ನವದೆಹಲಿ: ಜನಪ್ರಿಯ ಪಿಜ್ಜಾ ಬ್ರಾಂಡ್ ಗಳಲ್ಲಿ ಒಂದಾದ ಡಾಮಿನೋಸ್ ನ ಡೇಟಾ ಮತ್ತೊಮ್ಮೆ ಸೋರಿಕೆಯಾಗಿದೆ. ಸೈಬರ್ ಪರಿಣಿತರ ಪ್ರಕಾರ ಬರೋಬ್ಬರಿ 18 ಕೋಟಿ ಆರ್ಡರ್ ಗಳ ಮಾಹಿತಿ ಡಾರ್ಕ್ ವೆಬ್ ನಲ್ಲಿ ಲಭ್ಯವಿದೆ.
ಕಳೆದ ಏಪ್ರಿಲ್ ನಲ್ಲಿ 13 ಟಿ ಬಿ ಪ್ರಮಾಣದ ಡಾಮಿನೋಸ್ ಡೇಟಾಗಳು ತನ್ನಲ್ಲಿ ಲಭ್ಯವಿದೆ ಎಂದು ಹ್ಯಾಕರ್ ಒಬ್ಬಾತ ತಿಳಿಸಿದ್ದ. ಮಾತ್ರವಲ್ಲದೆ ಫೋನ್ ನಂಬರ್, ವಿಳಾಸ, ಇಮೇಲ್ ಆಡ್ರೆಸ್, ಪೇಮೆಂಟ್ ಡಿಟೈಲ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನೊಳಗೊಂಡ 180,00,000 ಆರ್ಡರ್ ತನ್ನ ಬಳಿ ಇದೆ ಎಂದು ತಿಳಿಸಿದ್ದ.
ಇದನ್ನೂ ಓದಿ: ಗೂಗಲ್ ಸರ್ಚ್ ಹಿಸ್ಟರಿಯನ್ನು ತ್ವರಿತವಾಗಿ ಡಿಲೀಟ್ ಮಾಡಲು ಹೊಸ ಫೀಚರ್: ಬಳಕೆ ಹೇಗೆ ?
ಈ ಕುರಿತು ಮಾಹಿತಿ ನೀಡಿರುವ ಸೈಬರ್ ಪರಿಣಿತ ರಾಜಶೇಖರ್ ರಜಾರಿಯಾ, ಡಾಮಿನೋಸ್ ಡೇಟಾಗಳು ಮತ್ತೊಮ್ಮೆ ಸೋರಿಕೆಯಾಗಿದೆ. ಈ ಎಲ್ಲಾ ಮಾಹಿತಿಗಳು ಡಾರ್ಕ್ ವೆಬ್ ನಲ್ಲಿ ಲಭ್ಯವಿದ್ದು, ಸಾರ್ವಜನಿಕರೂ ನೋಡಲು ಸಾಧ್ಯವಿದೆ. ನೀವು ಡಾಮಿನೋಸ್ ನಿಂದ ಸತತವಾಗಿ ಆರ್ಡರ್ ಮಾಡುವವರಾಗಿದ್ದಾರೆ ನಿಮ್ಮ ವ್ಯಯಕ್ತಿಕ ಡೇಟಾಗಳನ್ನು ಡಾರ್ಕ್ ವೆಬ್ ನಲ್ಲಿ ಕಾಣಬಹುದು. ಇದರಲ್ಲಿ ಹೆಸರು, ಇಮೇಲ್, ಫೋನ್ ನಂಬರ್, ಜಿಪಿಎಸ್ ಲೊಕೇಶನ್ ಗಳ ಮಾಹಿತಿಯೂ ಲಭ್ಯವಿದೆ ಎಂದಿದ್ದಾರೆ.
ಡಾಮಿನೋಸ್ ಜನಪ್ರಿಯ ಫುಡ್ ಸರ್ವಿಸ್ ಕಂಪೆನಿಯಾಗಿದ್ದು, ಭಾರತದ 285 ನಗರಗಳಲ್ಲಿ, ಮತ್ತು ಇತರ ದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.