Advertisement
ಇದರ ಬಳಿಕ ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ಕೇಂದ್ರವೂ ಬೇಕೆಂಬ ಇಚ್ಛೆಯನ್ನು ಆಡಳಿತ ಮನಗಂಡಿತು. ಈ ಹಿನ್ನೆಲೆಯಲ್ಲಿ 2013ರಲ್ಲಿ ಸ್ಕೇಟಿಂಗಿಗೆ ಅನುಕೂಲವಾಗುವಂತೆ ಕಟ್ಟಡ ರಚಿಸ ಲಾಯಿತು. ಸ್ಕೇಟಿಂಗ್ ತರಬೇತಿ ಕೇಂದ್ರಕ್ಕೆ ಸಾಹಿತ್ಯ ವಲಯದಲ್ಲಿ ವಿರೋಧ ಕೇಳಿಬಂದ ಪರಿಣಾಮ ಕಟ್ಟಡ ಗ್ಯಾಲರಿಯಾಗಿ ಬದ ಲಾವಣೆಗೊಂಡಿತು.
ಕಟ್ಟಡದ ಮೂರು ಭಾಗದಲ್ಲಿ ಪ್ರೊಫೆ ಷನಲ್ ಕಲಾವಿದರು ರಚಿಸಿದ ಕಲಾಕೃತಿಗಳು. ಇನ್ನೊಂದು ಭಾಗದಲ್ಲಿ ಗ್ರಂಥಾಲಯ. ಸುಮಾರು 49 ಅಮೂಲ್ಯ ಕಲಾಕೃತಿಗಳಿವೆ. ಶಿವರಾಮ ಕಾರಂತರು ರಚಿಸಿದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಲಾಕೃತಿಗಳು ರೂಪು ಪಡೆದಿವೆ. ಶಿವರಾಮ ಕಾರಂತರು ರಚಿಸಿದ ಸುಮಾರು 400ಕ್ಕೂ ಮಿಕ್ಕಿ ಪುಸ್ತಕಗಳ ಪೈಕಿ 80ಕ್ಕೂ ಅಧಿಕ ಪುಸ್ತಕಗಳು ಇಲ್ಲಿವೆ. ಇವುಗಳನ್ನು ಜೋಪಾನವಾಗಿ ತೆಗೆದಿಡಬೇಕಾದ ಅಗತ್ಯವಿದೆ. ಆದರೆ ಮಳೆ ನೀರು ಬಿದ್ದು, ಕೆಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಮಳೆಗಾಲದಲ್ಲಿ ನೀರು ಸೋರುವುದರಿಂದ, ಸೋರಿಕೆಯಾಗದ ಜಾಗ ಹುಡುಕಿ ಮಕ್ಕಳು ಕುಳಿತುಕೊಳ್ಳ ಬೇಕಿದೆ. ಸುಮಾರು 24 ಶಾಲೆಗಳ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯ ವಾಗಿ ಶಿವರಾಮ ಕಾರಂತರ ಜನ್ಮದಿನವಾದ ಅ. 10 ಹಾಗೂ ಮಕ್ಕಳ ದಿನಾಚರಣೆಯಂದು ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಶಿವರಾಮ ಕಾರಂತರ ಗ್ಯಾಲರಿ ಹಿಂದಿನಂತೆ ಕ್ರಿಯಾಶೀಲವಾಗಿಲ್ಲ ಎಂಬು ದಂತು ನಿಜ. ಹಾಗೆಂದು ಇರುವ ಆಸ್ತಿ ಯನ್ನಾದರೂ ಜೋಪಾನ ಮಾಡುವ ಹೊಣೆಗಾರಿಕೆ ಇದೆಯಲ್ಲ. ಈ ನಿಟ್ಟಿನಲ್ಲಿ ಆಡಳಿತ ಯೋಚನೆ ಮಾಡಬೇಕಾಗಿದೆ. ಮಳೆ ನೀರು ಬಿದ್ದ ಕಾರಣ ಇಲೆಕ್ಟ್ರಾನಿಕ್ ಉಪಕರಣಗಳು ಕೈಕೊಡಲು ಆರಂಭಿಸಿವೆ. ವಿದ್ಯುತ್ ಬಲ್ಬ್ಗಳ ಒಳಗಡೆ ನೀರು ನಿಂತಿವೆ. ಸರಿಯಾಗಿ ಬೆಳಕು ನೀಡುತ್ತಿಲ್ಲ. ಸಿಡಿಯುವ ಸಂಭವವೂ ಇದೆ. ಹೀಗೆ ಮುಂದುವರಿದರೆ ಗೋಡೆಗಳಲ್ಲಿ ವಿದ್ಯುತ್ ಸಂಚಾರ ಉಂಟಾ ಗಬಹುದು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವುದು ಒಳಿತು. ಕಾರಂತರ ಕೃತಿಗೆ ಅಪಚಾರ
ಗ್ಯಾಲರಿಯ ಗೋಡೆಗೆ ಕಲಾಕೃತಿಗಳನ್ನು ನೇತು ಹಾಕಲಾಗಿದೆ. ಇವುಗಳ ಮೇಲೆ ಮಳೆ ನೀರು ಬಿದ್ದು ವಿರೂಪಗೊಳ್ಳುವ ಸಂಭ ವವಿದೆ. ಅವುಗಳು ವಿರೂಪಗೊಂಡರೆ, ಶಿವರಾಮ ಕಾರಂತರ ಕೃತಿಗೇ ಅಪಚಾರ ಎಸಗಿದಂತೆ. ಪುಸ್ತಕಗಳಿಗೂ ಹಾನಿ!
ನೂರಾರು ಪುಸ್ತಕಗಳು ಗ್ಯಾಲರಿಯೊಳಗಡೆಯಿದೆ. ಕೆಲ ಸಮಯಗಳ ಹಿಂದೆ ಇಲ್ಲಿ ಆರ್ಯಾಪು ಗ್ರಾ.ಪಂ.ನ ಗ್ರಂಥಾಲಯ ಇತ್ತು. ಸದ್ಯ ಇದನ್ನು ಕುಂಜೂರು ಪಂಜಕ್ಕೆ ಶಿಫ್ಟ್ ಮಾಡಲಾಗಿದೆ. ಒಂದಷ್ಟು ಪುಸ್ತಕಗಳು ಸದ್ಯ ಇದ್ದು, ಅದನ್ನು ಜೋಪಾನವಾಗಿ ಇಡಬೇಕಾಗಿದೆ. ಆಸಕ್ತ ಓದುಗರು, ಪ್ರವಾಸಿಗರು ಸಂದರ್ಶನ ನೀಡಿ, ಪುಸ್ತಕಗಳತ್ತ ಗಮನ ಹರಿಸುತ್ತಾರೆ. ಗ್ರಂಥಾಲಯದ ಒಂದು ಗೋಡೆಗೆ ಸಂಪೂರ್ಣ ಗಾಜು ಅಳವಡಿಸಿದ್ದು, ಇದರ ಸೆರೆಯಿಂದಲೂ ನೀರು ಒಳಬರುತ್ತಿದೆ. ಗಮನಕ್ಕೆ ತರುತ್ತೇನೆ
ಗ್ಯಾಲರಿ ಸೋರಿಕೆ ಬಗ್ಗೆ ಬಾಲವನ ಅಭಿವೃದ್ಧಿ ಸಮಿತಿಯ ರಾಜ್ಯ ಸದಸ್ಯರಾಗಿರುವ ಸಹಾಯಕ ಆಯುಕ್ತರ ಗಮನಕ್ಕೆ ತರುತ್ತೇನೆ. ಸದ್ಯ ಸಹಾಯಕ ಆಯುಕ್ತರು ರಜೆಯಲ್ಲಿದ್ದಾರೆ. ಅವರು ಪರಿಶೀಲನೆ ಮಾಡಿ ಮಾಹಿತಿ ನೀಡಬೇಕು.
– ಅನಂತ ಶಂಕರ
ತಹಶೀಲ್ದಾರ್ – ವಿಶೇಷ ವರದಿ