Advertisement

ಕುಷ್ಟಗಿ:  ಹೆಜ್ಜೇನು ದಾಳಿ ಸಂಭವ: 6 ರಿಂದ 9 ತರಗತಿಗಳಿಗೆ ರಜೆ ಘೋಷಣೆ

09:36 AM Feb 23, 2022 | Team Udayavani |

ಕುಷ್ಟಗಿ: ತಾಲೂಕಿನ ತಳವಗೇರಾ ಆದರ್ಶ ವಿದ್ಯಾಲಯ ಹೆಜ್ಜೇನು ದಾಳಿ ಸಂಭಾವ್ಯದ ಹಿನ್ನೆಲೆಯಲ್ಲಿ ಸೋಮವಾರ 6 ರಿಂದ 9 ತರಗತಿಗಳಿಗೆ ರಜೆ ಘೋಷಿಸಲಾಗಿದೆ.

Advertisement

ಕುಷ್ಟಗಿ ತಾಲೂಕಿನ ತಳವಗೇರಾ ಆದರ್ಶ ವಿದ್ಯಾಲಯದ ಮೇಲಂತಸ್ತಿನ ಕಟ್ಟಡಕ್ಕೆ ಹೆಜ್ಜೇನು ಗೂಡು ಕಟ್ಟಿದೆ. ಹೆಜ್ಜೇನು ಹಾರಾಟದ ವೇಳೆ ಓರ್ವ ವಿದ್ಯಾರ್ಥಿ ಸೇರಿದಂತೆ ಅಡುಗೆಯವರಿಗೂ ಕಚ್ಚಿವೆ. ಹೀಗಾಗಿ ಸದರಿ ಹೆಜ್ಜೇನು ಗೂಡನ್ನು ಸ್ಥಳೀಯರ ಸಹಾಯದಿಂದ ಮಂಗಳವಾರ ರಾತ್ರಿ ಸುಡಲಾಗಿದೆ. ಅರೆ ಬರೆಯಾಗಿದ್ದ ಹೆಜ್ಜೇನು ಗೂಡು ಸುಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಪುನಃ ದಾಳಿ ಮಾಡುವ ಅಪಾಯ ಅರಿತ ಬೋಧಕವರ್ಗ ಸೋಮವಾರ 6 ರಿಂದ 9 ನೇ ತರಗತಿ ರಜೆ ಘೋಷಿಸಲಾಗಿದೆ.

ಈ ಕುರಿತು ಮಾತನಾಡಿದ ಪ್ರಾಚಾರ್ಯ ಸಂಗಪ್ಪ ಕಿರೇಸೂರು ಅವರು, ಉದಯವಾಣಿ ಯೊಂದಿಗೆ ಮಾತನಾಡಿ, ಕಳೆದೆರೆಡು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಹಜ್ಜೇನು ಕಾಟವಿದೆ. ಈ ಗೂಡನ್ನು ತೆರವುಗೊಳಿಸಿದರೂ ಪುನಃ ಗೂಡು ಕಟ್ಟುತ್ತಿವೆ. ಹೆಜ್ಜೇನು ಹುಳುಗಳು ವಿದ್ಯಾರ್ಥಿಗಳಿಗೆ ಕಚ್ಚುತ್ತಿದ್ದು ಇದಕ್ಕೆ ಪರಿಹಾರಕ್ಕಾಗಿ ಗೂಡು ತೆರವುಗೊಳಿಸಿದ್ದರೂ ಪುನಃ ಅದೇ ಸ್ಥಳದಲ್ಲಿ ಗೂಡು ಕಟ್ಟುತ್ತಿವೆ. ಜೇನು ಸಾಕಾಣಿಕೆಯವರನ್ನು ಕರೆಯಿಸಿ ಶಾಶ್ವತ ತೊಂದರೆ ನಿವಾರಣೆಗೆ ಯೋಜಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next