Advertisement

ಪೇಸ್‌-ರಾಜ ಜೋಡಿಗೆ ಮೊದಲ ಪ್ರಶಸ್ತಿ

06:40 AM Nov 14, 2017 | Team Udayavani |

ಹೊಸದಿಲ್ಲಿ: ಭಾರತದ ಲಿಯಾಂಡರ್‌ ಪೇಸ್‌-ಪುರವ್‌ ರಾಜ ಜತೆಗೂಡಿ ಮೊದಲ ಟೆನಿಸ್‌ ಪ್ರಶಸ್ತಿ ಜಯಿಸಿದ್ದಾರೆ. 75,000 ಡಾಲರ್‌ ಮೊತ್ತದ ನೋಕ್ಸ್‌ವಿಲ್ಲೆ ಹಾರ್ಡ್‌ಕೋರ್ಟ್‌ ಟೆನಿಸ್‌ ಟೂರ್ನಿಯಲ್ಲಿ ಇವರು ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ಅಗ್ರ ಶ್ರೇಯಾಂಕದ ಭಾರತೀಯ ಟೆನಿಸಿಗರು ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ನಲ್ಲಿ ಜೇಮ್ಸ್‌ ಸೆರಾಟನಿ (ಅಮೆರಿಕ)-ಜಾನ್‌ ಪ್ಯಾಟ್ರಿಕ್‌ ಸ್ಮಿತ್‌ (ಆಸ್ಟ್ರೇಲಿಯ) ವಿರುದ್ಧ 7-6 (4), 7-6 (4) ಅಂತರದ ಗೆಲುವು ದಾಖಲಿಸಿದರು.

ಪೇಸ್‌-ರಾಜ ಕಳೆದ ಆಗಸ್ಟ್‌ನಲ್ಲಿ ನಡೆದ ಎಟಿಪಿ 250 ವಿನ್‌ಸ್ಟನ್‌-ಸಲೇಮ್‌ ಓಪನ್‌ ಪಂದ್ಯಾವಳಿ ಮೂಲಕ ಜತೆಗೂಡಿ ಆಡಲಾರಂಭಿಸಿದ್ದರು. ಇವರಿಬ್ಬರು ಸೇರಿ ಆಡಿದ ಮೊದಲ ಫೈನಲ್‌ ಇದೆಂಬುದು ವಿಶೇಷ. ಈ ಗೆಲುವಿನ ಮೂಲಕ ಲಿಯಾಂಡರ್‌ ಪೇಸ್‌ ಪ್ರಸಕ್ತ ಋತುವಿನ 4ನೇ ಚಾಲೆಂಜರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪೇಸ್‌ ಜತೆಗೂಡಿ ಆಡುವ ಮುನ್ನ ಪುರವ್‌ ರಾಜ ಬೋಡೋì ಚಾಲೆಂಜರ್‌ ಪ್ರಶಸ್ತಿಯನ್ನು ದಿವಿಜ್‌ ಶರಣ್‌ ಜತೆಗೂಡಿ ಜಯಿಸಿದ್ದರು.
ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಸೇರಿದಂತೆ ಈ ಮೂರೂವರೆ ತಿಂಗಳ ಅವಧಿಯಲ್ಲಿ ಪೇಸ್‌-ರಾಜ ಜತೆಗೂಡಿ ಆಡಿದ 8ನೇ ಪಂದ್ಯಾವಳಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next