ಆರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿರುಗೇಟು ನೀಡಿದರು.
Advertisement
ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿಜೆಪಿ ಪ್ರಭಾವಿ ಮುಖಂಡ ಮೇಸ್ತ್ರೀ ಶ್ರೀನಿವಾಸ್ ಮತ್ತು ಅವರಬೆಂಬಲಿಗರನ್ನು ಸ್ವಾಗತಿಸಿ ಮಾತನಾಡಿ, ಜನರು ಇವರು ಏನೋ ಮಾಡುವರೆಂದು ನಂಬಿ ಮತನೀಡಿ ಗೆಲ್ಲಿಸಿದರು. ಆದರೆ, ಎರಡು ವರ್ಷ
ವಾದರೂ ಅವರ ಸಾಧನೆ ಮಾತ್ರ ಏನೂ ಇಲ್ಲ, ಬರೀ ಬಾಯಿಚಪಲಕ್ಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿರುವ ನನ್ನ ಬಗ್ಗೆ ಲಘುವಾಗಿ
ಮಾತನಾಡುತ್ತ, ಕಲಹರಣ ಮಾಡುತ್ತಿದ್ದಾರೆ. ಈ ಸಮಯವನ್ನುಅಭಿವೃದ್ಧಿ ಕಡೆ ತೋರಿದರೆ ಉತ್ತಮ ಎಂದು ಹೇಳಿದರು.
Related Articles
ಕೋವಿಡ್ ಹೆಸರಲ್ಲಿ ಹಣ ಲಪಟಾಯಿಸಿದ್ದೇ ಸಾಧನೆಯಾಗಿದೆ. ಇದರಿಂದ ಜನರು ಬೇಸತ್ತಿದ್ದು, ಸಾಲು ಸಾಲಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
ಮೇಸ್ತ್ರೀ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದ ಕಾರಹಳ್ಳಿ ಗ್ರಾಪಂನಲ್ಲಿ ಇನ್ನು ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು. ಸಮಾಜ ಸೇವಕ ಪ್ರವೀಣ್, ಮೇಸ್ತ್ರೀ ಶ್ರೀನಿವಾಸ್, ಮುಖಂಡರಾದ ಎಚ್.ಕೆ. ನಾರಾಯಣ ಸ್ವಾಮಿ, ಚಿನ್ನಿವೆಂಕಟೇಶ್, ಶ್ರೀನಿವಾಸ್, ರಂಗರಾಮಯ್ಯ ಮತ್ತಿತರರು ಹಾಜರಿದ್ದರು.
ಅವ್ಯವಹಾರ ಬಯಲಿಗೆ ತರಲಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಕೆ.ಚಂದ್ರಾರೆಡ್ಡಿ ಮಾತನಾಡಿ, ಸಂಸದರು ಶಾಸಕರ ಬಗ್ಗೆ ಬರೀ ಬುಟ್ಟಿಯಲ್ಲಿ ಹಾವಿದೆ ಎಂದು ಹೇಳುವರೆ ವಿನಃ, ಯಾವತ್ತೂ ಹಾವನ್ನು ತೋರಿಸಿಲ್ಲ,ಶಾಸಕರ ಒತ್ತುವರಿ ಮತ್ತು ಅವ್ಯವಹಾರಗಳ ಬಗ್ಗೆ ಪದೇ ಪದೆ ಹೇಳುವರೇ ವಿನಃ ಅವರದ್ದೇ ಸರ್ಕಾರ ವಿದೆ, ತನಿಖೆ ಮಾಡಿಸಿ ಬಯಲಿಗೆ ತರಲಿ ಎಂದು ಸವಾಲು ಹಾಕಿದರು.