ಕಾಪು: ಪರಸ್ಪರ ಪ್ರೀತಿ , ವಿಶ್ವಾಸ, ಸ್ನೇಹ ಮತ್ತು ಸೇವೆಯೊಂದಿಗೆ ಉತ್ತಮ ಪ್ರಗತಿ ಸಾಧಿಸುವುದು ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸುಮಾರು 40 ವರ್ಷಗಳಷ್ಟು ಇತಿಹಾಸವುಳ್ಳ ಕಾಪು ಲಯನ್ಸ್ ಕ್ಲಬ್‌ನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಲುವಾಗಿ ಯುವಕರನ್ನು ಸೆಳೆಯುವ ಮತ್ತು ಫ್ಯಾಮಿಲಿ ಮೆಂಬರ್‌ಶಿಪ್ ಮುಖಾಂತರ ಸದಸ್ಯರ ಸಂಖ್ಯೆಯನ್ನು ವೃದ್ಧಿಗೊಳಿಸಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಬಿ. ದಿವಾಕರ ಶೆಟ್ಟಿ ಹೇಳಿದರು.
ಮಾ. 27ರಂದು ಕಾಪು ಲಯನ್ಸ್ ಕ್ಲಬ್‌ಗ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕಾಪು ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ತಲ್ಲೂರು ಶಿವರಾಮ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ, ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಹರೀಶ್ ಕೆ. ನಾಯಕ್ ಇವರನ್ನು ಸಮ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್‌ಗಳಾದ ಸುರೇಶ್ ಶೆಟ್ಟಿ, ಬಸೂÅರು ರಾಜೀವ್ ಶೆಟ್ಟಿ, ಶೀÅಧರ ಶೇಣವ, ಮಧುಸೂದನ್ ಹೆಗ್ಡೆ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಸುನಿಲ್ ಸಾಲ್ಯಾನ್, ಪ್ರಾಂತ್ಯಾಧ್ಯಕ್ಷ ಮಹಮದ್ ಹನೀಫ್, ಕಾಪು ಲಯನ್ಸ್ ಕ್ಲಬ್ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಲಯನ್ಸ್ ಅಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ವರುಣ್ ಶೆಟ್ಟಿ ವಂದಿಸಿ, ಕಾಪು ಪುರಸಭೆಯ ಸ್ವತ್ಛ ಭಾರತ ಅಭಿಯಾನದ ರಾಯಭಾರಿ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು.