Advertisement

“ಸಂಘಟನೆ ನಡೆಸುವಾಗ ನಾಯಕತ್ವದ ಗುಣ ಮುಖ್ಯ’

08:02 PM Jun 05, 2019 | Sriram |

ಬಂಟ್ವಾಳ : ಸಂಘಟನೆ ನಡೆಸುವಾಗ ನಾಯಕತ್ವದ ಗುಣ ಮುಖ್ಯ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರೀತಿಯಿಂದ ಕರೆದು ಮಾತನಾಡಿಸಿ, ಕಷ್ಟ ಸುಖ ವಿಚಾರಿಸಿ, ಬಂಧುತ್ವವನ್ನು ಬೆಳೆಸಿ ಕೊಳ್ಳಿ. ಎಲ್ಲ ಕಡೆಯಲ್ಲೂ ವೈವಿಧ್ಯಗಳನ್ನು ಹಮ್ಮಿಕೊಳ್ಳಿರಿ ಎಂದು ಭಾರತೀಯ ಜೈನ್‌ ಮಿಲನ್‌ ವಲಯ 8ರ ಹಿರಿಯ ಉಪಾಧ್ಯಕ್ಷ ಡಾ| ಬಿ. ಯಶೋವರ್ಮ ತಿಳಿಸಿದರು.

Advertisement

ಅವರು ಜೂ. 2ರಂದು ಬಿ.ಸಿ. ರೋಡ್‌ ಸ್ವರ್ಶ ಕಲಾ ಮಂದಿರದಲ್ಲಿ ಭಾರತೀಯ ಜೈನ್‌ ಮಿಲನ್‌ ವಲಯ 8ರ ಮಂಗಳೂರು ವಿಭಾಗ ಪದಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ, ಒಂದು ವರ್ಷದಲ್ಲಿ ಹಾಕಿಕೊಳ್ಳುವ ಕಾರ್ಯಕ್ರಮಗಳನ್ನು ಮೊದಲಾಗಿ ಪಟ್ಟಿ ಮಾಡಿ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಸಂಬಂಧಪಟ್ಟ ಘಟಕದ ಪ್ರಮುಖರಲ್ಲಿ ಚರ್ಚಿಸಿ ಎಂದು ಹೇಳಿದರು.

ಸಂಘಟಿತ ಪ್ರಯತ್ನಕ್ಕೆ ಒತ್ತು ನೀಡಲು ಕರೆ
ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್‌ ಮಿಲನ್‌ ವಲಯ 8ರ ಅಧ್ಯಕ್ಷ ಪುಷ್ಪರಾಜ ಜೈನ್‌ ಮಾತನಾಡಿ, ಪದಾಧಿಕಾರಿಗಳು ಸಂಘಟಿತ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ವಲಯ 8ರ ಉಪಾಧ್ಯಕ್ಷ ಜಿತೇಶ್‌ ಜೈನ್‌ ಮಂಗಳೂರು, ಪ್ರ. ಕಾರ್ಯದರ್ಶಿ ರಾಜೇವ್‌ ಎಮ್‌, ನಿಕಟಪೂರ್ವ ಕಾರ್ಯದರ್ಶಿ ಸುಮತಿ ಕುಮಾರ್‌ ದಾವಣಗೆರೆ, ವಲಯ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್‌ ಮಾತನಾಡಿದರು.ವಿಭಾಗ ನಿರ್ದೇಶಕರಾದ ಜಯರಾಜ್‌ ಕಂಬಳಿ, ರಾಜವರ್ಮ ಆರಿಗ, ಸೋಮಶೇಖರ ಶೆಟ್ಟಿ, ಧನ್ಯ ಕುಮಾರ್‌ ರೈ, ಮಹಾವೀರ ಹೆಗ್ಡೆ ಅಂಡಾರ್‌, ದೇವರಾಜ್‌ ವಗಕೆರೆ, ಪ್ರಮೋದ್‌ ಕುಮಾರ್‌, ಧರ್ಮಪಾಲ್‌ ಹೆಗ್ಡೆ ಕಳಸ ಉಪಸ್ಥಿತರಿದ್ದರು. ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜೈನ್‌ ಮಿಲನ್‌ ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಭಾರತೀಯ ಜೈನ್‌ ಮಿಲನ್‌ ಮಂಗಳೂರು ವಿಭಾಗ ಉಪಾಧ್ಯಕ್ಷ ಸುದರ್ಶನ ಜೈನ್‌ ಸ್ವಾಗತಿಸಿ, ಪ್ರಸ್ತಾವಿಸಿದರು. ಬಂಟ್ವಾಳ ಜೈನ್‌ ಮಿಲನ್‌ ಅಧ್ಯಕ್ಷ ಡಾ| ಸುದೀಪ್‌ ಕುಮಾರ್‌ ಸಿದ್ದಕಟ್ಟೆ ವಂದಿಸಿದರು. ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next