Advertisement

ಬಿಜೆಪಿ ತೊರೆದು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ

10:12 AM May 24, 2022 | Team Udayavani |

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ ನಂ. 35ರ ಗಾಜೀಪುರ ಹಾಗೂ ಸುತ್ತಮುತ್ತಲಿನ ಬಡಾವಣೆಯ ನಾಗರಿಕರು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷಕ್ಕೆ ಭಾರತಿಯ ಜನತಾ ಪಕ್ಷ (ಬಿಜೆಪಿ) ತೊರೆದು ಅನೇಕರು ಸಿದ್ದು ಪಾಟೀಲ (ತೇಗನೂರ) ಸಮ್ಮುಖದಲ್ಲಿ ಸಚಿನ್‌ ಕೋಗನೂರು ನೇತೃತ್ವದಲ್ಲಿ ಸೇರ್ಪಡೆಗೊಂಡರು.

Advertisement

ಸೋಮವಾರ ಗಾಜೀಪುರದ ಅಂಬಾಭವಾನಿ ದೇವಸ್ಥಾನ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ (ತೇಗನೂರ) ಮಾತನಾಡಿ, ಅಧಿಕಾರದಲ್ಲಿ ಇರುವ ಪಕ್ಷ ಹಾಗೂ ವಿರೋಧ ಪಕ್ಷಗಳೆರಡು ಜನತೆಗೆ ಮೋಸ ಮಾಡುತ್ತಿವೆ. ಸಾರ್ವಜನಿಕರಿಗೆ ಬೇಕಾಗಿರುವ ಸ್ವಚ್ಛ ನೀರು, ನಿರಂತರ ವಿದ್ಯುತ್‌, ಉತ್ತಮ ಶಿಕ್ಷಣ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿವೆ. ಮುಂದಿ ದಿನಗಳಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಹಾಗೂ ಪಂಜಾಬ ಮಾದರಿಯಲ್ಲಿ ಪಾರದರ್ಶಕತೆಯ ಆಡಳಿತ ನೀಡಲು ಸಾರ್ವಜನಿಕರು ಸ್ವಇಚ್ಛೆಯಿಂದ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಅರವಿಂದ ಹಿರೇಮಠ, ಪ್ರತೀಕ್‌, ಸಾಗರ, ತೋಟೇಂದ್ರ, ಪ್ರಶಾಂತ ಕಿರಣ ರಾಠೊಡ, ಮೊಹಿಶಿನ್‌, ವಸಂತ, ಬಂಧು ಮತ್ತು ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next