Advertisement

ಪ್ರೇಕ್ಷಕರ ಆಸನದಲ್ಲಿದ್ದ “ಬಿನ್‌ ಲಾಡೆನ್‌’ಗೆ ಗೇಟ್‌ಪಾಸ್‌!

09:41 PM Jun 25, 2020 | Sriram |

ಲೀಡ್ಸ್‌: ನಿಧನ ಹೊಂದಿ 9 ವರ್ಷಗಳ ಬಳಿಕ ಅಲ್‌ ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ಇಂಗ್ಲೆಂಡಿನ ಕ್ರೀಡಾಂಗಣವೊಂದರಲ್ಲಿ ಪ್ರತ್ಯಕ್ಷನಾದ ಸ್ವಾರಸ್ಯಕರ ಘಟನೆ ಇದು. ಕ್ರೀಡಾಂಗಣದ ಮುಖ್ಯಸ್ಥರಿಗೆ ಇದು ತಿಳಿಯುತ್ತಿದ್ದಂತೆಯೆ ಈ ಜಾಗತಿಕ ಉಗ್ರನಿಗೆ ಅಲ್ಲಿಂದ ಗೇಟ್‌ಪಾಸ್‌ ನೀಡಲಾಗಿದೆ.

Advertisement

ವಿಷಯ ಇಷ್ಟು…
ಕೋವಿಡ್ ದಿಂದ ಇಂಗ್ಲೆಂಡಿನ ಕ್ರೀಡಾಂಗಣಗಳಿಗೆ ವೀಕ್ಷಕರ ನಿಷೇಧ ವಿದೆ. ಈ ಕೊರತೆ ನೀಗಿಸುವ ಸಲುವಾಗಿ ಅನೇಕ ಇಂಗ್ಲಿಷ್‌ ಫ‌ುಟ್‌ಬಾಲ್‌ ಕ್ಲಬ್‌ಗಳು ತನ್ನ ಅಭಿಮಾನಿಗಳಿಂದ ಕಟೌಟ್‌, ಫೋಟೋ ಗಳನ್ನು ಆಹ್ವಾನಿ ಸಿತ್ತು. ಇದನ್ನು ಕ್ರೀಡಾಂಗಣದ ಕುರ್ಚಿಯಲ್ಲಿ ರಿಸಿ ಸ್ಟೇಡಿಯಂ “ಹೌಸ್‌ ಫ‌ುಲ್‌’ ಆಗಿ ರುವಂತೆ ತೋರಿಸುವುದು ಈ ಕ್ಲಬ್‌ಗಳ ಉದ್ದೇಶ.

“ಲೀಡ್ಸ್‌ ಯುನೈಟೆಡ್‌’ ಕೂಡ ಇಂಥದೇ ಯೋಜನೆಗೆ ಮುಂದಾ ದಾಗ ಎಡವಟ್ಟೊಂದು ಸಂಭವಿಸಿತು. ಇಲ್ಲಿನ ಆಸನವೊಂದರ ಮೇಲೆ ಒಸಾಮ ಬಿನ್‌ ಲಾಡೆನ್‌ನ ಕಟೌಟ್‌ ಕೂಡ ಕಂಡುಬಂತು. ಇದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದಾಗ ಲೀಡ್ಸ್‌ ಯುನೈಟೆಡ್‌ ಎಚ್ಚೆತ್ತಿತು. ಕೂಡಲೇ ಲಾಡೆನ್‌ ಕಟೌಟನ್ನು ಕಿತ್ತೆಸೆಯಿತು. ಇನ್ನು ಇಲ್ಲಿ ಇಂಥ ಅಪರಾಧಿಗಳ ಚಿತ್ರ ಗಳಿಲ್ಲ ಎಂಬುದಾಗಿ ಅದು ಹೇಳಿದೆ.

ಆಸ್ಟ್ರೇಲಿಯದಲ್ಲೂ…
ಇತ್ತೀಚೆಗೆ ಆಸ್ಟ್ರೇಲಿಯದಲ್ಲೂ ಹೀಗೆಯೇ ಆಗಿತ್ತು. ನ್ಯಾಶನಲ್‌  ಲೀಗ್‌ ಪಂದ್ಯವೊಂದರ ವೇಳೆ ಬ್ರಿಟನ್ನಿನ ಸರಣಿ ಹಂತಕ ಹ್ಯಾರೋಲ್ಡ್‌ ಶಿಪ್‌ಮನ್‌ ಕಟೌಟ್‌ ಒಂದು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಇದನ್ನು ಕಿತ್ತೆಸೆಯಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next