ತೀರ್ಥಹಳ್ಳಿ: ಪಟ್ಟಣದ ಸಮೀಪ ಇರುವ ಯಡೇಹಳ್ಳಿಕೆರೆ ಅಭಿವೃದ್ಧಿಗೆ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮಂಗಳವಾರ 25 ಲಕ್ಷ ರೂ ಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.
ಹೊದಲ ಅರಳಾಪುರ ಹಾಗೂ ಮುಳುಬಾಗಿಲು ಗ್ರಾಮಪಂಚಾಯತಿಯ ಸಹಯೋಗದಲ್ಲಿ ಉದ್ಯೋಗ ಖಾತರಿ ಮೂಲಕ ಯಡೇಹಳ್ಳಿಕೆರೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ಹಿಂದೆಯೂ ಕೆರೆಯ ದಂಡೆಯಲ್ಲಿ ಪಟ್ಟಣಪಂಚಾಯತಿ ಹಾಗೂ ಗ್ರಾಮಪಂಚಾಯತಿಗಳ ನೆರವಿನಿಂದ ಮರಗಿಡಗಳನ್ನು ಬೆಳೆಸಿ, ಬೇಲಿ ನಿರ್ಮಿಸಿ ಸುಂದರಗೊಳಿಸಲಾಗಿದ್ದು ಈ ಮಹತ್ಕಾರ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾದದ್ದು.
ಇದನ್ನೂ ಓದಿ: ತೀರ್ಥಹಳ್ಳಿ: ಕುಡಿದ ಮತ್ತಿನಲ್ಲಿ ಶಾಲೆಯ ವಿಗ್ರಹ ಧ್ವಂಸ ಮಾಡಿದ ಕುಡುಕ
ಸಚಿವರು ತಮ್ಮೂರು ಆರಗದ ಹಿರೀಕೆರೆ ಯನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸುವಲ್ಲಿ ವಿಶೇಷ ಕಾಳಜಿ ತೋರಿಸಿದ್ದು ಈಗ ಹಿರೀಕೆರೆಯು ಹೊಸ ಮೆರಗಿನಿಂದ ಕಂಗೊಳಿಸುತ್ತಿದೆ. ಇದೇ ಮಾದರಿಯಲ್ಲಿ ಆರಗ ಜ್ಞಾನೇಂದ್ರ ರವರು ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಯಡೇಹಳ್ಳಿಕೆರೆ ಯನ್ನೂ ಅಭಿವೃದ್ಧಿ ಪಡಿಸುವ ಪಣ ತೊಟ್ಟಿದ್ದು ಪರಿಸರ ಪ್ರಿಯರ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ನಾಗರಾಜ್ ಶೆಟ್ಟಿ, ಮುಳುಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಆರ್.ಮೋಹನ್,ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ,ತಾಲ್ಲೂಕು ಪಂಚಾಯಿತಿ ಸಿ.ಇ.ಓ ಆಶಾಲತಾ,ಹೊದಲ ಗ್ರಾಮ ಪಂಚಾಯಿತಿ ಹಾಗೂ ಮುಳುಬಾಗಿಲು ಗ್ರಾಮ ಪಂಚಾಯಿತಿಯ ಸದಸ್ಯರು ಹಾಜರಿದ್ದರು.