರಿತು ಡಾ| ಬಿ.ಆರ್‌. ಅಂಬೇಡ್ಕರ್‌, ಡಾ| ಬಾಬು ಜಗಜೀವನರಾಂ ಅವರಂತೆಸಮಾನತೆಗಾಗಿ ಒಗ್ಗಟ್ಟಿನಿಂದ ಹೆಜ್ಜೆ ಹಾಕಿ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಎಂ. ಖರ್ಗೆ ಹೇಳಿದರು. 

Advertisement

ಹಳಕರ್ಟಿ ಗ್ರಾಮದ ದಲಿತರ ಬಡಾವಣೆಯಲ್ಲಿಸ್ಥಾಪಿಸಲಾದ ಡಾ| ಬಾಬು ಜಗಜೀವನರಾಂ ಅವರ ಆರು ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬಾಬಾಸಾಹೇಬ ಮತ್ತುಬಾಬುಜೀ ಅವರ ವ್ಯಕ್ತಿತ್ವ ಚಿಂತನೆ ನಮಗೆ ಅಗತ್ಯವಿದೆ. ವ್ಯಕ್ತಿ ಪೂಜೆ ಅನಗತ್ಯ.

ಬಸವಣ್ಣ, ವಿವೇಕಾನಂದ ಹಾಗೂ ಮಹಮದಿ ಅವರನ್ನು ಒಂದೊಂದು ಸಮುದಾಯದ ಮಧ್ಯೆ ಕಟ್ಟಿ ಹಾಕಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಚಿತ್ತಾಪುರ ಮತಕೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಾಬು ಜಗಜೀವನರಾಂ ಭವನಗಳನ್ನು ನಿರ್ಮಿಸಲು 3.50 ಕೋಟಿ ರೂ. ಅನುದಾನ ತಂದಿದ್ದೇನೆ. 

ಹಳಕರ್ಟಿ ಹಳ್ಳಕ್ಕೆ ಸೇತುವೆ ನಿರ್ಮಿಸಲು 90 ಲಕ್ಷ ರೂ. ಮಂಜೂರಾಗಿದೆ. ಅಲ್ಲದೆ ರಾಜ್ಯ ಸರಕಾರ ಎಸ್‌ಸಿ-ಎಸ್‌ಟಿ ಬಜೆಟ್‌ನಲ್ಲಿ 19,500 ಕೋಟಿ ರೂ. ಮೀಸಲಿಟ್ಟಿದೆ.ಅನುದಾನ ಸರಿಯಾಗಿ ಬಳಕೆ ಮಾಡದ ಅಧಿಧಿಕಾರಿಗಳನ್ನು ಜೈಲಿಗೆ ಕಳಿಸುವ ಕಠಿಣ ಕಾನೂನು ಜಾರಿಗೆ ತರಲಾಗಿದೆ.

ಅನ್ನಭಾಗ್ಯದಂತಹ ಯೋಜನೆ ಬಡವರ ಹಸಿವು ನೀಗಿಸುತ್ತಿದೆ. ರಾಜ್ಯ ಸರಕಾರ ಅನೇಕ ಕೊಡುಗೆಗಳನ್ನು ಕೊಟ್ಟಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಸಂಸದ ಮಲ್ಲಿಕಾರ್ಜುನ ಖರ್ಗೆ ಒಳ್ಳೆ ಕೆಲಸ ಮಾಡಿಕೊಂಡು ಹೋಗುತ್ತಿರುವುದರಿಂದ ಜನ ಅವರನ್ನು ಆರಿಸಿ ಕಳುಹಿಸುತ್ತಿದ್ದಾರೆ.

Advertisement

ಅವರ ಮಗ ಪ್ರಿಯಾಂಕ್‌ ಖರ್ಗೆ ಕೂಡ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ರಾಜಕೀಯ ಬೇಧ ಮರೆತು ಬೆನ್ನು ತಟ್ಟಿದರಲ್ಲದೆ, ಚುನಾವಣೆಯಲ್ಲಿ ಎದುರಾ ಬದುರಾ ನಿಂತು ಕುಸ್ತಿ ಹಿಡಿಯೋಣ ಎಂದು ಹಾಸ್ಯ ಚಟಾಕಿ ಹಾರಿಸಿದರು. ಶ್ರೀ ಮುನೀಂದ್ರ ಸ್ವಾಮೀಜಿ, ಶ್ರೀ ರಾಜಶೇಖರ ಸ್ವಾಮೀಜಿ, ಶೇಖಶಹಾ ಗುಲಾಮ ಮಹಮ್ಮದ್‌ ಫತಿಯೋದ್ಧೀನ್‌ ಸಾನ್ನಿಧ್ಯ ವಹಿಸಿದ್ದರು.

ಶಾಸಕ  ಜಿ.ರಾಮಕೃಷ್ಣ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ರಾಜು ಮುಕ್ಕಣ್ಣ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಗೋವಿಂದ ಜಾಧವ, ಮುಖಂಡರಾದ ಭೀಮಣ್ಣ ಸಾಲಿ, ಟೋಪಣ್ಣಕೋಮಟೆ, ಮಹೆಮೂದ್‌ ಸಾಹೇಬ, ಜಗದೀಶ ಸಿಂಧೆ, ಅಜೀಜ್‌ ಸೇಠ ರಾವೂರ, ರವಿ ಚÌಹಾಣ, ಶ್ಯಾಮ ನಾಟೇಕರ ಪಾಲ್ಗೊಂಡಿದ್ದರು. ವೀರಭದ್ರ ಮಣಿಗೇರಿ ಸ್ವಾಗತಿಸಿದರು. ಗುರುನಾಥ ಮಣಿಗೇರಿ ನಿರೂಪಿಸಿದರು. ರಾಜು ಸುಗೂರ ವಂದಿಸಿದರು. ಏಕಲವ್ಯ ಹಾಗೂ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next