Advertisement

Law: ಸಬಲ ನ್ಯಾಯದಾನದಿಂದ ವಿಕಸಿತ ಭಾರತ: ಪ್ರಧಾನಿ ಮೋದಿ

11:29 PM Jan 28, 2024 | Team Udayavani |

ಹೊಸದಿಲ್ಲಿ: ಸಬಲ ನ್ಯಾಯದಾನ ವ್ಯವಸ್ಥೆಯಿಂದ ವಿಕಸಿತ ಭಾರತ ನಿರ್ಮಾಣ ಆಗಲು ಸಾಧ್ಯವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಹೊಸದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್‌ನ 75ನೇ ವರ್ಷಾ ಚರಣೆ ಸಂಭ್ರಮದಲ್ಲಿ ಮಾತನಾಡಿ , ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆಗೊಂಡ 3 ಹೊಸ ಅಪರಾಧ ಕಾಯ್ದೆಗಳು ದೇಶದ ಕಾನೂನು, ಪೊಲೀಸ್‌ ಮತ್ತು ತನಿಖಾ ವ್ಯವಸ್ಥೆಗೆ ಹೊಸ ರೂಪ ನೀಡಲಿವೆ. ಸಬಲವಾಗಿರುವ ನ್ಯಾಯದಾನ ವ್ಯವಸ್ಥೆ ಕೂಡ ವಿಕಸಿತ ಭಾರತ ನಿರ್ಮಾಣದ ಒಂದು ಅಂಗವೇ ಆಗಿದೆ ಎಂದರು. ಇದೇ ವೇಳೆ ಸುಪ್ರೀಂಕೋರ್ಟ್‌ ಸಂಕೀರ್ಣ ವನ್ನು ವಿಸ್ತರಿಸುವ ಅಗತ್ಯೆಯನ್ನು ಸರಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಕಳೆದ ವಾರವೇ ಸರಕಾರ ಸುಪ್ರೀಂಕೋರ್ಟ್‌ ಸಂಕೀರ್ಣ ವಿಸ್ತೀರ್ಣಕ್ಕಾಗಿ 800 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದೂ ಹೇಳಿದರು .

Advertisement

ಡಿಜಿಟಲ್‌ನಿಂದ ಕ್ಲೌಡ್‌ ವ್ಯಾಪ್ತಿಗೆ: ಸುಪ್ರೀಂನಲ್ಲಿ ಸದ್ಯ ಡಿಜಿಟಲ್‌ ವ್ಯವ ಸ್ಥೆಯಲ್ಲಿ ಮಾಹಿತಿ ದೊರೆಯುತ್ತಿದ್ದು, 1950ರಿಂದ ಮೊದಲ್ಗೊಂಡು 519 ಭಾಗಗಳಲ್ಲಿ 36308 ಕೇಸುಗಳ ತೀರ್ಪು ಗಳು ಅದರಲ್ಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ಕ್ಲೌಡ್‌ ಆಧಾರಿತ ವ್ಯವಸ್ಥೆ ಅಳವಡಿ ಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next