Advertisement
ಖಾರ್ಕಿವ್‌ನಿಂದ 11 ಕಿ.ಮೀ. ದೂರದಲ್ಲಿ ರುವ ಪಿಸೋಚಿನ್, 12 ಕಿ.ಮೀ.ದೂರದ ಬಬಾಯಿ ಮತ್ತು 16 ಕಿ.ಮೀ. ದೂರದಲ್ಲಿನ ಬೆಜ್ಲಿ ದಿವ್ಕಾಗೆ ತೆರಳುವಂತೆ ಭಾರತೀಯ ವಿದ್ಯಾರ್ಥಿಗ ಳಿಗೆ ಸೂಚಿಸಲಾಗಿದೆ. ರಷ್ಯಾ ಕಡೆಯಿಂದ ಬಂದ ಇನ್ನಷ್ಟು ದಾಳಿಯ ಸಂದೇಶದ ಹಿನ್ನೆಲೆಯಲ್ಲಿ ಈ ಅಲರ್ಟ್ ನೀಡಲಾಗಿದೆ. ನಿಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ನೀವು ಈ ಕೂಡಲೇ ಖಾರ್ಕಿವ್ ಬಿಟ್ಟು ಹೊರಡಬೇಕು. ಪರಿಸ್ಥಿತಿ ತೀರಾ ಹದಗೆಟ್ಟಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊರಡಿ ಎಂದು ಹೇಳಲಾಗಿದೆ.
ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಮೊಟಕುಗೊಳಿಸಿದ ಖ್ಯಾತ ಗ್ಲೋಬಲ್ ಬ್ರಾಂಡ್‌ಗಳ ಪಟ್ಟಿಗೆ ಈಗ ಆ್ಯಪಲ್, ನೈಕ್ ಹಾಗೂ ಗೂಗಲ್ ಸಂಸ್ಥೆಗಳು ಸೇರಿವೆ. ಆ್ಯಪಲ್ ಪೇ ಹಾಗೂ ಆ್ಯಪಲ್ ಮ್ಯಾಪ್ ಆ್ಯಪ್ಲಿಕೇಷನ್‌ಗಳ ಸೇವೆಯನ್ನು ಸೀಮಿತಗೊಳಿಸಲಾಗಿದೆ. ನೈಕ್ ಕಂಪೆನಿ, ರಷ್ಯಾದಲ್ಲಿ ತನ್ನ ಉತ್ಪಾದನೆಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡುವ ಸೌಲಭ್ಯವನ್ನು ಮೊಟಕುಗೊಳಿಸಿದೆ. ಇನ್ನು, ಗೂಗಲ್ ಸಂಸ್ಥೆಯು ತನ್ನ ವೆಬ್‌ಪುಟಗಳಲ್ಲಿ ಬಿತ್ತರವಾಗುತ್ತಿದ್ದ ರಷ್ಯಾದ ಎಲ್ಲ ಕಂಪೆನಿಗಳ ಜಾಹೀರಾತು ಅಥವಾ ಫೀಚರ್‌ಗಳನ್ನು ತೆಗೆದುಹಾಕಿದೆ.