ಹೊನ್ನಾಳಿ: ಇತ್ತೀಚಿನ ದಿನಗಳಲ್ಲಿನ್ಯಾಯವಾದಿಗಳ ಮೇಲೆ ಅಮಾನುಷ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿದ್ದು ವಕೀಲ ಸಮೂಹಕ್ಕೆ ಜವ ಭದ್ರತೆ ಇಲ್ಲದಂತಾಗಿದೆ. ತಕ್ಷಣ ಕೇಂದ್ರ ಸರ್ಕಾರ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ವಕೀಲರ ಸಂಘ ಒತ್ತಾಯಿಸುತ್ತದೆ ಎಂದು ಸಂಘದ ಉಪಾಧ್ಯಕ್ಷ ಉಮಾಕಾಂತ್ ಜೋಯ್ಸ ಹೇಳಿದರು.
ವಕೀಲರ ಸಂಘದ ವತಿಯಿಂದ ಪಟ್ಟಣದ ನ್ಯಾಯಾಲಯದ ಹೊರ ಅವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ತೆಲಂಗಾಣ ರಾಜ್ಯದಲ್ಲಿ ಹಾಡುಹಗಲೇ ಸಾರ್ವಜನಿಕವಾಗಿ ವಕೀಲ ದಂಪತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನೆ ನಡೆದು ಕೆಲವೇ ದಿನಗಳಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ವಕೀಲ ತಾರಿಹಳ್ಳಿ ವೆಂಕಟೇಶ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ನಡೆದಿದೆ. ಇದು ಖಂಡನೀಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಚ್. ಜಿ. ಬಸವನಗೌಡ, ಕಾರ್ಯದರ್ಶಿ ಎಂ.ಗುಡ್ಡಪ್ಪ, ಸಹಕಾರ್ಯದರ್ಶಿ ಮಂಜುಳ, ಖಜಾಂಚಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಉಮೇಶ್, ವಕೀಲರಾದ ಕೆ.ಆರ್. ಮಂಜುನಾಥ್, ಬಳ್ಳೂರು ರವಿಕುಮಾರ್, ಜಿ.ಎಂ.ಹನುಮಂತಪ್ಪ, ಪುರುಷೋತ್ತಮ, ಶಿವಯೋಗಾರಾಧ್ಯ ಮಾಹಾಬಲೇಶ್, ಶ್ರೀನಾಥ್, ಮಂಜಪ್ಪ,ಚೇತನ್‌ಕುಮಾರ್, ಸುನಿಲ್‌ಕುಮಾರ್, ಮುತ್ತಿತರರು ಇದ್ದರು.