Advertisement

ಸಿಹಿ ಸುದ್ದಿ; ಆಮದು ಸುಂಕ ಕಡಿತ- ಎಲ್ ಇಡಿ, ಎಲ್ ಸಿಡಿ ಟಿವಿ ಬೆಲೆ ಭಾರೀ ಇಳಿಕೆಯಾಗಲಿದೆ

08:48 AM Sep 19, 2019 | Team Udayavani |

ನವದೆಹಲಿ: ಟಿವಿ ಖರೀದಿಸುವ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಟಿವಿ ಪ್ಯಾನಲ್ ನ ಅತ್ಯಂತ ಪ್ರಮುಖ ಭಾಗವಾದ ಓಪನ್ ಸೆಲ್ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಶೇ.5ರಷ್ಟು ಕಡಿತಗೊಳಿಸಿದೆ. ಈ ನಿರ್ಧಾರದಿಂದ ಎಲ್ ಇಡಿ ಮತ್ತು ಎಲ್ ಸಿಡಿ ಟಿವಿಗಳ ಬೆಲೆ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ, ಓಪನ್ ಸೆಲ್ (ಟಿವಿ ಪ್ಯಾನಲ್ ನ ಅತ್ಯಂತ ಪ್ರಮುಖ ಭಾಗ 15.6 ಇಂಚು ಅಥವಾ ಅದಕ್ಕಿಂತ ಹೆಚ್ಚಿನ)ನ ಮೇಲಿನ ಆಮದು ಸುಂಕ ಕಡಿತಗೊಳಿಸಲಾಗಿದೆ. ಇದರಿಂದ ಎಲ್ ಇಡಿ ಮತ್ತು ಎಲ್ ಸಿಡಿ ಟೆಲಿವಿಷನ್ ತಯಾರಿಸುವವರಿಗೆ ಓಪನ್ ಸೆಲ್ ಪ್ಯಾನಲ್ ಕಡಿಮೆ ದರದಲ್ಲಿ ಬಳಸಲು ಹೆಚ್ಚಿನ ಅನುಕೂಲವಾಗಲಿದ್ದು, ದೇಶೀಯ ಉತ್ಪಾದನೆಗೆ ಒತ್ತು ಕೊಟ್ಟಂತಾಗುತ್ತದೆ ಎಂದು ವಿವರಿಸಿದೆ.

ಓಪನ್ ಸೆಲ್ ಟಿವಿ ಪ್ಯಾನಲ್ ಗಳ ಉತ್ಪಾದನೆಯಲ್ಲಿ ಬಳಸಲಾಗುವ ಫಿಲ್ಮ್ ಗಳ ಚಿಪ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ(ಪಿಸಿಬಿಎ) ಮತ್ತು ಸೆಲ್ ಗಳ ಮೇಲಿನ ಆಮದು ಸುಂಕವನ್ನು ಮನ್ನಾ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

2017ರಲ್ಲಿ ಕೇಂದ್ರ ಸರಕಾರ ಇಂತಹ ಪ್ಯಾನಲ್ ಗಳ ಆಮದಿನ ಮೇಲೆ ಶೇ.5ರಷ್ಟು ಆಮದು ಸುಂಕ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಟೆಲಿವಿಷನ್ ತಯಾರಕರು ಸರಕಾರ ಆಮದು ಸುಂಕವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next