ಲಂಡನ್: ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಪದವಿಗೂ ಮೊದಲೇ, ತನ್ನ ಮನೆಯ ಮಾಲೀಕನ ವಿರುದ್ಧ ನ್ಯಾಯಾಲಯದಲ್ಲಿ ವಾದಿಸಿ ಗೆದ್ದಿದ್ದಾನೆ.
ಬ್ರಿಟನ್‌ನ ಜ್ಯಾಕ್ ಸಿಮ್(19) ವರ್ಷದ ಹಿಂದೆ ಪದವಿಗೆ ಸೇರಿಕೊಂಡಾಗ, ಆನ್‌ಲೈನ್‌ನಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕಿ, ಅದರಲ್ಲಿ ವಾಸಿಸಲು ಮುಂದಾಗಿದ್ದಾನೆ.
ಆದರೆ ಆನ್‌ಲೈನ್‌ನಲ್ಲಿ ನೋಡಿದ್ದ ಫೋಟೋಗೂ, ಆ ಮನೆಗೂ ಭಾರೀ ವ್ಯತ್ಯಾಸವಿತ್ತಂತೆ. ಹಾಗಾಗಿ ಆತ ಮನೆ ಖಾಲಿ ಮಾಡಿದ್ದಾನೆ. ಆದರೆ ಅದರ ಮಾಲೀಕ ಮುಂಗಡ ಹಣ ವಾಪಸು ಮಾಡದೆ, ಕಾಡಿಸಿದ್ದಾನೆ.
ಆ ಹಿನ್ನೆಲೆ, ಮಾಲೀಕನ ವಿರುದ್ಧ ದಾವೆ ಹೂಡಿ, ನ್ಯಾಯಾಲಯದಲ್ಲಿ ವಾದಿಸಿರುವ ಯುವಕ ಆ ಕೇಸ್‌ನಲ್ಲಿ ಗೆದ್ದಿದ್ದಾನೆ ಕೂಡ.
ಇದನ್ನೂ ಓದಿ:ನಿಮ್ಮಲ್ಲಿ ಐಫೋನ್,ಮ್ಯಾಕ್‌ಬುಕ್,ಆ್ಯಪಲ್ ವಾಚ್‌ಗಳಿದ್ದರೆ ಬೇಗನೆ ಅಪ್‌ಡೇಟ್ ಮಾಡಿಕೊಳ್ಳಿ
ಮುಂಗಡದ ಜೊತೆ ಮೊದಲ ತಿಂಗಳ ಬಾಡಿಗೆಯನ್ನೂ ವಾಪಸು ಮಾಡಲು ನ್ಯಾಯಾಲಯ ಆದೇಶಿಸಿದೆ. ತನ್ನ ವಾದಕ್ಕೆ ಪಠ್ಯ ಪುಸ್ತಕಗಳ ಸಹಾಯ ಪಡೆದಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ.