Advertisement

Asian Games ; ಧೋನಿಯವರಿಂದ ಸಾಕಷ್ಟು ಕಲಿತಿದ್ದೇನೆ: ಗಾಯಕ್ವಾಡ್

08:57 PM Oct 02, 2023 | Team Udayavani |

ಹ್ಯಾಂಗ್‌ಝೂ: ಕ್ರಿಕೆಟ್ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಂದ  ಸಾಕಷ್ಟು ಕಲಿತಿದ್ದು, ಆದರೂ ತನ್ನದೇ ನಾಯಕತ್ವದ ಶೈಲಿಯ ಮೇಲೆ ಒಲವು ತೋರುವುದಾಗಿ  ಏಷ್ಯನ್ ಗೇಮ್ಸ್  ಮೊದಲ ಕ್ರಿಕೆಟ್ ಅಭಿಯಾನದಲ್ಲಿ ಭಾರತೀಯ ಪುರುಷರ ತಂಡವನ್ನು ಮುನ್ನಡೆಸುತ್ತಿರುವ ರುತುರಾಜ್ ಗಾಯಕ್ವಾಡ್ ಸೋಮವಾರ ಹೇಳಿದ್ದಾರೆ.

Advertisement

‘ಆಟಗಾರರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ನೀಡಲು ಬಯಸುತ್ತೇನೆ. ನಾನು ಧೋನಿ ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಶೈಲಿಯನ್ನು ಹೊಂದಿರುತ್ತಾನೆ. ಅವರ ಶೈಲಿಯೇ ಬೇರೆ, ಅವರ ವ್ಯಕ್ತಿತ್ವವೇ ಬೇರೆ ಮತ್ತು ನನ್ನ ವ್ಯಕ್ತಿತ್ವ ಕೊಂಚ ವಿಭಿನ್ನವಾಗಿದೆ’ ಎಂದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿಯವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಪ್ರಮುಖ ಆಟಗಾರನಾಗಿ ಗಾಯಕ್ವಾಡ್ ಆಡಿದ ಅನುಭವ ಹೊಂದಿದ್ದಾರೆ.

ಭಾರತ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಮಾತನಾಡಿ”ಇದು ವಿಭಿನ್ನವಾದ ಸೆಟಪ್,ನಾವು ಚೀನಾಕ್ಕೆ ಬಂದು ಕ್ರಿಕೆಟ್ ಆಡುತ್ತೇವೆ ಎಂದು ಯೋಚಿಸಿರಲಿಲ್ಲ. ಇಡೀ ತಂಡಕ್ಕೆ ಇದೊಂದು ಉತ್ತಮ ಅವಕಾಶ’ ಎಂದರು.

ಭಾರತ ಮಂಗಳವಾರ ಸಂಜೆ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ನೇಪಾಲ ವನ್ನು ಎದುರಿಸಲಿದೆ. 6.30 ಕ್ಕೆ ಪಂದ್ಯ ನಡೆಯಲಿದೆ.

Advertisement

ತಂಡ ಇಂತಿದೆ
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಆಕಾಶ್ ದೀಪ್

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್

Advertisement

Udayavani is now on Telegram. Click here to join our channel and stay updated with the latest news.

Next