Advertisement

ಲಕ್ಷಾಂತರ ಜಿಯೋ ಗ್ರಾಹಕರ ಮಾಹಿತಿ ಸೋರಿಕೆ?

10:40 AM Jul 11, 2017 | Team Udayavani |

ಹೊಸದಿಲ್ಲಿ: ಆಧಾರ್‌ ಸಂಖ್ಯೆ ಸೇರಿದಂತೆ ಲಕ್ಷಾಂತರ ರಿಲಯನ್ಸ್‌ ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿಯಿದ್ದ ವೆಬ್‌ಸೈಟ್‌ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. 

Advertisement

“magicapk.com’ ಎಂಬ ವೆಬ್‌ಸೈಟ್‌ ಟ್ವಿಟರ್‌, ಫೇಸ್‌ಬುಕ್‌ ಸೇರಿ ಹಲವಾರು ಜಾಲತಾಣಗಳಲ್ಲಿ “ನಿಮ್ಮ, ಜಿಯೋ ಸಿಮ್‌ ಮಾಹಿತಿ ತಿಳಿಯಲು ನಿಮ್ಮ ಜಿಯೋ ನಂಬರ್‌ ದಾಖಲಿಸಿ ಎಂದು ಸಂದೇಶ ನೀಡಿತ್ತು’. ಇದಾದ ಕೆಲ ಸಮಯದಲ್ಲೇ ಹಲವಾರು ಜಿಯೋ ಗ್ರಾಹಕರು ತಮ್ಮ ನಂಬರ್‌ ದಾಖಲಿಸಲಾಗಿ ಅವರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ. ಅಲ್ಲದೇ, ಹಲವಾರು ಗ್ರಾಹಕರು ತಮ್ಮ ಮಾಹಿತಿ ಸೋರಿಕೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ರಿಲಯನ್ಸ್‌ ಈ ಆರೋಪಗಳನ್ನೆಲ್ಲಾ ಅಲ್ಲಗಳೆದಿದೆ. ಗ್ರಾಹಕರ ವೈಯಕ್ತಿಕ ಮಾಹಿತಿಗಳು ಅಷ್ಟು ಸುಲಭವಾಗಿ ಸೋರಿಕೆಯಾಗದಂತೆ ಕ್ರಮ ತೆಗೆದುಕೊಂಡಿದ್ದೇವೆ ಎಂದಿದೆ. 

ಏರ್‌ಟೆಲ್‌ ಆಫ‌ರ್‌: ಏರ್‌ಟೆಲ್‌ ತನ್ನ ಪೋಸ್ಟ್‌ಪೇಯ್ಡ ಗ್ರಾಹಕರಿಗೆ ಒಂದು ತಿಂಗಳ ಬಳಿಕ ಬಾಕಿ ಉಳಿದ ಡೇಟಾವನ್ನು ಮುಂದಿನ ತಿಂಗಳಲ್ಲಿ ಬಳಸಿಕೊಳ್ಳುವಂಥ ಸೌಲಭ್ಯ ನೀಡುವು ದಾಗಿ ಹೇಳಿದೆ. ಆಗಸ್ಟ್‌ನಿಂದ ಇದು ಜಾರಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next