Advertisement

ದೇವಸ್ಥಾನಗಳ ಅಭಿವೃದ್ಧಿಗೆ ‘ದೈವ ಸಂಕಲ್ಪ’ಮತ್ತು ‘ಐಟಿಎಂಎಸ್’ಯೋಜನೆಗೆ ಚಾಲನೆ; ಏನಿದು ಯೋಜನೆ

12:59 PM Feb 23, 2022 | Team Udayavani |

ಬೆಂಗಳೂರು: ರಾಜ್ಯದ 25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ʼದೈವ ಸಂಕಲ್ಪ’ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.

Advertisement

ಕಾಶಿಯನ್ನು ಅಭಿವೃದ್ದಿಗೊಳಿಸಿದಂತೆ ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ದಿ, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳನ್ನು ಸೆಳೆಯುವ ರಾಜ್ಯದ 25 ದೇವಾಲಯಗಳನ್ನು 1,140 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ರೂಪಿಸಲಾಗಿದೆ.

ಇದೇ ವೇಳೆ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆಯನ್ನು (ಐಟಿಎಂಎಸ್) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಲಿದ್ದಾರೆ.

ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‌ಸೈಟ್‌ನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್.ಎ.ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ಭಾರತದ ಜನಸಾಮಾನ್ಯನಿಗೆ ಪರಿಣಾಮ ಬೀರಲಿದೆ ರಷ್ಯಾ-ಉಕ್ರೇನ್ ಬಿಕ್ಕಟ್ಟು; ಸಂಪೂರ್ಣ ಮಾಹಿತಿ

ಐಟಿಎಂಎಸ್‌ (ITMS) ಇಂಟಿಗ್ರೇಟೆಡ್‌ ಟೆಂಪಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟ್‌ಮ್‌ ನಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳ ಮಾಹಿತಿಯನ್ನು ಬೆರಳತುದಿಯಲ್ಲೇ ಪಡೆಯುವ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ. ಮಜರಾಯಿ ಇಲಾಖೆಯ ದೇವಸ್ಥಾನಗಳ ಸರ್ವತೋಮುಖ ನಿರ್ವಹಣೆಗೆ ಅನುಕೂಲವಾಗುವಂತಹ ಐಟಿಎಂಎಸ್‌ ವೆಬ್‌ ಸೈಟ್‌ ರಚನೆಯನ್ನು ಎನ್‌ಐಸಿ ಚೆನ್ನೈ ಹಾಗೂ ಬೆಂಗಳೂರು ತಂಡದಿಂದ ಮಾಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ದೇವಾಲಯದ ಸೇವೆಗಳ ಬಗ್ಗೆ ವಿವರ, ದೇವಾಲಯವಿರುವ ಸ್ಥಳದ ಬಗ್ಗೆ ಮಾಹಿತಿ, ಸ್ಥಿರಾಸ್ತಿಗಳ ವಿವರ, ಆನ್‌ ಲೈನ್‌ ಮತ್ತು ಇ-ಸೇವೆಗಳ ಸೌಲಭ್ಯಗಳನ್ನ ಇದು ಹೊಂದಿದೆ.

ಐಟಿಎಂಎಸ್‌ ನಲ್ಲಿ ಒಳಗೊಂಡಿರುವ ಮಾಹಿತಿಗಳು:

-ದೇವಸ್ಥಾನದ ಸಾಮಾನ್ಯ ಮಾಹಿತಿ

-ದೇವಾಲಯದಲ್ಲಿರುವ ಮೂರ್ತಿಗಳು ಹಾಗೂ ಪ್ರತಿಮೆಗಳ ಬಗ್ಗೆ ಮಾಹಿತಿ

-ದೇವಸ್ಥಾನಕ್ಕೆ ನೀಡಲಾಗಿರುವ ಭದ್ರತೆಯ ಮಾಹಿತಿ

-ನಾಗರೀಕರಿಗೆ ಆನ್‌ಲೈನ್‌ ಸೇವೆಗಳು

-ದೇವಸ್ಥಾನದ ಆಸ್ತಿಗಳ ವಿವರ

-ಜಿಐಎಸ್‌ ಇಂಟಿಗ್ರೇಷನ್‌

-ಮೊಬೈಲ್‌ ಆಪ್‌ಗಳ ಇಂಟಿಗ್ರೇಷನ್‌

-ನಿರ್ಮಾಣ/ಪುನರುಜ್ಜೀವನ ಕಾರ್ಯಗಳ ಮಾಹಿತಿ

-ಅನ್ನದಾನ ವ್ಯವಸ್ಥೆಯ ಮಾಹಿತಿ

-ಡ್ಯಾಷ್‌ ಬೋರ್ಡ್‌ ಸೇವೆಗಳು

-ನ್ಯಾಯಾಲಯದಲಿರುವ ಕೇಸ್‌ ಗಳ ನಿಗಾವಣೆ ವ್ಯವಸ್ಥೆ

-ಟೆಂಡರ್‌ಗಳ ಮಾಹಿತಿ

-ಬಳಕೆದಾರರ ನಿರ್ವಹಣಾ ಸೌಲಭ್ಯ

-ಮಾಸ್ಟರ್‌ ಮ್ಯಾನೇಜ್‌ಮೆಂಟ್‌

-ಆಯಾ ಕಾಲದ ಮಾಹಿತಿಗಳು

Advertisement

Udayavani is now on Telegram. Click here to join our channel and stay updated with the latest news.

Next