Advertisement

ಲೆಬನಾನ್‌: ಆತಿಥ್ಯೋದ್ಯಮ ಮುಳುಗುತ್ತಿದೆಯೇ?

05:06 PM May 08, 2020 | mahesh |

ಲೆಬನಾನ್‌: ಕೋವಿಡ್‌-19 ಜಗತ್ತಿನಾದ್ಯಂತ ಹಲವು ಉದ್ಯಮಗಳನ್ನು ಸಂಕಷ್ಟದಲ್ಲಿಟ್ಟಿವೆ. ಇನ್ನು ಕೆಲವು ಉದ್ಯಮಗಳು ಮತ್ತು ಕ್ಷೇತ್ರಗಳನ್ನು ಮರು ರೂಪುಗೊಳಿಸುತ್ತಿದೆ. ವಿಶೇಷವಾಗಿ ಆತಿಥ್ಯೋದ್ಯಮ ಯಾವ ರೀತಿ ಪುನರ್‌ ರೂಪ ಪಡೆಯಬಹುದು ಎಂಬುದು ತಕ್ಷಣಕ್ಕೆ ಗೋಚರಿಸುತ್ತಿಲ್ಲ.

Advertisement

ಹೆಚ್ಚಾಗಿ ಹೋಟೆಲ್‌ಗ‌ಳು, ಪ್ರವಾಸಿ ತಾಣಗಳೂ ಜನಸಂದಣಿ ಪ್ರದೇಶಗಳು. ಹಾಗಾಗಿಯೇ ಅವು ಒಂದು ಬಗೆಯಲ್ಲಿ ಸೋಂಕು ಹರಡಲು ಹೆಚ್ಚಿಗೆ ಅವಕಾಶ ಕೊಡುವ ಕೇಂದ್ರಗಳಾಗಿಯೂ ಈಗ ಪರಿಗಣಿತವಾಗಿರುವುದು. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿದರೂ ಹೋಟೆಲ್‌ಗ‌ಳಿಗೆ, ಪ್ರವಾಸಿ ತಾಣಗಳ ಕಾರ್ಯ ನಿರ್ವಹಣೆಗೆ ಇನ್ನೂ ನಿಷೇದ ಮುಂದುವರಿಸಿವೆ.

ಇದೇ ಈಗ ಚರ್ಚೆಗೀಡಾಗುತ್ತಿರುವುದು. ಲೆಬನಾನ್‌ ನಂಥ ಪ್ರದೇಶಗಳಲ್ಲಿ ಇಂದು ಹೋಟೆಲ್‌ ಉದ್ಯಮವು ತೀರಾ ಸಂಕಷ್ಟದಲ್ಲಿದೆ. ಇದುವರೆಗಿನ ಯಾವ ಆರ್ಥಿಕ ಕುಸಿತವೂ ಇಂಥದೊಂದು ಸ್ಥಿತಿ ನಿರ್ಮಿಸಿರಲಿಲ್ಲ. ಈ ಬಾರಿಯ ಪರಿಸ್ಥಿತಿಯೇ ತೀರಾ ಭಿನ್ನವಾದುದು. ಈ ಹೊತ್ತು ಹೊಂದಿಕೊಳ್ಳುವುದು ಹೊರತುಪಡಿಸಿದಂತೆ ಬೇರೆ ಯಾವುದಕ್ಕೂ ಸೂಕ್ತವಲ್ಲ ಎಂಬುದು ಸ್ಥಳೀಯ ಉದ್ಯಮಿಯೊಬ್ಬರ ಅಭಿಪ್ರಾಯ. ಅಲ್‌ಜಜೀರಾ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಇಡೀ ದೇಶ ಇದುವರೆಗೆ ಕಾಣದಂಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಲಾಕ್‌ಡೌನ್‌ ಆ ಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿದೆ.

ಹಲವಾರು ರೆಸ್ಟೋರೆಂಟ್‌ಗಳು ಪಾರ್ಸೆಲ್‌ ಮೂಲಕ ಹಾಗೂ ಮನೆಗಳಿಗೆ ಆಹಾರ ವಿತರಣೆಯ ಪ್ರಯತ್ನವನ್ನೂ ನಡೆಸಿವೆ. ಎತೆಗೆ ಕೆಲವು ಹೋಟೆಲ್‌ಗ‌ಳು ಕೇವಲ ರಾತ್ರಿಯ ಸೇವೆಗೇ ನಿಯೋಜಿತ ವಾದವೂ ಸಹ ಈಗ ಹಗಲು ಸೇವೆಯನ್ನೂ ಆರಂಭಿಸಿವೆ. ಒಟ್ಟೂ ಖರ್ಚು ನಿರ್ವಹಣೆಗಾಗಿ ಆಹಾರ ವೈವಿಧ್ಯದ ಪಟ್ಟಿಯಲ್ಲೂ ಕೆಲವನ್ನು ಕಡಿತಗೊಳಿಸಲಾಗಿದೆ. ಹೊರಗಿನಿಂದ ಬರುವಂಥ (ಆಮದು) ಆಹಾರ ವಸ್ತುಗಳ ಬೆಲೆ ದುಬಾರಿಯಾದ ಕಾರಣ, ಅವುಗಳಿಗೆೆ ಸ್ಥಳೀಯವಾಗಿಯೇ ಪರ್ಯಾಯ ಮೂಲಗಳನ್ನು ಕಂಡುಕೊಳ್ಳಲಾಗಿದೆ. ಆ ಮೂಲಕ ಖರ್ಚನ್ನು ಮಿತಗೊಳಿಸಲು ಯೋಚಿಸಲಾಗುತ್ತಿದೆ. ಶೇ. 60 ರಷ್ಟು ಸಂಪನ್ಮೂಲಗಳಿಗೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿವೆ.

ಬೀರಟ್‌ ನಗರದ ದೃಶ್ಯವನ್ನೇ ತೆಗೆದುಕೊಳ್ಳುವುದಾದರೆ, ಸದಾ ಕಾರುಗಳಿಂದ ತುಂಬಿರುತ್ತಿದ್ದ ನಗರ. ಈಗಿನ್ನೂ ಸಹಜ ಸ್ಥಿತಿಗೆ ಮರಳಲು ಯತ್ನಿಸುತ್ತಿದೆ. ರಸ್ತೆಗಳೆಲ್ಲಾ ಕಾರುಗಳಿಂದ, ಜನರಿಂದ ತುಂಬಿ ತುಳುಕುವುದನ್ನು ನಿರೀಕ್ಷಿಸಲಾಗುತ್ತಿದೆ.  ಮಾರ್ಚ್‌ 15ರಿಂದಲೇ ಆಂಶಿಕ ಲಾಕ್‌ಡೌನ್‌ ಜಾರಿಯಾದ ಕೂಡಲೇ ಎಲ್ಲ ರೆಸ್ಟೋರೆಂಟ್‌ಗಳು ಸರ್ವಿಸ್‌ ವಲಯವನ್ನು ಮುಚ್ಚಿದವು. ಈಗ ಹಲವು ರೆಸ್ಟೋರೆಂಟ್‌ಗಳು ಪುನರಾರಂಭ ಮಾಡುವುದರ ಬಗ್ಗೆಯೇ ಯೋಚಿಸುತ್ತಿವೆ, ಅದಕ್ಕಾಗಿಯೇ ಹರಸಾಹಸ ಪಡುತ್ತಿವೆ. ಇನ್ನು ಕೆಲವು ಶಾಶ್ವತವಾಗಿ ಮುಚ್ಚುವ ಹಂತದಲ್ಲಿವೆ ಎಂಬುದುಉದ್ಯಮವಲಯದ ಅಭಿಪ್ರಾಯ.

Advertisement

ಲೆಬನಾನ್‌ನಲ್ಲಿ ಅಕ್ಟೋಬರ್‌ನಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡವು. ಆ ಸಂದರ್ಭದಲ್ಲೇ ಉಂಟಾದ ಪರಿಸ್ಥಿತಿಯಿಂದ ಆರಂಭವಾದವು. ಅಂದಿನಿಂದ ಇಂದಿನವರೆಗೆ 800 ಕ್ಕೂ ಹೆಚ್ಚು ಹೋಟೆಲ್‌ಗ‌ಳು ಮುಚ್ಚಿವೆ. ಅಕ್ಟೋಬರ್‌ನಿಂದ ಜನವರಿವರೆಗೆ ಸುಮಾರು 25 ಸಾವಿರ ಮಂದಿ ಉದ್ಯೋಗ ಕಳೆದುಕೊಂಡರು. ಸುಮಾರು 1. 50 ಲಕ್ಷ ಮಂದಿಗೆ ಉದ್ಯೋಗ ನೀಡಿರುವ ಈ ವಲಯದಲ್ಲಿ ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಕಡಿಮೆ ಲಾಭದ ಪ್ರಶ್ನೆ ಬಿಟ್ಟು ಬಿಡಬೇಕು. ಹೋಟೆಲ್‌ ಉದ್ಯಮದಲ್ಲಿ ಹೆಚ್ಚು ವಹಿವಾಟು ನಡೆದರೆ, ಸ್ವಲ್ಪ ಲಾಭ ಮಾಡಿಕೊಳ್ಳಬಹುದೇ ಹೊರತು, ಸ್ವಲ್ಪ ವ್ಯವಹಾರ ಮಾಡಿ ಲಾಭ ಮಾಡಿಕೊಳ್ಳಲು ಆಗದು. ಅದೇ ನಮ್ಮನ್ನು ಮುಳುಗಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಉದ್ಯಮಿಗಳು.

Advertisement

Udayavani is now on Telegram. Click here to join our channel and stay updated with the latest news.

Next