Advertisement
ಆದರೆ, ಅದರ ಬದ ಲಾಗಿ ರೈತ ಸಮುದಾಯ, ಉದ್ಯಮಿಗಳು, ಹಿರಿ ಯರು, ಬಡ, ಮಧ್ಯಮ ವರ್ಗದ ಜನರು, ಗರ್ಭಿಣಿ ಯರಿಗೆ ನೆರವಾಗುವ ಹಲವು ಯೋಜನೆಗಳನ್ನು ಪ್ರಕಟಿಸಿದರು. ಉತ್ತರ ಪ್ರದೇಶ ಸಹಿತ ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟನೆಗೆ ಕ್ಷಣ ಗಣನೆ ಆರಂಭವಾಗಿರು ವಾಗಲೇ ಪ್ರಕಟಿಸಲಾದ ಈ ಯೋಜನೆಗಳು “ಮಿನಿ ಬಜೆಟ್’ ರೂಪದಲ್ಲಿದ್ದು, ಗ್ರಾಮೀಣ ಮತ್ತು ಬಡ ಜನರ ಮತಬುಟ್ಟಿಗಳ ಮೇಲೆ ಕಣ್ಣಿಟ್ಟೇ ಘೋಷಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
Related Articles
Advertisement
ಶ್ಲಾಘನೆ: ನೋಟು ಅಪಮೌಲ್ಯದ ವೇಳೆ ಬ್ಯಾಂಕ್ ಮತ್ತು ಅಂಚೆ ಇಲಾಖೆಯ ಸಿಬಂದಿಯ ಶ್ರಮವನ್ನು ಶ್ಲಾಷಿಸಿದ ಮೋದಿ, ಕೆಲವು ಅಧಿಕಾರಿಗಳಿಂದಾಗಿ ಬ್ಯಾಂಕ್‌ಗಳಿಗೆ ಕೆಟ್ಟ ಹೆಸರು ಬಂದಿತು. ಅಂಥವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ. ಅದೇ ರೀತಿಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತೆ ಮುಂದಿನ ಕೆಲವು ದಿನಗಳಲ್ಲಿ ಹಳೆಯ ಸ್ಥಿತಿಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಹೊಸ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಕಾಲಿಡೋಣ ಎಂದು ಹೇಳಿದರು.
ವಿಪಕ್ಷಗಳಿಗೆ ಸಲಹೆ: ಇದೇ ವೇಳೆ ನೈತಿಕವಾಗಿಯೇ ನಾವೇ ಇತರರೆಲ್ಲರಿಗಿಂತ ಪರಿಶುದ್ಧರು ಎಂಬ ಭಾವನೆ ಯನ್ನು ಕೈಬಿಟ್ಟು ವಿಪಕ್ಷಗಳು, ಆಡಳಿತದಲ್ಲಿ ಸುಧಾರಣೆ, ಕಪ್ಪು ಹಣ ನಿಗ್ರಹದ ಸರಕಾರದ ಯತ್ನಕ್ಕೆ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ಒಮ್ಮೆಲೆ ಚುನಾವಣೆ: ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸುವ ದಿಕ್ಕಿನಲ್ಲಿ ನಾವು ಸಾಗಬೇಕಿದೆ. ಈ ದಿಶೆಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಯಾರಿಗೆ ಏನೇನು? ರೈತರಿಗೆ
ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಸೊಸೈಟಿ ಗಳಿಂದ ಹಿಂಗಾರು ಕೃಷಿ ಸಾಲ ಪಡೆದ ರೈತರಿಗೆ ಅಪಮೌಲ್ಯ ಯೋಜನೆ ಜಾರಿಯಲ್ಲಿದ್ದ 2 ತಿಂಗಳ ಅವಧಿಗೆ ಸಾಲದ ಮೇಲಿನ ಬಡ್ಡಿ ಮನ್ನಾ, ಸರಕಾರದಿಂದಲೇ ಬಡ್ಡಿ ಭರಿಕೆ (ಇದು ವಾಣಿಜ್ಯ ಬ್ಯಾಂಕ್‌ನಲ್ಲಿನ ಹಿಂಗಾರು ಕೃಷಿ ಸಾಲಕ್ಕೆ ಅನ್ವಯ ಇಲ್ಲ) ಮುಂದಿನ 3 ತಿಂಗಳಲ್ಲಿ 3 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ರುಪೇ ಕಾರ್ಡ್ ಗಳನ್ನಾಗಿ ಪರಿವರ್ತನೆ. ಈ ಮೂಲಕ ಎಲ್ಲೆಡೆ ಕಾರ್ಡ್ ಬಳಕೆಗೆ ಅವಕಾಶ ಮನೆ ಕಟ್ಟಲು
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ, ದುರಸ್ತಿ, ವಿಸ್ತರಣೆ ಯೋಜನೆಗಳಿಗೆ ಪಡೆ ಯುವ 2 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ. 3 ರಷ್ಟು ಬಡ್ಡಿ ರಿಯಾಯಿತಿ ನಗರ ಪ್ರದೇಶಗಳಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಜಾರಿ. ಇದರಡಿ ಮನೆ ನಿರ್ಮಿಸುವವರಿಗೆ 9 ಲಕ್ಷ ರೂ. ವರೆಗೆ ಪಡೆಯುವ ಸಾಲಕ್ಕೆ ಶೇ. 4ರಷ್ಟು ಮತ್ತು 12 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ. 3ರಷ್ಟು ಬಡ್ಡಿ ರಿಯಾಯಿತಿ. ಸಣ್ಣ ಉದ್ಯಮ
ಸಣ್ಣ ಉದ್ಯಮಗಳಿಗೆ ನೀಡುವ ನಗದು ಸಾಲ ಮಿತಿಯನ್ನು ಶೇ. 20ರಿಂದ ಶೇ.25ಕ್ಕೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಸೂಚನೆ ಸಣ್ಣ ಉದ್ಯಮಿಗಳಿಗೆ ಖಾತರಿ ರಹಿತವಾಗಿ ನೀಡುವ ಸಾಲದ ಪ್ರಮಾಣ 1 ಕೋಟಿ ರೂ. ನಿಂದ 2 ಕೋಟಿ ರೂ.ಗೆ ಏರಿಕೆ ಹಿರಿಯ ನಾಗರಿಕರು
10 ವರ್ಷದ ಅವಧಿಗೆ 7.5 ಲಕ್ಷ ರೂ. ಠೇವಣಿ ಇಡುವವರಿಗೆ ಕನಿಷ್ಠ ಶೇ. 8 ಬಡ್ಡಿ ಗರ್ಭಿಣಿಯರಿಗೆ
ಗರ್ಭಿಣಿಯರಿಗೆ ವೈದ್ಯಕೀಯ ವೆಚ್ಚ ಭರಿಸಲು ಬ್ಯಾಂಕ್ ಖಾತೆಗೆ ನೇರವಾಗಿ 6,000 ರೂ. ಜಮೆ