Advertisement
ವೈದ್ಯರನ್ನು ದೈಹಿಕ ಹಿಂಸೆಗೆ ಗುರಿಪಡಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು, ಕ್ಲಿನಿಕ್ ಮತ್ತು ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇತ್ಯಾದಿ ತಡೆಗಟ್ಟಲು ಈಗಾಗಲೇ ಕೇರಳವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಾನೂನು ಜಾರಿಗೊಳಿಸಲಾಗಿದೆ. ಅದಾಗ್ಯೂ ವೈದ್ಯರ ಮೇಲಿನ ಹಿಂಸೆ ತಪ್ಪಿಲ್ಲ. ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದ ವೃತ್ತಿಪರರು, ವಿಶೇಷವಾಗಿ ವೈದ್ಯರು ಮತ್ತು ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸುವ ಅಗತ್ಯದ ಚರ್ಚೆ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ.
Related Articles
Advertisement
ವಿಧೇಯಕ ಮೂರು ರೀತಿಯ ಶಿಕ್ಷೆಯನ್ನು ಒಳಗೊಂಡಿದೆ. ಮೊದಲನೆಯದಾಗಿ, ವಕೀಲರನ್ನು ದೈಹಿಕವಾಗಿ ಥಳಿಸುವವರನ್ನು ಎರಡು ವರ್ಷ ಜೈಲು ಶಿಕ್ಷಗೆ ಒಳಪಡಿಸಬಹುದಾಗಿದೆ. ಅಲ್ಲದೆ ಇಪ್ಪತ್ತೆçದು ಸಾವಿರ ರೂಪಾಯಿವರೆಗೆ ದಂಡ ತೆರ ಬೇಕಾಗಬಹುದು. ಎರಡನೆಯದಾಗಿ, ವಕೀಲರಿಗೆ ತೀವ್ರ ಗಾಯ ಉಂಟುಮಾಡುವವರನ್ನು ಏಳು ವರ್ಷದ ಜೈಲು ಶಿಕ್ಷೆಗೆ ಗುರಿಪಡಿಸುವುದಲ್ಲದೆ ಅವರು ಐವತ್ತು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಮೂರನೆಯದಾಗಿ, ಯಾವುದೇ ವ್ಯಕ್ತಿ ವಕೀಲರ ವಿರುದ್ಧ ಕ್ರಿಮಿನಲ್ ಅಪರಾಧ ಎಸಗಿದರೆ ಅಂತಹವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದಲ್ಲದೆ ಅಂತಹ ತಪ್ಪಿತಸ್ಥರು ಹತ್ತು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಇನ್ನಿತರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಂಶವೂ ವಿಧೇಯಕದಲ್ಲಿದೆ.ವಕೀಲರ ವಿರುದ್ಧ ನಡೆಯುವ ಅಪರಾಧಗಳಿಂದ ರಕ್ಷಿಸುವುದು ಈ ಕಾನೂನಿನ ಉದ್ದೇಶವಾಗಿದ್ದರೂ, ಕಕ್ಷಿದಾರರ ಅಥವಾ ಪ್ರತಿವಾದಿಯ ಕಕ್ಷಿದಾರರ ವಕೀಲರೇ ಸಂಜ್ಞೆàಯ ಅಪರಾಧ ಎಸಗಿದರೆ ಅಂತಹ ವಕೀಲರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ. ವಕೀಲರ ವಿರುದ್ಧ ಸಲ್ಲಿಕೆಯಾಗುವ ದೂರಿನ ಬಗ್ಗೆ ಡಿವೈಎಸ್‌ಪಿಗಿಂತ ಕೆಳಮಟ್ಟದಲ್ಲದ ಪೊಲೀಸ್ ಅಧಿಕಾರಿ, ಗರಿಷ್ಠ ಏಳು ದಿನದೊಳಗೆ ವಿಚಾರಣೆ ಪೂರ್ಣಗೊಳಿಸಿ ಅದರ ಬಗ್ಗೆ ಮಾಹಿತಿಯನ್ನು ರಾಜಸ್ಥಾನ ಬಾರ್ ಕೌನ್ಸಿಲ್‌ಗೆ ಕಳುಹಿಸಬೇಕು. ಭಾರತೀಯ ದಂಡ ಸಂಹಿತೆ ಜಾರಿಯಲ್ಲಿರುವಾಗ ವಕೀಲರ ಮೇಲೆ ನಡೆಯಬಹುದಾದ ದೌರ್ಜನ್ಯ ಇತ್ಯಾದಿ ತಡೆಗಟ್ಟಲು ಪ್ರತ್ಯೇಕ ಕಾನೂನು ಅಗತ್ಯವೇ ಎಂಬ ಚರ್ಚೆ ಆರಂಭವಾಗಿದೆ. ಉದಾಹರಣೆಗೆ ರಾಜಸ್ಥಾನ ವಿಧೇಯಕದ ಸೆಕ್ಷನ್ 51ರ ಪ್ರಕಾರ ಹಲ್ಲೆ ಎಸಗುವವರಿಗೆ ಎರಡು ವರ್ಷದ ಅವಧಿಯ ಜೈಲು ಶಿಕ್ಷೆ ಹಾಗೂ 25000 ರೂ. ದಂಡ ವಿಧಿಸಬಹುದು. ಆದರೆ ಇದೇ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 352ರ ಪ್ರಕಾರ ಮೂರು ತಿಂಗಳು ಜೈಲು ಶಿಕ್ಷೆ, 500 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಎರಡನೆಯದಾಗಿ, ವಕೀಲರಿಗೆ ತೀವೃ ಗಾಯ ಉಂಟುಮಾಡುವವರನ್ನು ಏಳು ವರ್ಷದ ಜೈಲು ಶಿಕ್ಷೆಗೆ ಗುರಿಪಡಿಸುವುದಲ್ಲದೆ ಅವರು 50000 ರೂ. ದಂಡ ತೆರಬೇಕಾಗುತ್ತದೆ. ಆದರೆ ಇದೇ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 352ರ ಪ್ರಕಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದರೂ, ದಂಡಕ್ಕೆ ಗರಿಷ್ಠ ಮಿತಿಯಿಲ್ಲ. ರಾಜಸ್ಥಾನ ಸರಕಾರ ವಕೀಲರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಧೇಯಕ ಹೊರಡಿ ಸಿದ್ದರೂ ಅದು ಎಷ್ಟರ ಮಟ್ಟಿಗೆ ಪರಿಣಾಮಕರಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ವೈದ್ಯರ ರಕ್ಷಣೆಗೆ ಪ್ರತ್ಯೇಕ ಕಾನೂನು ಇದ್ದರೂ ಅವರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಕಾನೂನು ಮಾಡುವಾಗ ಇರುವ ಕಾಳಜಿ ಅದನ್ನು ಜಾರಿಗೊಳಿಸುವಾಗಲೂ ಇರಬೇಕಾದ್ದು ಅವಶ್ಯ. -ವೈ.ಜಿ.ಮುರಳೀಧರನ್