Advertisement

ಕಾಶ್ಮೀರದಲ್ಲಿ ಲೀಡರ್‌!

11:15 AM Feb 08, 2017 | |

“ಲೀಡರ್‌’ ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಪಾತ್ರ ಏನಿರಬಹುದು ಎಂದು ಎಲ್ಲರಿಗೂ ಕುತೂಹಲವಿತ್ತು. ಆದರೆ, ಶಿವರಾಜಕುಮಾರ್‌ ಅವರಾಗಲೀ, ಚಿತ್ರತಂಡದವರಾಗಲೀ ಈ ಬಗ್ಗೆ ಮಾತಾಡಿರಲಿಲ್ಲ. ಏನಿದು “ಲೀಡರ್‌’ ಎಂದೊಮ್ಮೆ ಕೇಳಿದಾಗ, , “ಫಾಲೋವರ್ನ ಇಟ್ಟುಕೊಂಡು ತಿರುಗೋನು ಲೀಡರ್‌ ಅಲ್ಲ. ಲೀಡರ್ನ ಹುಟ್ಟುಹಾಕುವವನೇ ನಿಜವಾದ ಲೀಡರ್‌’ ಎಂಬ ಉತ್ತರ ಶಿವರಾಜಕುಮಾರ್‌ ಅವರಿಂದ ಬಂದಿತ್ತು.

Advertisement

ಇದೀಗ ಶಿವರಾಜಕುಮಾರ್‌ ಅವರ ಪಾತ್ರವೇನು ಎಂಬುದು ಕೊನೆಗೂ ಗೊತ್ತಾಗಿದೆ. “ಲೀಡರ್‌’ ಚಿತ್ರದಲ್ಲಿ ಶಿವರಾಜಕುಮಾರ್‌ ಅವರು ಆರ್ಮಿ ಆಫೀಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಶ್ಮೀರದಲ್ಲಿ ಸದ್ಯಕ್ಕೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಶಿವರಾಜಕುಮಾರ್‌ ಅವರು ಆರ್ಮಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ವಿಜಯ್‌ ರಾಘವೇಂದ್ರ, ಗುರುರಾಜ್‌ ಜಗ್ಗೇಶ್‌ ಮುಂತಾದವರಿದ್ದಾರೆ.

“ಲೀಡರ್‌’ ಚಿತ್ರದಲ್ಲಿ ಪ್ರಣೀತಾ ನಾಯಕಿಯಾಗಿದ್ದಾರೆ. ಇನ್ನು ಶರ್ಮಿಳಾ ಮಾಂಡ್ರೆ, ಆಶಿಕಾ, ವಂಶಿಕೃಷ್ಣ, ಚಿ. ಗುರುದತ್‌, ಪ್ರಕಾಶ್‌ ಬೆಳವಾಡಿ, ಶಂಕರ್‌ ಅಶ್ವತ್ಥ್ ಮುಂತಾದವರು ನಟಿಸುತ್ತಿದ್ದಾರೆ. ಶ್ರೀಗರ ಕಿಟ್ಟಿ ಪುತ್ರಿ ಬೇಬಿ ಪರಿಣಿತಾ ಕೂಡಾ ಶಿವಣ್ಣನ ಮಗಳಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತವಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರವನ್ನು ತರುಣ್‌ ಶಿವಪ್ಪ ಮತ್ತು ಹಾರ್ದಿಕ್‌ ಗೌಡ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next