Advertisement
ಸರಕಾರದ ನಿಯಂತ್ರಣದಲ್ಲಿ ದೇವಸ್ಥಾನಗಳು ಅಕ್ಷರಶಃ ಅವನತಿ ಹೊಂದುತ್ತಿವೆ. ಬ್ರಿಟಿಷ್ ಆಡಳಿತ ಮತ್ತು ಇಸ್ಲಾ ಮಿಕ್ ಆಕ್ರಮಣ-ಆಡಳಿತಗಳ ಸಮಯದಲ್ಲಿ ಆದ ನಷ್ಟ ವನ್ನು ಅಳೆಯಲು ಆಗುವುದಿಲ್ಲ. ಆದರೆ ಸ್ವತಂತ್ರ ಭಾರತದಲ್ಲಿ ಆದ ನಷ್ಟವೇ ಅಪಾರವಾಗಿದೆ. ನಮ್ಮಿಂದಲೇ ಆರಿಸಲ್ಪಟ್ಟ ಸರಕಾರಗಳು ದೇವಸ್ಥಾನಗಳ ಉಸಿರುಗಟ್ಟಿಸುತ್ತಿವೆ.
Related Articles
Advertisement
ಕಾಳಜಿ ಇಲ್ಲದವರು ದೇವಸ್ಥಾನಗಳನ್ನು ನಿರ್ವಹಿಸ ಬಾರದು: ಇವೆಲ್ಲ ನಿಲ್ಲಬೇಕೆಂದರೆ ದೇವಸ್ಥಾನಗಳನ್ನು ಕಾಳಜಿ ಯಿಂದ ನೋಡಿಕೊಳ್ಳುವ, ಅದನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪರಿಗಣಿಸುವವರ ಕೈಗೆ ನೀಡಬೇಕು. ನಾವು ಮಾತನಾಡುತ್ತಿರುವುದು ದೇವಸ್ಥಾನದ ಪಾವಿತ್ರ್ಯದ ಬಗ್ಗೆ. ದೇವಸ್ಥಾನಕ್ಕಾಗಿ ಯಾರ ಹೃದಯ ಮಿಡಿಯುವುದಿ ಲ್ಲವೋ ಅವರು ದೇವಸ್ಥಾನಗಳನ್ನು ನಿರ್ವಹಿಸಲಾರರು ಎನ್ನುವುದು ಸ್ಪಷ್ಟ. ಜನರ ಜೀವನದ ಆಧ್ಯಾತ್ಮಿಕ ವಿಷಯಗಳಲ್ಲಿ ಯಾವುದೇ ರೀತಿಯಲ್ಲಿ ಮೂಗು ತೂರಿಸುವುದು ಸರಕಾರದ ಕೆಲಸವಲ್ಲ. ಇದು ವ್ಯಕ್ತಿಗತ ವಿಷಯವಾಗಿದ್ದು ಸಮುದಾಯಗಳಿಂದ ನಿರ್ವಹಿಸಲ್ಪಡಬೇಕು. ಅಲ್ಲದೇ, ಎಚ್ ಆರ್ ಆ್ಯಂಡ್ ಸಿಇ ಅಧಿಕಾರಿಗಳು ಚಿನ್ನ ಹಾಗೂ ಮೂರ್ತಿಗಳನ್ನು ಕದ್ದು ವಿದೇಶಕ್ಕೆ ಮಾರಿದ ಆರೋಪಕ್ಕೆ ಒಳಗಾಗಿದ್ದಾರೆ. ಕೆಲವು ವರ್ಷ ಗಳ ಹಿಂದೆ ವಿಗ್ರಹವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿ, ಅದನ್ನು ಅವರು ಹಿಂದಿರುಗಿಸಿದರು. ವಿದೇಶಿ ಅಧಿಕಾರಿ ಗಳಿಗೂ ಕೂಡ ಈ ಕಲಾಕೃತಿಗಳ ಬಗ್ಗೆ ಆದರವಿದೆ, ಆದರೆ ನಮ್ಮದೇ ಅಧಿಕಾರಿಗಳ ಔದಾಸೀನ್ಯ ವಿಷಾದನೀಯ.
ಶತಮಾನಗಳ ಹಿಂದೆ ಈ ದೇಶದಲ್ಲಿ ಧಾರ್ಮಿಕ ಘರ್ಷಣೆಯಾದ ಇತಿಹಾಸವಿದೆ. ನಮ್ಮ ದೇಶದ ಮೇಲೆ ಪರಕೀಯರು ದಾಳಿ ಮಾಡಿದಾಗ, ಅವರ ಮತದಲ್ಲಿ ಮೂರ್ತಿಪೂಜೆ ಅಪಚಾರವಾಗಿದ್ದರಿಂದ ದೇವಸ್ಥಾನಗಳು ಇರ ಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾ ಗಿ ಅನೇಕ ದೇವಸ್ಥಾನಗಳನ್ನು ನಾಶಮಾಡಿದರು.
ಈಗ ಅನ್ಯಧರ್ಮೀಯರು ಅಧಿಕಾರಕ್ಕೆ ಬಂದರೆ, ಇದೆಲ್ಲ ದೇವರಲ್ಲ, ದೇವಸ್ಥಾನಗಳು ಇರಬಾರದು ಎಂಬುದು ಅವರ ನಂಬಿಕೆಯಾಗಿದ್ದರೆ, ಅವರು ದೇಗುಲಗಳ ಉತ್ತಮ ನಿರ್ವಹಣೆ ಮಾಡುವರು ಎಂದು ನಿರೀಕ್ಷಿಸುವುದು ಹೇಗೆ?ಸರಕಾರದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕಮಿ ಷನರ್ ಅಥವಾ ಯಾವುದೇ ಅಧಿಕಾರಿಯ ಆಯ್ಕೆಯನ್ನು ಮತಧರ್ಮದ ಆಧಾರದ ಮೇಲೆ ನಿರ್ಧರಿಸಲಾಗದು, ಏಕೆಂದರೆ, ಇದು ಪ್ರಜಾಪ್ರಭುತ್ವ, ಜಾತ್ಯತೀತ ಪ್ರಕ್ರಿಯೆ. ಅವರು ಯಾವ ಮತಧರ್ಮವನ್ನು ಅನುಸರಿಸುತ್ತಾರೆ ಅನ್ನುವುದರ ಬಗ್ಗೆ ನಮಗೆ ಸಮಸ್ಯೆ ಇಲ್ಲ. ಯಾರು ಬೇಕಾದರೂ ಐಎಎಸ್ ಅಧಿಕಾರಿಯಾಗಿ ಒಂದು ಸ್ಥಾನವನ್ನು ವಹಿಸಬಹುದು. ಅದರಿಂದ ಏನೂ ಸಮಸ್ಯೆಯಿಲ್ಲ. ಆದರೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಪ್ರಕ್ರಿಯೆಯು ಅವರಿಂದ ನಿರ್ವಹಿಸಲ್ಪಡಬಾರದು. ದೇವಸ್ಥಾನಗಳ ಖಾಸಗೀಕರಣ ಮತ್ತು ಬಾಹ್ಯ ಲೆಕ್ಕ ಪರಿಶೋಧನೆಗೆ ಒಂದು ಆಯೋಗ 1947ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೋದಾಗ, ದೇವ ಸ್ಥಾನಗಳು – ಮತ್ತು ದೇಶದ ಇನ್ನೂ ಹಲವಾರು ವಿಷಯ ಗಳು – ಶೋಚನೀಯ ಸ್ಥಿತಿಯಲ್ಲಿದ್ದವು. ಅವುಗಳನ್ನು ಪುನರ್ ರಚಿಸುವ ಕಾರ್ಯದಲ್ಲಿ, ಬಹುಶಃ ದೇವಸ್ಥಾನಗಳ ಆಡಳಿತವನ್ನು ಸ್ವಲ್ಪ ಸಮಯ ಸರಕಾರ ನೋಡಿಕೊಳ್ಳುವುದು ಅನಿವಾರ್ಯ ಎಂದು ಅನಿಸಿರಬೇಕು. ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತನಾಲ್ಕು ವರ್ಷದ ಅನಂತರ, ಇದನ್ನು ಸರಿಪಡಿಸಿ, ಭಕ್ತರಿಗೆ ಹಿಂದಿರುಗಿಸುವ ಸಮಯ ಬಂದಿದೆ. ಸಮುದಾಯವು ದೇವಸ್ಥಾನಗಳನ್ನು ನಿರ್ವಹಿಸುವ ಬಗ್ಗೆ ಸರಕಾರವು ಮಾನದಂಡಗಳನ್ನು ನಿಗದಿಪಡಿಸಬಹುದು. ಯಾರಾದರೂ ದೇವಸ್ಥಾನದಲ್ಲಿ ದುರ್ವ್ಯವಹಾರ ಮಾಡಿದರೆ, ಅದಕ್ಕೆ ಅದಾಗಲೇ ಕಾನೂನುಗಳಿವೆ. ಆದರೆ ಸರಿಯಾದ ನಿರ್ವಹಣೆಯಿಲ್ಲ ಎಂಬ ಆಧಾರದ ಮೇಲೆ ಸರಕಾರವೇ ದೇವಸ್ಥಾನಗಳ ಆಡಳಿತ ವಹಿಸುವುದು ಸಂಕುಚಿತ ದೃಷ್ಟಿಯಾಗುತ್ತದೆ. ಹಲವು ಕಡೆಗಳಿಂದ ನನಗೆ ಈ ಪ್ರಶ್ನೆಯನ್ನು ಕೇಳಲಾಗುತ್ತಿದೆ, “ಹಿಂದೂ ಸಮುದಾಯವು ದೇವಸ್ಥಾನಗಳನ್ನು ಚೆನ್ನಾಗಿ ನಿರ್ವಹಿಸುತ್ತದೆಯೇ?” ಇದರ ಹಿಂದಿನ ಕಲ್ಪನೆ ಏನೆಂದರೆ – ತಮಿಳುನಾಡಿನ ಎಂಬತ್ತೇಳು ಪ್ರತಿಶತ ಜನರಿಗೆ, ತಮಗೆ ಅಮೂಲ್ಯವಾದುದನ್ನು ನಿರ್ವಹಿಸುವ ಸಾಮರ್ಥ್ಯ, ನಿಷ್ಠೆ ಮತ್ತು ಬಾಧ್ಯತೆಯಿಲ್ಲ, ಆದರೆ ಬೇರೆ ಯಾರಿಗೋ ಅದು ಇದೆ. ಇದು ಹಾಸ್ಯಾಸ್ಪದ. ತಮಿಳುನಾಡು ಸರಕಾರವು ತೆಗೆದುಕೊಳ್ಳಬೇಕಾದ ಒಂದು ಹೆಜ್ಜೆಯೆಂದರೆ, ದೇವಸ್ಥಾನಗಳನ್ನು ಸಾರ್ವಜನಿಕರಿಗೆ ಹಿಂತಿರುಗಿಸುವ ಖಾಸಗೀಕರಣ ಪ್ರಕ್ರಿಯೆಯು ಹೇಗೆ ನಡೆಯಬೇಕು ಎಂದು ನಿರ್ಧರಿಸಲು ಒಂದು ಆಯೋಗವನ್ನು ಸ್ಥಾಪಿಸಬೇಕು. ಎರಡನೆಯದಾಗಿ, ಬಾಹ್ಯ ಲೆಕ್ಕ ಪರಿಶೋಧನೆಯನ್ನು ನಡೆಸಬೇಕು (ಸಮುದಾಯವು ಅದರ ವೆಚ್ಚ ಭರಿಸಬೇಕು). ಈ ಪರಿಶೋಧಕರು, ದೇವಸ್ಥಾನಕ್ಕಾಗಿರುವ ಹಾನಿ, ದೇವಸ್ಥಾನದ ಭೂಮಿಯ ಅತಿಕ್ರಮಣ, ದೇವಸ್ಥಾನದ ಜಾಗದಲ್ಲಿ ಜನರು ಕಟ್ಟಿರುವ ಕಾನೂನುಬಾಹಿರ ಕಟ್ಟಡಗಳು – ಇವೆಲ್ಲವನ್ನೂ ಲೆಕ್ಕ ಹಾಕಬೇಕು. ಈ ಕಟ್ಟಡಗಳನ್ನು ಒಡೆಯಿರಿ ಎಂದು ನಾವು ಹೇಳುತ್ತಿಲ್ಲ. ಆದರೆ, ಆ ಜಾಗವನ್ನು ಬಳಸುತ್ತಿರುವವರು, ಇಂದಿನ ಮೌಲ್ಯದ ಪ್ರಕಾರ ಬಾಡಿಗೆ ನೀಡಬೇಕು ಅಥವಾ ಖರೀದಿಸಬೇಕು. ಸುಮಾರು ಐದು ಲಕ್ಷ ಎಕರೆಗಳು ರಾಜ್ಯದ 44,000 ದೇವಸ್ಥಾನಗಳಿಗೆ ಸೇರಿದುದಾಗಿದೆ. ಎಕರೆಗೆ ಕೇವಲ ಐದು ರೂಪಾಯಿ ಬಾಡಿಗೆಯಿರುವ ಹಲವು ಜಾಗಗಳು ನನಗೆ ಗೊತ್ತಿದೆ, ಆದರೆ ಹಲವು ದಶಕ ಗಳಿಂದ ಅದನ್ನೂ ಪಾವತಿಸಲಾಗಿಲ್ಲ. ಸರಿಯಾದ ಬಾಡಿಗೆ ಅಥವಾ ಖರೀದಿ ಮೌಲ್ಯವನ್ನು ಪೂರ್ಣವಾಗಿ ಪಾವತಿಸಿದರೆ, ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲು ಅದೇ ಸಾಕಾಗುತ್ತದೆ. – ಸದ್ಗುರು