Advertisement

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಮಹತ್ವಾಕಾಂಕ್ಷಿ “ಕಲಿಕಾ ಚೇತರಿಕೆ’ ವಿಶೇಷ ಕಾರ್ಯಕ್ರಮವು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಮರ್ಪಕ ಅನುಷ್ಠಾನಗೊಳ್ಳದೆ ಇರು ವು ದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕಾರ್ಯಪಡೆ ರಚಿಸಲು ನಿರ್ಧರಿಸಿದೆ.

Advertisement

ಕೋವಿಡ್‌ನಿಂದಾಗಿ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಬೋಧನೆ, ಕಲಿಕಾ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಇದನ್ನು ಸರಿದೂಗಿಸಲು ಪ್ರಸಕ್ತ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ’ ವರ್ಷ ವೆಂದು ಘೋಷಿಸಿದೆ. ಆದರೆ ಕಲಿಕಾ ಚೇತ ರಿಕೆಯ ಉಪಕ್ರಮಗಳು ಸರಿಯಾಗಿ ಅನುಷ್ಠಾನ ಗೊಂಡಿರಲಿಲ್ಲ.

ಕಾರ್ಯಪಡೆಯಲ್ಲಿ ಯಾರಿರುತ್ತಾರೆ?
ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಪಡೆಯಲ್ಲಿ ಡಯಟ್‌ ಪ್ರಾಂಶುಪಾಲರು ಅಧ್ಯಕ್ಷರಾಗಿರುತ್ತಾರೆ. ಡಯಟ್‌ ಹಿರಿಯ ಉಪನ್ಯಾಸಕರು ನೋಡಲ್‌ ಅಧಿಕಾರಿಯಾಗಿದ್ದು, ವಿಷಯ ಪರಿವೀಕ್ಷಕರು, ಬಿಆರ್‌ಪಿ, ಸಿಆರ್‌ಪಿ ಸದಸ್ಯರಾಗಿದ್ದಾರೆ.

ಕಾರ್ಯಪಡೆ ಜವಾಬ್ದಾರಿಗಳೇನು?
-ತರಗತಿಗಳಲ್ಲಿ ಕಲಿಕಾ ಚಟುವಟಿಕೆಗಳ ಅನುಷ್ಠಾನ ವನ್ನು ಖಾತ್ರಿಪಡಿಸಿಕೊಳ್ಳುವುದು
– ಸಿಆರ್‌ಪಿಗಳ ಮೂಲಕ ಪ್ರಗತಿ ವಿವರ ಪಡೆದು ಶೈಕ್ಷಣಿಕ ಬೆಂಬಲ ನೀಡುವುದು
– ಪ್ರತೀ ತಿಂಗಳು ಎಲ್ಲ ಹಂತದ ಶಿಕ್ಷಕರಿಗೆ ಕ್ಲಸ್ಟರ್‌ ಸಮಾಲೋಚನ ಸಭೆ ನಡೆಸುವುದು
– ಕಲಿಕಾ ಹಾಳೆ ಹಾಗೂ ಶಿಕ್ಷಕರ ಕೈಪಿಡಿಗಳ ಸಮರ್ಪಕ ಬಳಕೆ ಖಾತ್ರಿಪಡಿಸಿಕೊಳ್ಳುವುದು
– ಕಲಿಕಾ ಫಲ ಆಧಾರಿತ ತರಗತಿ ಪ್ರಕ್ರಿಯೆ ನಡೆಯು ವಂತೆ ನಿರಂತರ ಮಾರ್ಗದರ್ಶನ ನೀಡುವುದು
– ಶಿಕ್ಷಕರು ಹಾಗೂ ಅಧಿಕಾರಿಗಳ ಸಂದೇಹ ಪರಿಹಾರ
– ಮೌಲ್ಯಮಾಪನ ವಿಧಾನಗಳ ಬಗ್ಗೆ ಮಾರ್ಗ ದರ್ಶನ
– ಬ್ಲಾಕ್‌ ಹಾಗೂ ಜಿಲ್ಲಾ ಹಂತದಲ್ಲಿ ಸಹಾಯ ವಾಣಿಯ ಸಮರ್ಪಕ ನಿರ್ವಹಣೆ
– ಜಿಲ್ಲಾ ಹಂತದಲ್ಲಿ ನೀಡಿರುವ ದತ್ತು ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವುದು

ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ) ಕೂಡಲೇ ಜಿಲ್ಲಾ ಹಂತದ ಶೈಕ್ಷಣಿಕ ಕಾರ್ಯಪಡೆ ರಚಿಸಬೇಕು. ಇದಕ್ಕಾಗಿ ಸೂಕ್ತ ಕ್ರಮ ಕೈಗೊಂಡು ಕಲಿಕಾ ಚೇತರಿಕೆ ಕಾರ್ಯ  ಕ್ರಮದ ಉಪಕ್ರಮಗಳ ಪರಿಣಾಮ ಕಾರಿ ಅನುಷ್ಠಾನ ಕುರಿತ ವರದಿಯನ್ನು ಪ್ರತಿ ತಿಂಗಳು ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಕಳುಹಿಸಬೇಕು.
– ಬಿ.ಬಿ. ಕಾವೇರಿ, ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು

Advertisement

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next