Advertisement

ಸ್ಯಾಂಡಲ್ ವುಡ್ ನ ಮೊದಲ ಡಿಜಿಟಲ್ ಬಿಡುಗಡೆ “ಲಾ” ಚಿತ್ರದ ಟ್ರೈಲರ್ ರಿಲೀಸ್

02:45 PM Jul 10, 2020 | Suhan S |

 ಬೆಂಗಳೂರು : ಸ್ಯಾಂಡಲ್ ವುಡ್  ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿ ಬಿಡುಗಡೆಯಾಗಲಿರುವ  “ಲಾ” ಚಿತ್ರದ ಅಧಿಕೃತ ಟ್ರೈಲರ್ ಶುಕ್ರವಾರ ರಿಲೀಸ್ ಆಗಿದೆ.

Advertisement

ಲಾ ಚಿತ್ರದ ಕಥೆ ಸಸ್ಪೆನ್ಸ್ ಯೊಟ್ಟಿಗೆ ಕ್ರೈಮ್  ಥ್ರಿಲ್ಲರ್ ಆಗಿರಲಿದ್ದು ನ್ಯಾಯಕ್ಕಾಗಿ  ಹೆಣ್ಣೊಬ್ಬಳು ವ್ಯವಸ್ಥೆಯಲ್ಲಿ ಅಡಗಿರುವ ಕಾಣದ ಕೈಗಳನ್ನು ಕೆದಕಿ ಕಾನೂನು ದಾರಿಯಲ್ಲಿ ಹೆಜ್ಜೆಯಿಡುವ ರೋಚಕತೆ ಇರಲಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಒಂದಿಷ್ಟು ಎಳೆಯನ್ನು ವೀಕ್ಷಕರ ತಲೆಯೊಳಗೆ ಬಿಟ್ಟು ಹೋಗಿದೆ.

ಪಾತ್ರಧಾರಿ ಮತ್ತು ಸೂತ್ರಧಾರಿ ಇಬ್ಬರ ನಡುವೆ ನ್ಯಾಯ ಯಾರ ಪಾಲಿಗೆ ದಕ್ಕುತ್ತದೆ ಎನ್ನುವುದನ್ನು ಚಿತ್ರದ ಟ್ರೈಲರ್ ನಲ್ಲಿ ವಿಭಿನ್ನವಾಗಿ ಸಣ್ಣ ಜಾಡನ್ನು ತೋರಿಸಿದ್ದಾರೆ ಅಷ್ಟೇ. ಪಾತ್ರಧಾರಿ ಸೂತ್ರಧಾರಿಯನ್ನು ಹುಡಕುವುದರ ನಡುವೆ ಸಾಗುವುದು ಅನ್ಯಾಯಕ್ಕೊಳಗಾದ ಹೆಣ್ಣೊಬ್ಬಳದ ಬಾಳಿನ ಸತ್ಯಾಸತ್ಯತೆ. ತನ್ನ ಮಾರ್ಗದರ್ಶಕರ ಸಹಾಯದಿಂದ ನಂದಿನಿ ತನಗೆ ಆದ ಅನ್ಯಾಯವನ್ನು ಹೇಗೆ ಕಾನೂನಿನ ಮೂಲಕ ಹೋರಾಡಿ ಬಗೆಹರಿಸುತ್ತಾಳೆ ಎನ್ನುವುದನ್ನು ನೋಡಲು ಜುಲೈ 17 ರ ವರೆಗೆ ಕಾಯಬೇಕು. ಲಾ ಜುಲೈ 17 ರಂದು ಆಮೇಜಾನ್ ಪ್ರೈಮ್ ನಲ್ಲಿ ನೇರವಾಗಿ ಬಿಡುಗಡೆಯಾಗುವ ಮೊದಲ ಕನ್ನಡ ಚಿತ್ರ.

ಚಿತ್ರದಲ್ಲಿ ದೊಡ್ಡ ತಾರಂಗಣವಿರಲಿದೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ರಾಗಿಣಿ ಪ್ರಜ್ವಲ್  ರಿಗೆ ಇದು ಮೊದಲ ಚಿತ್ರ. ಇನ್ನುಳಿದಂತೆ ಸುಧಾರಾಣಿ, ಅಚ್ಯುತ್ ಕುಮಾರ್, ಮುಖ್ಯಮಂತ್ರಿ ಚಂದ್ರು, ರಾಜೇಶ್ ನಟರಾಜ, ಅವಿನಾಶ್ ಸೇರಿದಂತೆ ಇತರ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ.

ಲಾ ಚಿತ್ರವನ್ನು ರಘು ಸಮರ್ತ್ ನಿರ್ದೇಶನ ಮಾಡಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಎಂ. ಗೋವಿಂದ ಅವರು ನಿರ್ಮಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಚಿತ್ರದಲ್ಲಿ ಕೇಳಿ ಬರಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next