ರಾಮನಗರ: ಕೋವಿಡ್ ಸೋಂಕಿನಿಂದಾಗಿಶಾಲೆಗಳು ಆರಂಭಗೊಳ್ಳದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಆದರೆ ವಿದ್ಯಾಗಮ ಕಾರ್ಯಕ್ರಮ ಮಕ್ಕಳ ನಿರಂತರ ಕಲಿಕೆಗೆ ಸಹಕಾರಿ ಯಾಗಿದೆ ಎಂದು ತಾಪಂ ಸದಸ್ಯ ಗಾಣಕಲ್ ನಟರಾಜ್ ಹೇಳಿದರು.
ತಾಲೂಕಿನ ಬಿಡದಿ ಹೋಬಳಿ (ಬಿ) ಗ್ರಾಪಂ ವ್ಯಾಪ್ತಿಯ ಮುತ್ತುರಾಯನಪುರ ಗ್ರಾಮದಲ್ಲವಿದ್ಯಾಗಮ ಕಾರ್ಯಕ್ರಮದಡಿ ಭಾಗಿಯಾಗಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಕಲಿಕಾ ಸಾಮಾಗ್ರಿ ವಿತರಿಸಿ ಮಾತನಾಡಿದರು.
ವಿದ್ಯಾಗಮ ಕಾರ್ಯಕ್ರಮದಡಿ ಮಕ್ಕಳು ತಮ್ಮದೇ ಗ್ರಾಮದ ಮನೆಯಂಗಳ, ಅರಳಿಕಟೆ r,ದೇವಾಲಯದ ಆವರಣದಲ್ಲಿ ಕುಳಿತು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.ಈಸೇವಾ ಕಾರ್ಯಕ್ಕೆ ತಮ್ಮ ಕುಟುಂಬ ವರ್ಗ ಮತ್ತು ಸ್ನೇಹಿತರು ಸಹ ಕೈ ಜೋಡಿದ್ದಾರೆ ಎಂದರು.
ಬನ್ನಿಕುಪ್ಪೆ ಕ್ಲಸ್ಟರ್ ವ್ಯಾಪ್ತಿಯ 17 ಸರ್ಕಾರಿ ಶಾಲೆಗಳ1 ರಿಂದ 10ನೇ ತರಗತಿ ವರೆಗಿನ ಸುಮಾರು 800 ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಅನುಗುಣವಾಗಿ ನೋಟ್‌ಬುಕ್, ಡ್ರಾಯಿಂಗ್ ಮತ್ತು ಗ್ರಾಫ್ ಪುಸ್ತಕ, ಜಾಮಿಟ್ರಿ ಬಾಕ್ಸ್ ಸೇರಿದಂತೆ ಇತರೆಕಲಿಕಾ ಸಾಮಗ್ರಿ ನೀಡಲಾಗುತ್ತಿದೆ. ಮಕ್ಕಳಿಗೆ ಪ್ರೋತ್ಸಾಹ ನೀಡಲು ಸಲಹೆ:ವಿದ್ಯಾಗಮ ಕಲಿಕಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳಿಗೆಸಮಾಜದ ಪ್ರೋತ್ಸಾಹ ಅಗತ್ಯವಿದೆ. ಆದ್ದರಿಂದ ದಾನಿಗಳು, ಸಂಘ ಸಂಸ್ಥೆಗಳುಕೈ ಜೋಡಿಸಬೇಕೆಂದು ಮನವಿ ಮಾಡಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಮಾತನಾಡಿ, ಗಾಣಕಲ್ ನಟರಾಜ್ ಅವರ ಸೇವಾ ಮನೋಭಾವದ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಿ.ಆರ್.ಸಿ ಸಂಪತ್‌ಕುಮಾರ್, ಟಿ.ಪಿ.ಒ ನೀಲಕಂಠ, ಸಿ.ಆರ್.ಪಿ ಚಿಕ್ಕವೀರಯ್ಯ, ಪ್ರಮುಖರಾದ ರಮೇಶ, ನಾಗರಾಜು, ಕರೇನಹಳ್ಳಿ ಪುಟ್ಟ ರೇವಯ್ಯ, ರಾಜಣ್ಣ, ಬೆಂಗಳೂರಯ್ಯ, ನವೀನ್, ಮಂಜುನಾಥ್, ಶಿವಶಂಕರ್, ಧನಂಜಯ, ರಂಗಸ್ವಾಮಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.