Advertisement
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಲಿಯಾಂಡರ್ ಪೇಸ್ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರು ನನ್ನ ಕಿರಿಯ ಸಹೋದರ. ನಾನು ಯುವಜನ ಸಚಿವೆಯಾದಾಗಿನಿಂದ ಅವರನ್ನು ಬಲ್ಲೆ ಮತ್ತು ಅವರು ತುಂಬಾ ಚಿಕ್ಕವರಾಗಿದ್ದರು” ಎಂದು ಹೇಳಿದರು.
Related Articles
Advertisement
ಗೋವಾದ ಬಿಜೆಪಿ ಕಾರ್ಯಕರ್ತರು ಆಕೆಯನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲಕ್ಷರವಾದ ‘ಟಿಎಂಸಿ’ ಎಂದರೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಎಂದಿದೆ.
ನಾನು ಹಿಂದೂ ಎಂಬ ಅಭಿಮಾನವಿದೆ
ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ”ನಾನು ಇಲ್ಲಿ ನಿಮ್ಮ ಅಧಿಕಾರ ಕಸಿದುಕೊಳ್ಳಲು ಬಂದಿಲ್ಲ, ನಿಮಗೆ ಸಹಾಯ ಮಾಡಲು ಬಂದಿದ್ದೇನೆ. ಗೋವಾದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಲು ಸಂಪೂರ್ಣ ಸುರಕ್ಷೆ ನೀಡಬೇಕಿದೆ. ನಾವು ಅಭಿಮಾನದಿಂದ ಬದುಕಬೇಕು. ನನ್ನ ಧರ್ಮದ ಚಾರಿತ್ರ್ಯ ಪ್ರಮಾಣಪತ್ರ ನೀಡಲು ಬಿಜೆಪಿ ಯಾರು? ನಾನು ಹಿಂದೂ ಎಂಬ ಅಭಿಮಾನವಿದೆ” ಎಂದರು.
”ನಾನು ಧರ್ಮನಿರಪೇಕ್ಷತೆಯ ಮೇಲೆ ವಿಶ್ವಾಸವಿಡುತ್ತೇನೆ. ನನ್ನ ಏಕಾತ್ಮತೆಯ ಮೇಲೆ ವಿಶ್ವಾಸವಿದೆ. ಭಾರತವು ನನ್ನ ಮಾತೃಭೂಮಿ ಎಂಬ ವಿಸ್ವಾಸವೂ ನನಗಿದೆ, ಗೋವಾ ಕೂಡ ನನ್ನ ಮಾತೃಭೂಮಿಯೇ ಆಗಿದೆ” ಎಂದರು.
”ನಾವು ಪ್ರಜಾಪ್ರಭುತ್ವದ ಪದ್ಧತಿಯಲ್ಲಿಯೇ ಚುನಾವಣೆ ಎದುರಿಸುತ್ತೇವೆ, ಆದರೆ ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ದಂಗೆ ಎಬ್ಬಿಸಲು ನೋಡುತ್ತಿದೆ. ಗೋವಾದ ಯುವಕರಿಗೆ ನಾವು ಮುಂಬರುವ ದಿನಗಳಲ್ಲಿ ಹೊಸ ಅವಕಾಶವನ್ನು ಸೃಷ್ಠಿಸಿಕೊಡಲಿದ್ದೇವೆ” ಎಂದು ಮಮತಾ ಬ್ಯಾನರ್ಜಿ ನುಡಿದರು.