Advertisement

ಬಂಗಾರದಿಂದ ಬಣ್ಣಾನ ತಂದ…

06:00 AM May 22, 2018 | Team Udayavani |

ಹಳದಿ ಲೋಹ ಎಂದೇ ಹೆಸರಾಗಿರುವ ಚಿನ್ನಕ್ಕೆ ಆಭರಣದ ರೂಪ ನೀಡುವ ಕಲೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಭರಣ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಅಕ್ಕಸಾಲಿಗರು ರಾಜ ಮಹಾರಾಜರ ಕಾಲದಿಂದಲೂ ಈ ವೃತ್ತಿಯನ್ನು ಕುಲಕಸುಬು ಎಂದೇ ನಂಬಿ ಮುಂದುವರಿಸಿಕೊಂಡು ಬಂದಿದ್ದಾರೆ. ಆಭರಣಗಳ ವಿಷಯದಲ್ಲಿ ಒಬ್ಬೊಬ್ಬರ ಆಯ್ಕೆಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಗ್ರಾಹಕರ ಕೋರಿಕೆಗೆ ತಕ್ಕಂತೆ ವಿನ್ಯಾಸ ಮಾಡಿಕೊಡುವವರೇ ಜುವೆಲರಿ ಡಿಸೈನರ್‌ಗಳು…

Advertisement

ವಿಶೇಷ ದಿನಗಳು, ಮದುವೆ ಸಮಾರಂಭದ ವೇಳೆ ಅಕ್ಕಸಾಲಿಗರ ಬಳಿ ಚಿನ್ನ ಖರೀದಿಗೆ ಹೋಗುತ್ತಿದ್ದ ದಿನಗಳಿದ್ದವು, ಆತ ನೀಡಿದ ವಿನ್ಯಾಸದ ಆಭರಣವನ್ನು ಮರುಮಾತಾಡದೇ ಪಡೆದು ಬರುತ್ತಿದ್ದರು. ಇನ್ನು ರಾಜ ಮಹಾರಾಜರು ಇಂತಹದ್ದೇ ಒಡವೆಗಳು ಬೇಕೆಂದು ಅಕ್ಕಸಾಲಿಗರನ್ನು ತಿಳಿಸಿ, ತಮ್ಮ ಆಸಕ್ತಿಗೆ ತಕ್ಕಂಥ ಆಭರಣ, ದೇವರ ವಿಗ್ರಹ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಮಾಡಿಸುತ್ತಿದ್ದರು. 

  ಆದರೆ, ಈಗ ಕಾಲ ಬದಲಾಗಿದೆ. ಚಿನ್ನಕ್ಕೆ ಜಾಗತಿಕ ಮೌಲ್ಯ ದೊರೆತಿದೆ. ಅಲ್ಲದೆ ಬಡವರಿಗೆ ದುರ್ಲಭವಾದ ಹಳದಿಲೋಹ ಗ್ರಾಂ ಲೆಕ್ಕದಲ್ಲಿ ಎಲ್ಲರಿಗೂ ಸಿಗುವಂತಾಗಿದೆ. ಹೀಗಾಗಿ ಆಭರಣ ವಿನ್ಯಾಸದ ಆಯ್ಕೆಗಳೂ ಹೆಚ್ಚಾಗಿದೆ. ಆದ್ದರಿಂದ ಚಿನ್ನ ಖರೀದಿ ಮಾಡುವಾಗ ಗ್ರಾಹಕ ಅನೇಕ ಮಾನದಂಡದ ಜೊತೆಗೆ ಮನಸ್ಸಿಗೆ ಒಪ್ಪುವ ವಿನ್ಯಾಸದ ಬಗೆಗೂ ಯೋಚಿಸುವುದುಂಟು.

  ಇದೇ ರೀತಿಯಲ್ಲಿ ಗ್ರಾಹಕರಿಗಾಗಿ ಜುವೆಲರಿ ಮಳಿಗೆಯವರು ವಿವಿಧ ಮಾದರಿಯ ವಿನ್ಯಾಸಗಳನ್ನು ಸಿದ್ಧಪಡಿಸುವುದಕ್ಕಾಗಿ ವಿನ್ಯಾಸಕರ ವರ್ಗವನ್ನೇ ಇಟ್ಟಿರುತ್ತಾರೆ. ಚಿನ್ನವನ್ನು ಮುಟ್ಟದೆಯೇ ಇಂತಿಷ್ಟು ಗ್ರಾಂ ನಲ್ಲಿ, ಇಂತಿಷ್ಟು ಪ್ರಮಾಣದ ಆಭರಣವನ್ನು ತಯಾರಿಸಬೇಕೆಂದು ಮೊದಲೇ ಪೂರ್ವನಿಯೋಜಿತ ಯೋಜನೆ ತಯಾರಿಸಿ, ಆಭರಣವನ್ನು ತಯಾರು ಮಾಡಿಕೊಡುವವರು ಜ್ಯುವೆಲ್ಲರಿ ಡಿಸೈನರ್‌ಗಳು.  

  ಚಿನ್ನ, ಬೆಳ್ಳಿ, ಪ್ಲಾಟಿನಮ್‌ ಮತ್ತು ರತ್ನಗಳನ್ನು ಬಳಸಿಕೊಂಡು ಹೊಸ ವಿನ್ಯಾಸದ ಸ್ಕೆಚ್‌ ತಯಾರಿಸಿಕೊಡುವ ಕೆಲಸ ಇವರದು. ಗಣಕ ಯಂತ್ರದ ಮೂಲಕ ನವನವೀನ ವಿನ್ಯಾಸಗಳನ್ನು ಅಕ್ಕಸಾಲಿಗನಿಗೆ ನೀಡಿ ಚಿನ್ನಾಭರಣ ತಯಾರಿಕೆಗೆ ರೂಪುರೇಷೆ ನೀಡುವುದೂ ಇವರ ಕೆಲಸ ಇಂಥ ವಿನ್ಯಾಸಕರಾಗಬೇಕೆಂದರೆ…

Advertisement

ಅಧ್ಯಯನ ಹೀಗಿರಬೇಕು…
ಜುವೆಲರಿ ಡಿಸೈನರ್‌ ಆಗಲು ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಜೆಮ್ಮಾಲಜಿ ಡಿಪ್ಲೋಮಾ ವಿಷಯ ಆರಿಸಿಕೊಂಡು ಜ್ಯುವೆಲ್ಲರಿ ಡಿಸೈನರ್‌ ಆಗಬಹುದು. ಮತ್ತೂಂದು ಮಾರ್ಗದಲ್ಲಿ ಎನ್‌ಐಎಫ್ಟಿ ಪ್ರವೇಶ ಪರೀಕ್ಷೆ ಬರೆದು ಬಳಿಕ ಆಕ್ಸೆಸರಿ ಡಿಸೈನ್‌ ಮಾಡಿಯೂ ಜ್ಯುವೆಲ್ಲರಿ ಡಿಸೈನರ್‌ ಆಗಬಹುದು. ಸೃಜನಾತ್ಮಕ ಮತ್ತು ಕಂಪ್ಯೂಟರ್‌ ಜ್ಞಾನ ಅಗತ್ಯ.

ಕೌಶಲ್ಯಗಳಿರಲಿ…
ಚಿನ್ನ, ಬೆಳ್ಳಿ ಇತರ ಲೋಹಗಳ ಬಗ್ಗೆ, ರತ್ನಗಳ ಗುಣಾವಗುಣಗಳ ಬಗ್ಗೆ ತಿಳಿವಳಿಕೆ, ರತ್ನಶಾಸ್ತ್ರದ ಅರಿವು
ಆಕ್ಸೆಸರಿ, ಫ್ಯಾಷನ್‌ ಕ್ಷೇತ್ರದ ಬಗ್ಗೆ ಜ್ಞಾನ 
ಹೊಸ ಆಯ್ಕೆ ಮತ್ತು ಅವಕಾಶಗಳನ್ನು ಸೃಷ್ಟಿಸುವ ಮತ್ತು ಟ್ರೆಂಡ್‌ ಬಳಸಿಕೊಳ್ಳುವ ಅರಿವು.
ಸ್ಕೆಚ್‌ ಮಾಡುವ ಕಲೆ, ಗಣಕ ಸಂಬಂಧಿತ ಡಿಸೈನ್‌ ತಂತ್ರಾಂಶಗಳ ಬಗ್ಗೆ ತಿಳಿವಳಿಕೆ

ಎಲ್ಲೆಲ್ಲಿ ಅವಕಾಶಗಳಿವೆ?
ಚಿನ್ನಾಭರಣ ತಯಾರಿಕಾ ಘಟಕ
ಚಿನ್ಯಾಭರಣ ತಯಾರಿಕೆ ಮತ್ತು ಸಂಶೋಧನಾ ವಲಯ
ಚಿನ್ನಾಭರಣ ಮಳಿಗೆಗಳು
ಲೋಹ ವಿನ್ಯಾಸ ಕ್ಷೇತ್ರ

ಕಲಿಯುವುದು ಎಲ್ಲಿ?
ವೋಗ್‌ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್‌ ಅಂಡ್‌ ಟೆಕ್ನಾಲಜಿ, ಬೆಂಗಳೂರು 
ಜೆಡಿ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ ಬೆಂಗಳೂರು
ಸಿಆರ್‌ಇಒ ವೆಲ್ಲಿ ಸ್ಕೂಲ್‌ ಆಫ್ ಕ್ರಿಯೇಟಿಟಿ, ಡಿಸೈನ್‌ ಅಂಡ್‌ ಮ್ಯಾನೇಜ್‌ಮೆಂಟ್‌, ಬೆಂಗಳೂರು
ಮುಂಬೈನ ಜೆಮ್ಮಾಲಜಿಕಲ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ, ಕಾರ್ನಿ ರೋಡ್‌ ಇಲ್ಲಿ ವಿದ್ಯಾಭ್ಯಾಸ ಮಾಡಬಹುದು. 

ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next