Advertisement

ಹೊಂದಾಣಿಕೆ ಜೀವನ ನಡೆಸಿ: ಡಾ|ಶಂಭು

12:45 PM Apr 01, 2022 | Team Udayavani |

ಲೋಕಾಪುರ: ಪತಿ-ಪತ್ನಿಯ ದಾಂಪತ್ಯದಲ್ಲಿ ಸಮನ್ವಯ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಅವರ ಬದುಕು ಸಮಾಜದಲ್ಲಿ ಉತ್ತಮ ಆದರ್ಶ ದಂಪತಿ ಆಗಲು ಸಾಧ್ಯವೆಂದು ಇಳಕಲ್‌ ಜಾನಪದ ವಿದ್ವಾಂಸ ಡಾ| ಶಂಭು ಬಳಿಗಾರ ಹೇಳಿದರು.

Advertisement

ಪಟ್ಟಣದ ಶ್ರೀ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲೂಕು ಘಟಕದ ಸಹಯೋಗದಲ್ಲಿ ಶ್ರೀಮತಿ ಪ್ರೇಮಕ್ಕ ಮತ್ತು ಲೋಕಣ್ಣ ಚ. ಉದಪುಡಿ ಜಿಲ್ಲಾ ಆದರ್ಶ ದಂಪತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಂದೆ-ತಾಯಿ ಋಣ ತೀರಿಸಬೇಕು. ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಜ್ಜನರನ್ನಾಗಿ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವವರಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಲೋಕಾಪುರ ಪಟ್ಟಣ ಕಲೆ ಸಾಹಿತ್ಯದ ಕಣಜ, ಈ ನಿಟ್ಟಿನಲ್ಲಿ ಹಲವಾರು ಅರ್ಥಪೂರ್ಣವಾದಂತಹ ಸಾಹಿತ್ಯ ಚಟುವಟಿಕೆ ಸಂಯೋಜನೆ ಮಾಡಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಉದಪುಡಿ ಪರಿವಾರದವರು ಕನ್ನಡದ ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದಂತಹ ಕೊಡುಗೆ ನೀಡಿದ ಕುಟುಂಬ, ದಿ| ಕೃಷ್ಣಾಜಿ ದೇಶಪಾಂಡೆ ಸೇರಿದಂತೆ ಹಲವಾರು ಕಲಾವಿದರು, ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮಾಜಿ ಶಾಸಕ, ವೀರಪುಲಕೇಶಿ ಬ್ಯಾಂಕ್‌ ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಬಾಲಾಜಿ ಶುಗರ್ಸ್‌ ನಿರ್ದೇಶಕ ಎಚ್‌.ಎಲ್‌. ಪಾಟೀಲ ಅವರಿಗೆ ಜಿಲ್ಲಾ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಣ್ಯ ವ್ಯಾಪಾರಸ್ಥರಾದ ಲೋಕಣ್ಣ ಚ. ಉದಪುಡಿ, ಡಾ| ಕೆ.ಎಲ್‌. ಉದಪುಡಿ ಅಧ್ಯಕ್ಷತೆ ವಹಿಸಿದ್ದರು.

Advertisement

ಜಿಲ್ಲಾ ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಯುವ ಉದ್ಯಮಿ ಗುರುರಾಜ ಉದಪುಡಿ, ಪವನ ಉದಪುಡಿ, ಜಿಲ್ಲಾ ಕಸಾಪ ಗೌರವಕಾರ್ಯದರ್ಶಿಗಳಾದ ಚಂದ್ರಶೇಖರ ಕಾಳನ್ನವರ, ಸಿದ್ಧರಾಮ ಶಿರೋಳ, ಕಸಾಪ ತಾಲೂಕಾ ಘಟಕ ಅಧ್ಯಕ್ಷ ಆನಂದ ಪೂಜಾರಿ, ಕಸಾಪ ವಲಯ ಘಟಕ ಅಧ್ಯಕ್ಷ ಎಸ್‌.ಎಂ. ರಾಮದುರ್ಗ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ನೀಲಗುಂದ, ಸಾಹಿತಿ ಸಿದ್ದು ದಿವಾನ, ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಇದ್ದರು. ಕೃಷ್ಣಾ ಯಾದವಾಡ ನಿರೂಪಿಸಿದರು. ಸುಜಾತಾ ಜೋಶಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next