Advertisement

R Ashok: ರಾಜ್ಯದಲ್ಲಿ ತಾಲಿಬಾನ್ ಮಾದರಿ ಸರಕಾರ; ವಿಪಕ್ಷ ನಾಯಕ ಅಶೋಕ್

01:43 PM Jun 12, 2024 | Team Udayavani |

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತಾಲಿಬಾನ್ ಮಾದರಿಯ ಆಡಳಿತ ನಡೆಸುತ್ತಿದೆ. ಕಾನೀನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ‌ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಬೋಳಿಯಾರ್ ನಲ್ಲಿ ಭಾರತ್ ಮಾತಾ ಕಿ ಜೈ ಹೇಳಿದ ಬಿಜೆಪಿ ಕಾರ್ಯಕರ್ತರಿಗೆ ಡ್ರ್ಯಾಗನ್ ನಿಂದ‌ ಇರಿದು ಕೊಲೆಗೆ ಯತ್ನಿಸಲಾಗಿದೆ. ಇದು ಪೂರ್ವ ಯೋಜಿತ ಕೃತ್ಯ ಎಂದರು.

Advertisement

ಚೂರಿ ಇರಿತಕ್ಕೊಳಗಾದವರ ಆರೋಗ್ಯ ವಿಚಾರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಬಿಟ್ಡು ಬೇರೇನು ಘೋಷಣೆ ಹಾಕಿಲ್ಲ. ಹಾಕಿದ್ದರೆ ಪೊಲೀಸರು ದಾಖಲೆ ನೀಡಲಿ ಎಂದು ಅಶೋಕ್ ಹೇಳಿದರು.

ನಾಳೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಧಾನ ಸಭೆಯಲ್ಲಿ ಹೋರಾಟ ನಡೆಯಲಿದೆ ಎಂದರು.

ಗಾಯಾಳುಗಳಿಗೆ ಜಿಲ್ಲಾಡಳಿತ ಚಿಕಿತ್ಸೆಯ ವೆಚ್ಚ ನೀಡಬೇಕು. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾದ ಕೇಸನ್ನು ವಾಪಸ್ ಪಡೆಯಬೇಕು. ಪಕ್ಷದಿಂದಲೂ ನೆರವು ನೀಡಲಾಗುವುದು. ಬಿಜೆಪಿ ಕಾರ್ಯಕರ್ತರು ಹೆದರಬೇಕಾಗಿಲ್ಲ. ಅವರ ಜತೆ ಪಕ್ಷ ನಿಲ್ಲುತ್ತದೆ. ರಾಜ್ಯ ಕಾಂಗ್ರೆಸ್ ನ ಸಾಧನೆ ಕಳೆದ ಒಂದು ವರ್ಷದಲ್ಲಿ ಶೂನ್ಯ.‌ಇದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ಮೈತ್ರಿ ಮುಂದುವರಿಕೆ:

Advertisement

ಬಿಬಿಎಂಪಿ, ತಾ.ಪಂ ಜಿ.ಪಂ ಚುನಾವಣೆಗೂ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next