Advertisement

Uniform Civil Code; ಸಮಾನ ಸಂಹಿತೆಗೆ 46 ಲಕ್ಷ ಪ್ರತಿಕ್ರಿಯೆಗಳು

11:34 PM Jul 11, 2023 | Team Udayavani |

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಅಭಿಪ್ರಾಯಗಳನ್ನು ಕಳುಹಿಸಲು ನಿಗದಿಪಡಿಸಿರುವ ಗಡುವು ಕೊನೆಗೊಳ್ಳುವುದಕ್ಕೂ ಎರಡು ದಿನಗಳ ಮುನ್ನ ಕಾನೂನು ಆಯೋಗಕ್ಕೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

Advertisement

ಮುಂದಿನ ದಿನಗಳಲ್ಲಿ ಕಾನೂನು ಆಯೋಗವು ಕೆಲ ವು ಸಂಘಟನೆಗಳು ಮತ್ತು ಜನರೊಂದಿಗೆ ಈ ವಿಷಯದ ಕುರಿತು ವೈಯಕ್ತಿಕ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ಸಂಬಂಧ­ಪಟ್ಟವರಿಗೆ ಆಹ್ವಾನ ಪತ್ರಗಳನ್ನು ಕಳುಹಿಸಲಾಗಿದೆ.

ಸೋಮವಾರ ಸಂಜೆಯ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಯುಸಿಸಿಗೆ ಸಂಬಂಧಿಸಿದಂತೆ ಕಾನೂನು ಆಯೋಗವು ಜೂ.14ರಂದು ಹೊಸದಾಗಿ ಸಮಾಲೋಚನಾ ಪ್ರಕ್ರಿಯೆಗೆ ಚಾಲನೆ ನೀಡಿತು. ಈ ಸೂಕ್ಷ¾ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ಮಾನ್ಯತೆ ಪಡೆದ ಧಾರ್ಮಿಕ ಸಂಘ- ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಪಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next