Advertisement

ಕಲಿಕೆಗೆ ಕೊನೆಯಿಲ್ಲ: ಮಂಜುನಾಥ್‌

03:49 PM Mar 07, 2017 | |

ಪಿರಿಯಾಪಟ್ಟಣ: ಕಲಿಕೆಗೆ  ಕೊನೆಯೆಂ ಬುದು ಇಲ್ಲ, ಕಲಿಯು ವುದು ಮುಂದುವರಿದಂತೆ ಕಲಿಯಬೇಕಾದ ವಿಷಯಗಳು ಸಾಗರದಷ್ಟಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದು ಶಿಕ್ಷಣ ಇಲಾ ಖೆಯ ಸಿಆರ್‌ಪಿ ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ರಾವಂದೂರು ಸಮೀಪದ ಎನ್‌. ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಅವಿಷ್ಕಾರ್‌ ಅಭಿಯಾನ ಯೋಜನೆ ಯಡಿ ಏರ್ಪಡಿಸಿದ್ದ ಕ್ಲಸ್ಟರ್‌ ಮಟ್ಟದ ವಿಜಾnನ ವಸ್ತುಪ್ರದರ್ಶನದಲ್ಲಿ ಮಾತನಾಡಿ, ಉತ್ತಮ ಮಾರ್ಗದರ್ಶಕರು ಹಾಗೂ ಶಿಕ್ಷಕರು ದೊರೆತಲ್ಲಿ ಗ್ರಾಮೀಣ  ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ಮಾಡಬಲ್ಲರು ಎಂದು ತಿಳಿಸಿದರು.

ಶಿಕ್ಷಕ ನಾಗೇಶ್‌ ಮಾತನಾಡಿ,  ಉತ್ತಮ ಕಲಿಕೆಗೆ ಮೊಬೈಲ್‌, ಇಂಟರ್‌ನೆಟ್‌ಗಳನ್ನು ಸದುಪ ಯೋಗ ಪಡಿಸಿಕೊಳ್ಳುವತ್ತ ವಿದ್ಯಾ ರ್ಥಿಗಳು ಮುಂದಾಗಬೇಕೆಂದರು.
ಗಮನ ಸೆಳೆದ ಮಕ್ಕಳ ಸಂತೆ:  ಮಕ್ಕಳ ಸಂತೆಯಲ್ಲಿ ತರಕಾರಿಗಳು, ಆಟದ ಸಾಮಾನುಗಳು, ತಿಂಡಿ ತಿನಿಸುಗಳು, ವಿವಿಧ ರೀತಿಯ ಹಣ್ಣು ಗಳನ್ನು ಮಾರಾಟ ಮಾಡಿ ಹಣ ವಿನಿಮಯ ಹಾಗೂ ವ್ಯಾಪಾರದ ರೀತಿಗಳನ್ನು ತೋರಿಸುವಲ್ಲಿ ಗಮನ ಸೆಳೆದರು.

ವಿಜಾnನ ಹಾಗೂ ವಸ್ತುಗಳ ಪ್ರದರ್ಶನ: ಬೆಳಕಿನ ವಕ್ರೀಭವನ, ದಹನಕ್ರಿಯೆಗೆ ಆಮ್ಲಜನಕದ ಅವಶ್ಯಕತೆ, ದ್ರವ ಮತ್ತು ಅನಿಲಗಳ ಸಂವೇದನೆ, ದ್ರವದ ಸಾಂದ್ರತೆಗಳು, ಆಮ್ಲ ಮತ್ತು ಪ್ರತ್ಯಾಮ್ಲಗಳ ಗುಣಲಕ್ಷಣಗಳು, ಪವನ ಶಕ್ತಿ ಯಾಂತ್ರಿಕ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ, ಬೆಳಕಿನ ಪ್ರತಿಫ‌ಲನದ ನಿಯಮಗಳನ್ನು  ಪ್ರಾಯೋಗಿಕವಾಗಿ ವಿವರಿಸಿದರು. 

ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಎಚ್‌.ಕೆ.ರಾಘವೇಂದ್ರ, ಮಂಜುಳಾ, ಹರೀಶ್‌, ಈಶ್ವರ್‌, ಮಂಜುನಾಥ್‌, ವಿಶ್ವನಾಥ್‌, ನಾಗರಾಜು, ಆನಂದ್‌, ಎಲ್‌.ಬಿ.ರಾಜು, ಮಹದೇವ, ಪ್ರದೀಪ್‌, ಸೋಮಶೇಖರ್‌, ವಸಂತ್‌, ಶಮಿತಾ, ಪುಷ್ಪವತಿ, ಸುಚಿತ್ರ, ಪುಷ್ಪಾ ಹಾಗೂ ಶಾಲೆಯ ಶಿಕ್ಷಕರಾದ ಎಚ್‌.ತನುಜಾ, ಎಚ್‌.ಎಸ್‌.ಮಂಜು, ಎಂ.ಎಸ್‌.ಮಂಜುನಾಥ್‌, ಎಸ್‌.ಶಿವಪ್ರಸಾದ, ಬಸವರಾಜ ಅಮ್ಮಣಗಿ, ಸಿ.ಡಿ.ಸತೀಶ್‌ಕುಮಾರ್‌, ಲೋಕೇಶ್‌ ಸೇರಿದಂತೆ ಹಲವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next