Advertisement

ಒಕ್ಕಲಿಗರ ಸಮಾವೇಶಕ್ಕೆ ತೆರಳಿದ ಮುಖಂಡರು

01:44 PM Mar 14, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನೆಲಮಂಗಲದ ಬಳಿ ನಡೆಯುತ್ತಿರುವಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಬೆಂಗಳೂರು ವಿಭಾಗೀಯ ಸಮಾವೇಶಕ್ಕೆಜಿಲ್ಲೆಯಿಂದ ಒಕ್ಕಲಿಗ ಸಮಾಜದವರು ಅಪಾರ ಸಂಖ್ಯೆಯಲ್ಲಿ ತೆರಳಿದರು.

Advertisement

ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಸಮಾವೇಶ ದಲ್ಲಿ ಭಾಗವಹಿಸಲು ಎಲ್ಲಾ ತಾಲೂಕುಗಳಿಂದ ಒಕ್ಕಲಿಗ ಸಮಾಜದವರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಯಾತಾಲೂಕುಗಳು ಒಕ್ಕಲಿಗರ ಸಂಘದಪದಾಧಿಕಾರಿಗಳು ಮತ್ತು ಒಕ್ಕಲಿಗ ಸಮಾಜದ ಮುಖಂಡರು ಬಸ್‌ ಮೂಲಕ ನೆಲಮಂಗಲಕ್ಕೆ ಪ್ರಯಾಣ ಬೆಳೆಸಿದರು.

ರೈತ ಸಂಘ ಹಾಗೂ ಹಸಿರುಸೇನೆ (ದಿ.ಪುಟ್ಟಣ್ಣಯ್ಯ ಬಣ) ಶಿಡ್ಲಘಟ್ಟತಾಲೂಕು ಅಧ್ಯಕ್ಷ ರವಿಪ್ರಕಾಶ್‌ ಮಾತ ನಾಡಿ, ರಾಜ್ಯದಲ್ಲಿ(ಉತ್ತರ ಕರ್ನಾಟದ ಸಹಿತ) ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಸ್ವಾಮೀಜಿ ಗಳ ಮುಖಂಡತ್ವದಲ್ಲಿ 6 ಜಿಲ್ಲೆಗಳಒಕ್ಕಲಿಗರ ಸಮಾವೇಶ ನಡೆಯುತ್ತಿದ್ದು, ಅದರಲ್ಲಿ ಶಿಡ್ಲಘಟ್ಟ ತಾಲೂಕು ಸೇರಿದಂತೆಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿಸಮಾಜದ ಮುಖಂಡರು ಭಾಗವಹಿ ಸುತ್ತಿದ್ದಾರೆ ಎಂದರು.

ಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂ ಟದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಳಮಾಚನಹಳ್ಳಿ ರವಿಕುಮಾರ್‌, ಕೋಟೆ ಚನ್ನೇಗೌಡ, ನಂಜೇಗೌಡ, ಶಂರ್‌ನಾರಾಯಣ, ನಾಗೇಶ್‌, ಮಂಜುನಾಥ್‌, ರಮೇಶ್‌, ಶ್ರೀನಿವಾಸ್‌, ರಾಮಚಂದ್ರರೆಡ್ಡಿ, ಗೋಪಾಲರೆಡ್ಡಿ, ನಾಗರಾಜ್‌, ಸುಬ್ರಹ್ಮಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next