Advertisement
ಉತ್ನಾಳ ಗ್ರಾಮದ ವೀರಯೋಧ ಕಾಶೀನಾಥ ಕಲ್ಲಪ್ಪ ತಳವಾರ ಎಂಬ ಯೋಧನ ಶವ ಆಂಬ್ಯುಲೆನ್ಸ್‌ನಲ್ಲಿ ಸೋಮವಾರ ಬೆಳಗ್ಗೆ ತವರೂರಿಗೆ ಆಗಮಿಸುತ್ತಲೇ ಉತ್ನಾಳ ಮಾತ್ರವಲ್ಲ ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸಂಖ್ಯ ಜನರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಮನೆ ಮಾಡಿದ್ದ ಸ್ಮಶಾನ ಮೌನ ಕಾಶೀನಾಥ ಅವರ ಕಳೆಬರ ಕಾಣುತ್ತಲೇ ಕಣ್ಣೀರ ಕೋಡಿಯ ಸ್ಪೋಟವಾಗಿತ್ತು. ಮನೆಗೆ ಆಸರಾಗಿದ್ದ ಮಗ ರಾಷ್ಟ್ರಧ್ವಜ ಹೊದ್ದು ಮಲಗಿದ್ದನ್ನು ಕಂಡು ತಾಯಿ ಬಸವ್ವ, ಅಪ್ಪ ಕಲ್ಲಪ್ಪ, ಒಡಹುಟ್ಟಿದವರ ರೋಧನ ಮುಗಿಲು ಮುಟ್ಟಿತ್ತು. ಪತಿ ತನ್ನನ್ನು ಅಗಲಿದ ಸುದ್ದಿ ತಿಳಿದ ದಿನದಿಂದಲೇ ಇಬ್ಬರು ಮುಗ ಮಕ್ಕಳನ್ನು ಕಟ್ಟಿಕೊಂಡು ಭವಿಷ್ಯ ಕಳೆಯುವ ಚಿಂತೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಗರಬಡಿದವರಂತೆ ಕಂಗಾಲಾಗಿ ಕುಳಿತಿದ್ದರು.
Related Articles
Advertisement
ಬಳಿಕ ಪತಿಯ ಶವದ ಬಳಿ ಬಂದ ವಿಜಯಲಕ್ಷ್ಮಿ ಅವರು ಕಂಬನಿಯನ್ನು ಕಣ್ಣಲ್ಲಿ ಅರಳಿಸಿಕೊಂಡು ಶಲ್ಯೂಟ್ ಹೊಡೆಯುತ್ತಲೇ ನೆರೆದವರು ಹೃದಯಗಳು ಕಲಕಿ ಹೋದವು. ಪುಟ್ಟ ಮಕ್ಕಳು ಅಪ್ಪನಿಗೆ ಅಂತಿಮ ದರ್ಶನ ಹಾಗೂ ವಿದಾಯ ಹೇಳುವಾಗ ಮಕ್ಕಳನ್ನು ಕಂಡ ಜನರು ಅಯ್ಯೋ ವಿಯೇ ಎಂದು ಶಪಿಸುತ್ತಿದ್ದರು.
ಕರುಳ ಕುಡಿಯನ್ನು ಕಳೆದುಕೊಂಡ ಅಪ್ಪ, ಅವ್ವ ಅವರೂ ಧೀರ ಮಗನಿಗೆ ಅಂತಿಮ ಶಲ್ಯೂಟ್ ಮಾಡಿದರೆ, ಅಣ್ಣ-ಮ್ಮಂದಿರು, ಅಕ್ಕ-ತಂಗಿಯರು, ಬಂಧುಗಳು ಕೂಡ ಅಂತಿಮ ದರ್ಶನ ಪಡೆಯುವಾಗ ಆಕ್ರಂದ ಮುಗಿಲು ಮುಟ್ಟಿತ್ತು.
ನಂತರ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಪುಷ್ಟನಮನ ಸಲ್ಲಿಸಿದರು. ಕಾಶೀನಾಥ ಅವರಿಗೆ ಜಿಲ್ಲೆಯ ಹಲವು ಕಡೆಗಳಿಂದ ಆಗಮಿಸಿದ್ದ ಜನರು ಊರ ಜನರೊಂದಿಗೆ ಸೇರಿ ಅಂತಿಮ ದರ್ಶನ ಪಡೆದರು. ಬಳಿಕ ಯೋಧ ಕಾಶೀನಾಥ ಅವರು ತವರಿನ ಶಾಲಾ ಆವರಣದಲ್ಲಿ ಪಂಚಭೂಗಳಲ್ಲಿ ಲೀನವಾಗಿ, ಶಾಸ್ವತ ನಿದ್ರೆಗೆ ಜಾರಿದರು.
ಜಿ.ಎಸ್.ಕಮತರ