Advertisement
ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ ದಿವಂಗತ ನ್ಯಾಯಮೂರ್ತಿ ವಿ.ಎಸ್.ಮಳೀಮs… ಹೆಸರಿನಲ್ಲಿ ಆರಂಭಿಸಿರುವ ತುರ್ತು ಚಿಕಿತ್ಸೆಗಾಗಿ ಉಚಿತ ಆ್ಯಂಬುಲೆನ್ಸ್ ಸೇವೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳೀಮs… ಚಾಲನೆ ನೀಡಿದರು.
Related Articles
Advertisement
ಹಾಗಾಗಿ ಆ್ಯಂಬುಲೆನ್ಸ್‌ನಲ್ಲಿ ಸಕಾಲದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೆ ಅಮೂಲ್ಯ ಜೀವಗಳು ಬದುಕುಳಿಯುವ ಸಾಧ್ಯತೆ ಶೇ.70ರಿಂದ ಶೇ.80ರಷ್ಟಿರುತ್ತದೆ. ಹಾಗಾಗಿ ರೋಗಿಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳನ್ನು ಹಿಂಬಾಲಿಸದೆ ಆ್ಯಂಬುಲೆನ್ಸ್‌ಗೆ “ದಾರಿ ಬಿಡಿ ಜೀವ ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಯಾವುದೇ ಆಸ್ಪತ್ರೆಗೆ ತೆರಳಿ: ಈ ಹಿಂದೆ ಅಂದರೆ 2015ರಲ್ಲಿ ಮಣಿಪಾಲ್ ಆ್ಯಂಬುಲೆನ್ಸ್ ರೆಸ್ಪಾನ್ಸ್ ಸರ್ವಿಸ್ (ಎಂಎಆರ್‌ಎಸ್) ಸೇವೆ ಆರಂಭಿಸಲಾಗಿತ್ತು. ಸದ್ಯ ಬೆಂಗಳೂರಿನಲ್ಲಿ ಆಸ್ಪತ್ರೆಯ 26 ಆ್ಯಂಬುಲೆನ್ಸ್‌ಗಳಿದ್ದು, ಇದರಲ್ಲಿ 18 ಮಿನಿ ಐಸಿಯು ಸೌಲಭ್ಯ ಹೊಂದಿದ್ದರೆ ಉಳಿದ 8 ಸಾಧಾರಣ ಆ್ಯಂಬುಲೆನ್ಸ್‌ಗಳಾಗಿವೆ. ಅಪಘಾತ ಇಲ್ಲವೇ ಹೃದಯಾಘಾತ ಇತರೆ ಸಮಸ್ಯೆ ಕಾಣಿಸಿಕೊಂಡಾಗ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಪಡೆಯಬಹುದು. ಮಣಿಪಾಲ್ ಆಸ್ಪತ್ರೆಯಲ್ಲದೆ ಸಮೀಪದ ಯಾವುದೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಆ್ಯಂಬುಲೆನ್ಸ್ ಸೇವೆ ಪಡೆಯಬಹುದು ಎಂದು ಡಾ.ಸುದರ್ಶನ ಬಲ್ಲಾಳ್ ಹೇಳಿದರು.
ಐಸಿಯು ವ್ಯವಸ್ಥೆ: ಗಾಯಾಳು ಇಲ್ಲವೇ ರೋಗಿಗೆ ಆ್ಯಂಬುಲೆನ್ಸ್‌ನಲ್ಲೇ ಐಸಿಯು ವ್ಯವಸ್ಥೆಯಡಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಘಟಕದಲ್ಲಿನ ತಜ್ಞರು ನಿರಂತರವಾಗಿ ಆ್ಯಂಬುಲೆನ್ಸ್‌ನಲ್ಲಿರುವ ಅರೆವೈದ್ಯ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಜತೆಗೆ ನಂತರದ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ರೋಗಿ ಆಸ್ಪತ್ರೆ ತಲುಪುತ್ತಿದ್ದಂತೆ ತುರ್ತು ಚಿಕಿತ್ಸೆ ಕೊಡಲು ನೆರವಾಗಲಿದೆ.
ಆಸ್ಪತ್ರೆಗೆ ಕರೆ ಮಾಡಿ ಉಚಿತ ಆ್ಯಂಬುಲೆನ್ಸ್ ಬಳಸಿಕೊಳ್ಳಬಹುದು. ತುರ್ತು ಚಿಕಿತ್ಸೆಗಷ್ಟೇ ಉಚಿತ ಸೇವೆ ಪಡೆಯಬೇಕೆ ಹೊರತು ದುಬಳìಕೆ ಮಾಡಿಕೊಳ್ಳಬಾರದು. ಬೆಂಗಳೂರು ಮಾತ್ರವಲ್ಲದೇ ಮಂಗಳೂರು, ವಿಜಯವಾಡದಲ್ಲೂ ಈ ಸೇವೆ ಆರಂಭಿಸಲು ಚಿಂತಿಸಲಾಗಿದೆ ಎಂದು ಡಾ.ಸುದರ್ಶನ ಬಲ್ಲಾಳ್ ತಿಳಿಸಿದರು.
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಿಇಒ ದಿಲೀಪ್ ಭೋಸ್ ಮಾತನಾಡಿ, ಸಂಸ್ಥೆಯು ಮೂರು ವರ್ಷದ ಹಿಂದೆಯೇ “ಎಂಎಆರ್‌ಎಸ್’ ಸೇವೆಗೆ ಚಾಲನೆ ನೀಡಿದ್ದು, ಈವರೆಗೆ 12,000ಕ್ಕೂ ಹೆಚ್ಚು ಮಂದಿಗೆ ತುರ್ತು ಚಿಕಿತ್ಸೆಗೆ ಸ್ಪಂದಿಸಲಾಗಿದೆ. ಮುಂದೆಯೂ ಅಮೂಲ್ಯ ಜೀವ ಉಳಿಸುವುದಕ್ಕಾಗಿ ಉಚಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಮಣಿಪಾಲ್ ಆಸ್ಪತ್ರೆಗಳ ಸಮೂಹ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರಸ್ವಾಮಿ ಉಪಸ್ಥಿತರಿದ್ದರು.
ಅಸ್ವಸ್ಥಗೊಂಡವರು, ಗಾಯಾಳುಗಳನ್ನು ಕರೆದೊಯ್ಯುವ ಆ್ಯಂಬುಲೆನ್ಸ್‌ಗೆ ದಾರಿ ಕೊಡುವ ಸಂವೇದನೆಯನ್ನು ಪ್ರತಿಯೊಬ್ಬ ವಾಹನ ಸವಾರರು, ಚಾಲಕರು ಬೆಳೆಸಿಕೊಳ್ಳಬೇಕು. ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಸಂಸ್ಥೆಯು ಈ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನದ ಜತೆಗೆ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿರುವುದು ಸ್ವಾಗತಾರ್ಹ.-ಶ್ರದ್ಧಾ ಶ್ರೀನಾಥ್, ನಟಿ