Advertisement

ಟೆಸ್ಟ್‌ನಿಂದ ಜೀವನದ ಪಾಠ ಕಲಿಯಬಹುದು: ಗೇಲ್‌

05:04 PM Jun 23, 2020 | mahesh |

ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟ್‌ ಬದುಕಿನ ಪಾಠವನ್ನು ಕಲಿಸುತ್ತದೆ.ಅದಕ್ಕಿಂತ ಸವಾಲಿನ ಮಾದರಿ ಮತ್ತೂಂದಿಲ್ಲ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಆಟಗಾರ ಕ್ರಿಸ್‌ ಗೇಲ್‌ ಹೇಳಿದ್ದಾರೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಓಪನ್‌ ನೆಟ್ಸ್‌’ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಯಂಕ್‌ ಅಗರ್ವಾಲ್‌ ಜತೆ ಮಾತನಾಡಿರುವ ಗೇಲ್‌ ಐದು ದಿನಗಳ ಕಾಲ ಆಡುವುದು ತಮಾಷೆಯ ಮಾತಲ್ಲ. ಟೆಸ್ಟ್‌ ಮಾದರಿಯಿಂದ ಶಿಸ್ತು ಮತ್ತು ಸಂಯಮದ ಪಾಠ ಕಲಿಯಬಹುದು. ಜೀವನದಲ್ಲೂ ಇವುಗಳನ್ನು ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.

Advertisement

ಸಂಕಷ್ಟದ ಪರಿಸ್ಥಿತಿಯನ್ನು ಮೀರಿ ನಿಲ್ಲುವುದು ಹೇಗೆ ಎಂಬುದನ್ನೂ ಟೆಸ್ಟ್‌ ಕ್ರಿಕೆಟ್‌ ಹೇಳಿಕೊಡುತ್ತದೆ. ತಮ್ಮಲ್ಲಿರುವ ಕೌಶಲಗಳನ್ನು ಪರೀಕ್ಷಿಸಿಕೊಳ್ಳಲು ಯುವ ಆಟಗಾರರಿಗೆ ಈ ಮಾದರಿಯು ಸಹಕಾರಿಯಾಗಿದೆ. ಎಲ್ಲರೂ ತಾವು ಮಾಡುವ ಕೆಲಸದ ಬಗ್ಗೆ ಬದ್ಧತೆ ಹಾಗೂ ಒಲವು ಬೆಳೆಸಿಕೊಳ್ಳಬೇಕು. ಯಾವುದೂ ಅಸಾಧ್ಯವಲ್ಲ. ಒಂದು ಅವಕಾಶ ಕೈತಪ್ಪಿದರೆ ಮತ್ತೂಂದು ಅವಕಾಶ ಖಂಡಿತವಾಗಿಯೂ ನಮ್ಮನ್ನು ಅರಸಿ ಬರುತ್ತದೆ. ಅದಕ್ಕಾಗಿ ಕಾಯಬೇಕು. ಕಷ್ಟದ ದಿನಗಳಲ್ಲಿ ಹತಾಶರಾಗದೆ ಸವಾಲುಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಎಂದು ಗೇಲ್‌ ಕಿವಿಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next