Advertisement

ಪೇಜಾವರ ಶ್ರೀಗೆ ನಾಯಕತ್ವ ಕೊಡಿ

11:14 AM Jul 24, 2018 | Team Udayavani |

ಉಡುಪಿ: ಅಯೋಧ್ಯೆ- ಬಾಬ್ರಿ ಮಸೀದಿ, ರಾಮಜನ್ಮ ಭೂಮಿ ಕುರಿತ ತೀರ್ಪು ಸದ್ಯದಲ್ಲಿಯೇ ಬರಲಿರುವ ನೆಲೆಯಲ್ಲಿ ಉಭಯ ಸಮುದಾಯದವರನ್ನು ಸಮಭಾವದಿಂದ ಕಾಣುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಸಂತ ಮಹಾಸಭಾ, ಸಮನ್ವಯ ಸಮಿತಿಗಳ ನೇತೃತ್ವ ವಹಿಸಬೇಕು ಎಂದು ಶ್ರೀ ಪೇಜಾವರ ಸ್ವಾಮೀಜಿಗಳ ಮುಸ್ಲಿಂ ಅಭಿಮಾನಿಗಳ ಬಳಗದ ಅಧ್ಯಕ್ಷ ಅನ್ಸರ್‌ ಅಹಮ್ಮದ್‌ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದ್ದಾರೆ.

Advertisement

ಹಲವು ದಶಕಗಳಿಂದ ಉಭಯ ಸಮುದಾಯಗಳ ನಡುವೆ ಇರುವ ವಿವಾದ ಇತ್ಯರ್ಥಗೊಂಡಿಲ್ಲ. ಇದೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆಯಿದೆ ಎಂದರು.

ವಿವಾದಿತ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಪೇಜಾವರ ಶ್ರೀಗಳು ಪ್ರಾರಂಭದಿಂದಲೂ ಮುಂಚೂಣಿಯಲ್ಲಿದ್ದವರು. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಅಯೋಧ್ಯೆಯ ವಿವಾದಿತ ಸಮಸ್ಯೆ ಬಗ್ಗೆ ಉಭಯ ಸಮುದಾಯದ ಮನವೊಲಿಸಿ ಸಾಮರಸ್ಯದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಥಮ ಹೆಜ್ಜೆ ಇಟ್ಟಿದ್ದರು. ಸಂತ ಸಮ್ಮೇಳನ, ಇಫ್ತಾರ್‌ ಕೂಟಗಳಿಂದ ಪರಧರ್ಮ ಸಹಿಷ್ಣುತೆ ಹೊಂದಿರುವ ಶ್ರೀಗಳಿಗೆ ನಾಯಕತ್ವ ನೀಡಬೇಕೆಂದು ಅವರು ಆಗ್ರಹಿಸಿದರು.

ಬಳಗದ ಸದಸ್ಯರಾದ ಮಹಮ್ಮದ್‌ ಆರೀಫ್, ಕೋಯಾ ಅಲಿ ಅಹಮ್ಮದ್‌, ಎಂ.ಎಸ್‌. ಅಬ್ದುಲ್‌ ರೆಹಮಾನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next