ಮುಂಬಯಿ: ಹೈದರಾಬಾದ್ ವಿರುದ್ಧದ ಗುರುವಾರದ ಪಂದ್ಯದ ವೇಳೆ ಡೇವಿಡ್ ವಾರ್ನರ್ ಅವರಿಗೆ ಶತಕ ದಾಖಲಿಸುವ ಎಲ್ಲ ಅವಕಾಶಗಳಿದ್ದವು. ಆದರೆ ಇನ್ನಿಂಗ್ಸ್‌ನ ಕೊನೆಯ ಎರಡು ಓವರ್ ಗಳಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಲಭಿಸದ ಕಾರಣ ಶತಕ ದಾಖಲಿಸಲು ಅವರಿಂದ ಸಾಧ್ಯವಾಗಲಿಲ್ಲ.
ಇದೇ ವೇಳೆ ಅವರು ದೊಡ್ಡ ಹೊಡೆತಗಳಿಗೆ ಹೆಚ್ಚಿನ ಗಮನ ನೀಡಿ ಮತ್ತು ನನ್ನ ಶತಕದ ಬಗ್ಗೆ ಚಿಂತೆ ಮಾಡಬೇಡಿ ಎಂದು ತನ್ನ ಜತೆಗಾರ ಪೊವೆಲ್ ಅವರಲ್ಲಿ ಹೇಳಿದ್ದರು. ಈ ಮೂಲಕ ಅವರು ಕ್ರೀಡಾಸ್ಫೂರ್ತಿ ಮೆರೆದರು.
ಪಂದ್ಯದ ಬಳಿಕ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉಲ್ಲಾಸದಿಂದ ಪ್ರತಿಕ್ರಿಯೆ ನೀಡಿದ ವಾರ್ನರ್ ಶತಕ ಪೂರ್ತಿಗೊಳಿಸಲು ಕೆಲಸವನ್ನು ಜಾಸ್ ಬಟ್ಲರ್ ಅವರಿಗೆ ಬಿಡುತ್ತೇನೆ. ಅವರು ಶತಕ ಸಿಡಿಸಿ ರನ್ನುಗಳನ್ನು ಪೇರಿಸುತ್ತಿದ್ದಾರೆ ಎಂದರು.
ನಾನು ರನ್ ಗಳಿಸಿದ್ದರಿಂದ ಮಕ್ಕಳು ಕೂಡ ಸಂತೋಷಗೊಂಡಿರಬೇಕು ಎಂದು ವಾರ್ನರ್ ಹೇಳಿದ್ದಾರೆ. ಮಕ್ಕಳು ನಿದ್ರೆಯಲ್ಲಿರಬಹುದು. ಆದರೆ ಅವರು ಸಂತೋಷಗೊಂಡಿರಬೇಕು. ಆದರೆ ನನಗೆ ಇನ್ನೂ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಜೀಬೀಸ್ ಆದು ನಿಜ. ಶತಕ ದಾಖಲಿಸುವ ಕೆಲಸವನನ್ನು ಜಾಸ್‌ಗೆ ಬಿಡುತ್ತೇನೆ ಎಂದವರು ಹೇಳಿದ್ದಾರೆ.