Advertisement

ಸೇವಾ ಭದ್ರತೆಗೆ ಉಪನ್ಯಾಸಕರ ಆಗ್ರಹ

04:04 PM Jul 08, 2020 | Suhan S |

ಬೆಳಗಾವಿ: ರಾಜ್ಯದ 412 ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಸೇವಾ ಭದ್ರತೆ ನೀಡಬೇಕು ಎಂದು ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ರಾಜು ಕಂಬಾರ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ 14546 ಅತಿಥಿ ಉಪನ್ಯಾಸಕರು ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿಯೊಂದಿಗೆ ನೆಟ್‌, ಸೆಟ್‌, ಪಿ.ಎಚ್‌.ಡಿ, ಎಂμಲ್‌ ವಿದ್ಯಾರ್ಹತೆಗಳನ್ನು ಪಡೆದಿದ್ದಾರೆ. 10 ರಿಂದ 20 ವರ್ಷಗಳ ಸೇವಾಅನುಭವವಿದ್ದರೂ ರಾಜ್ಯ ಸರಕಾರ ಇದುವರೆಗೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಯೋಚಿಸುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಕೋವಿಡ್  ಆತಂಕದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಜೀವನ ಅಧೋಗತಿಗೆ ಇಳಿದಿದೆ. ಕೆಲವು ಅತಿಥಿ ಉಪನ್ಯಾಸಕರು ಮಾನಾಭಿಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಸರಕಾರ ತುರ್ತಾಗಿ ಅತಿಥಿ ಉಪನ್ಯಾಸಕರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ ವಾರ ಘೋಷಿಸಿದ ಮಾದರಿಯಲ್ಲಿ ಸೇವಾ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪಶ್ವಿ‌ಮ ಬಂಗಾಳದಲ್ಲಿ 2019ರ ಜುಲೈ13 ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಅತಿಥಿ, ಅರೆಕಾಲಿಕ, ಗುತ್ತಿಗೆ ಉಪನ್ಯಾಸಕರಿಗೆ ಸೇವಾ ಭದ್ರತೆ ಅನ್ವಯವಾಗಲಿದ್ದು, ಈ ನಿಯಮವು ಜನೆವರಿ 1, 2020 ರಿಂದ ಜಾರಿಯಾಗಿದೆ 60 ವರ್ಷ ತುಂಬುವವರೆಗೆ ಸೇವಾ ಭದ್ರತ  ಇರುತ್ತದೆ. ಪ್ರತಿ ವರ್ಷ ಜುಲೆ„ 1 ರಂದು ಮಾಸಿಕ ವೇತನ ಶೇ 3 ರಷ್ಟು ಹೆಚ್ಚಳವಾಗಲಿದೆ. ಇದೇ ಮಾದರಿಯಲ್ಲಿ ಕನಾಟಕ ಸರಕಾರವು ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಯೋಜನೆಯನ್ನು ಘೋಷಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಮೂಲಕ ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next