ಬೀದರ: ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರ್ಯಾಕ್ಟಿಸ್ (ಸಿಪಿ) ಮುಗಿಸಿರುವ ವಿದ್ಯಾರ್ಥಿಗಳು ಸರ್ಕಾರದ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಮಗೆ ಸಂತಸ ತಂದಿದೆ. ಈ ಕೋರ್ಸ್‌ಗಿರುವ ಮಹತ್ವವನ್ನು ಉನ್ನತ ಹುದ್ದೆಗಳಲ್ಲಿ ಇರುವವರು ಸಾಬೀತು ಮಾಡಿದ್ದಾರೆಂದು ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಜಿ.ಎಂ ಗೋಣಿ ಹೇಳಿದರು.
ನಗರದ ಪಟ್ನೆ ಫಂಕ್ಷನ್ ಹಾಲ್‌ನಲ್ಲಿ ನಡೆದ ಹಿರಿಯ ಸಿ.ಪಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಮತ್ತು ಸಿಪಿ ವಿದ್ಯಾರ್ಥಿಗಳ 2ನೇ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾವು ಸುಮಾರು 34 ವರ್ಷ ಸೇವೆ ಸಲ್ಲಿಸಿದ್ದು ಬೀದರನಲ್ಲಿರುವ ಎಲ್ಲ ಸಿಪಿ ವಿದ್ಯಾರ್ಥಿಗಳು ಸರ್ಕಾರ ಪ್ರಮುಖ ಹುದ್ದೆ ಹಾಗೂ ಸಮಾಜದ ಪ್ರಮುಖ ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಹುಬ್ಬಳ್ಳಿಯ ಮತ್ತೋರ್ವ ನಿವೃತ್ತ ಪ್ರಾಚಾರ್ಯ ಚಂದಾ ಕುಲಕರ್ಣಿ ಮಾತನಾಡಿ, ಬೀದರನಲ್ಲಿ ತಮ್ಮ ವಿದ್ಯಾರ್ಥಿಗಳಾಗಿದ್ದವರು ಇಷ್ಟೊಂದು ಎತ್ತರಕ್ಕೆ ಏರಿದ್ದು ಸಂತೋಷದ ವಿಚಾರ. ಇತ್ತೀಚೆಗೆ ಅನೇಕ ಜನ ಮಹಿಳೆಯರು ಸಿಪಿ ಕೋರ್ಸ್ ಮುಗಿಸಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕೋರ್ಸಿನಲ್ಲಿ ವಿದ್ಯಾಭ್ಯಾಸ ಮಾಡಿದವರು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸಲು ಶಕ್ತರಾಗುತ್ತಾರೆಂದು ಹೇಳಿದರು.
ಸಿಪಿ ಕೋಸ್ ಹಿರಿಯ ವಿದ್ಯಾರ್ಥಿ, ಎನ್‌ಎಸ್‌ಎಸ್ ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ್, ಎಐಸಿಸಿ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಬೆಂಗಳೂರು ಡಿಸಿಸಿ ಬ್ಯಾಂಕಿನ ಎಂಡಿ ಪುಂಡಲಿಕ್ ಸಾದುರೆ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿದರು.
ಸಿ.ಪಿ. ವಿಭಾಗದ ಮುಖ್ಯಸ್ಥ ಬಕ್ಕಪ್ಪ ನಿರ್ಣಾಕರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಅಬ್ದುಲ್ ಸತ್ತಾರ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಅಮರೇಶ್ ಸಾಲಿಮಠ, ನರಸಿಂಹ ಹುಬ್ಳಿಕರ್, ಜಿಆರ್‌ಐಸಿಪಿ ಉಪನ್ಯಾಸಕಿ ಸುರೇಖಾ ನಿನ್ನೇಕರ್ ಇದ್ದರು. ಜಾನಪದ ಕಲಾವಿದ ಶಂಭುಲಿಂಗ ವಾಲದೊಡ್ಡಿಯವರ ಜಾನಪದ ಗಾಯನ ಮತ್ತು ವೈಜಿನಾಥ ಸಜ್ಜನಶೆಟ್ಟಿಯವರ ಸಂಗೀತ, ಹಾಸ್ಯ ಕಾರ್ಯಕ್ರಮ ರಂಜಿಸಿತು. 1984ರಿಂದ ಸಿಪಿ ಮುಗಿಸಿರುವ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಹಾಪೂರ ಸಿಟಿಒ ಅಶೋಕ ಶೆಂಬೆಳ್ಳೆ, ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೆ, ಡಿಸಿಸಿ ಬ್ಯಾಂಕಿನ ವಿಜಯಕುಮಾರ ಹೂಗಾರ, ಹೈದ್ರಾಬಾದಿನ ಮಂಗಲಾ ಬೆಮಳಗಿ, ಅನಿತಾ ಪ್ರಭುರಾಜ್, ಶಾಂತಾ ಪಾಟೀಲ, ಸಿದ್ದಮ್ಮ ಹಂಗರಗಿ, ರಾಮರೆಡ್ಡಿ, ರವಿರಾಜ ಪಾಟೀಲ, ವೇದಪ್ರಕಾಶ, ತಾನಾಜಿ ಬಿರಾದಾರ, ಶ್ರೀದೇವಿ ಗಟ್ಟು, ಮಧುಸೂಧನ ಕುಲಕರ್ಣಿ ಇದ್ದರು.