Advertisement

ಅನುಭವ ದಾಖಲಾತಿಯ ಪ್ರಾಮಾಣಿಕ ಯತ್ನ: ಪೂಜಾರಿ

10:37 AM Jan 27, 2018 | |

ಮಂಗಳೂರು: ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ತಮ್ಮ ಆತ್ಮಕಥನ “ಸಾಲ ಮೇಳದ ಸಂಗ್ರಾಮ’ವನ್ನು ಕುದ್ರೋಳಿ ಕ್ಷೇತ್ರದಲ್ಲಿ ಶುಕ್ರವಾರ ಸ್ವತಃ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ಸುದೀರ್ಘ‌ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆಡಳಿ ತಾತ್ಮಕ ಕ್ಷೇತ್ರಗಳ ಅನುಭವವನ್ನು ಪ್ರಾಮಾಣಿಕವಾಗಿ ಕೃತಿಯಲ್ಲಿ ದಾಖಲಿಸಿದ್ದೇನೆ. ಛಾಯಾ ಚಿತ್ರಗಳು ಪೂರಕ ವಾಗಿವೆ. ಬದುಕಿನಲ್ಲಿ ಜತೆಯಾದವರನ್ನೆಲ್ಲ ಗೌರವಪೂರ್ವಕವಾಗಿ ಈ ಸಂದರ್ಭ  ಸ್ಮರಿಸುವೆ ಎಂದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಆದರ್ಶಗಳನ್ನು ಪರಿಪಾಲಿಸುತ್ತಾ ಬಂದಿದ್ದೇನೆ. ಈ ಕೃತಿಯ ಪ್ರಕಟನೆಗೆ ಅನೇಕ ಹಿತೈಷಿಗಳು ಆಗ್ರಹಿಸುತ್ತಿದ್ದರು. ಈಗ ಆ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. 

Advertisement

ಹೊಸ ಅನುಭವಗಳು 
ರಾಜಕೀಯ ಜೀವನದಲ್ಲಿ ಅನೇಕ ಮಹತ್ವದ ಹೊಣೆ ಗಾರಿಕೆಗಳು ಲಭಿಸುತ್ತಿದ್ದವು. ಪ್ರತೀ ಜವಾ ಬ್ದಾರಿಯೂ ಹೊಸ ಅನುಭವ ನೀಡಿದ್ದು, ಜನತಾ ಸೇವೆಗೆ ಇದು ಪೂರಕ ವಾಯಿತು. ಸಮಾಜಕ್ಕೆ ತಾನು ಸದಾ ಋಣಿ ಯಾಗಿ ದ್ದೇನೆ ಎಂದರು. ಪ್ರಾಮಾಣಿಕತೆಗೆ ಯಶಸ್ಸು ದೊರೆಯುವುದು ಎಂಬುದನ್ನು ಅನುಭವದಿಂದ ಕಲಿತಿದ್ದೇನೆ. ಸತ್ಯ ಮತ್ತು ನಿಷ್ಠೆ ಸದಾ ಬೆಂಗಾವಲಿಗೆ ಇದ್ದಾಗ ಯಾವುದೇ ಎತ್ತರವನ್ನು ಏರಲು ಸಾಧ್ಯ. ಸಹನೆ, ಸಾಮಾಜಿಕ ಬದ್ಧತೆ, ಕರ್ತವ್ಯಪರತೆ ಈ ನಿಟ್ಟಿನಲ್ಲಿ ಶಕ್ತಿಯಾಗಬೇಕು ಎಂದು ಅವರು ವಿವರಿಸಿದರು. 

ದೇಶದ ಸಮಗ್ರ ಹಿತಾಸಕ್ತಿಯು ಪ್ರತಿ ಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು. ಆಗ ಆದರ್ಶ ಸಮಾಜ ವನ್ನು ಕಟ್ಟಲು ಸಾಧ್ಯ ವಾಗು ತ್ತದೆ. ಮುಂದಿನ ಜನಾಂಗದ ಹಿತಾ ಸಕ್ತಿ ಯನ್ನು ಗಮನ ದಲ್ಲಿಟ್ಟು ಕೊಂಡು ಕಾರ್ಯತತ್ಪರ ರಾಗ ಬೇಕು. ದೊರೆ  ಯುವ ಅವಕಾಶಗಳನ್ನು ಸಮರ್ಥ ವಾಗಿ ಬಳಸಿ ಕೊಳ್ಳಬೇಕು ಎಂದು ಪೂಜಾರಿ ಹೇಳಿದರು.

ಸಚಿವ ಬಿ. ರಮಾನಾಥ ರೈ, ಸಚಿವ ಯು.ಟಿ. ಖಾದರ್‌, ಶಾಸಕರಾದ ಜೆ.ಆರ್‌. ಲೋಬೋ, ಶಕುಂತಳಾ ಶೆಟ್ಟಿ, ಮೊದಿನ್‌ ಬಾವಾ, ಐವನ್‌ ಡಿ’ಸೋಜಾ, ಕ್ಯಾ| ಗಣೇಶ್‌ ಕಾರ್ಣಿಕ್‌, ಮೇಯರ್‌ ಕವಿತಾ ಸನಿಲ್‌, ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಕೆ.ಎಸ್‌. ಮೊಹಮ್ಮದ್‌ ಮಸೂದ್‌, ವಿಜಯ ಬ್ಯಾಂಕಿನ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ , ಡಾ| ಎ.ಜೆ. ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ, ಎಚ್‌.ಎಸ್‌. ಸಾಯಿರಾಂ, ಮಾಲತಿ ಜನಾರ್ದನ ಪೂಜಾರಿ, ಊರ್ಮಿಳಾ ರಮೇಶ್‌ಕುಮಾರ್‌, ಮಿಥುನ್‌ ರೈ, ಎಂ.ಎ. ಗಫೂರ್‌, ಯೇನಪೊಯ ಅಬ್ದುಲ್ಲ ಕುಂಞಿ‌, ಹರಿಕೃಷ್ಣ ಬಂಟ್ವಾಳ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಮನೋಹರ ಪ್ರಸಾದ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಆತ್ಮಕಥನ ರಚನೆಗೆ ಸಹಕರಿಸಿದ ಪತ್ರಕರ್ತ ಲಕ್ಷ್ಮಣ ಕೊಡಸೆ ಮುಂತಾದವರನ್ನು ಪೂಜಾರಿ ಸಮ್ಮಾನಿಸಿದರು.

ಗೋಕರ್ಣನಾಥನಿಗೆ ಅರ್ಪಣೆ
ಜನಾರ್ದನ ಪೂಜಾರಿ ತಮ್ಮ ಆತ್ಮಕಥನ ಬಿಡುಗಡೆಗೆ ಪೂರ್ವಭಾವಿ ಯಾಗಿ ಅದರ ಕೆಲವು ಪ್ರತಿಗಳನ್ನು ತಲೆಯಲ್ಲಿ ಹೊತ್ತು ಶ್ರೀ ಗೋಕರ್ಣ ನಾಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದರು, ಗೋಕರ್ಣನಾಥನ ಸನ್ನಿಧಿಗೆ ಸಮರ್ಪಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ಬಿಡುಗಡೆಯಾದ ತತ್‌ಕ್ಷಣವೇ ಒಂದು ಸಾವಿರ ಪ್ರತಿ ಮಾರಾಟವಾಗಿ ದಾಖಲೆ ಮಾಡಿತು. ಇನ್ನಷ್ಟು ಬೇಡಿಕೆ ಇದ್ದು, ಮುಂದಿನ ಶಿವರಾತ್ರಿಯಂದು ಕ್ಷೇತ್ರದಲ್ಲಿ ಪ್ರತಿಗಳನ್ನು ಒದಗಿಸುವುದಾಗಿ ಪೂಜಾರಿ ಹೇಳಿದರು. ಈ ಹಂತದಲ್ಲಿ ಬೇಡಿಕೆಯ ಸಂಖ್ಯೆ ಸುಮಾರು 20 ಸಾವಿರ ದಾಟಿದೆ!

Advertisement

ರೈಗೆ ಶ್ಲಾಘನೆ: ರಮಾನಾಥ ರೈ ಅವರು ಚೆನ್ನಾಗಿ ಕೆಲಸ ಮಾಡು ತ್ತಿದ್ದಾರೆ. ಮತ್ತಷ್ಟು  ಸೇವೆ ಅವರಿಂದ ಸಮಾಜಕ್ಕೆ ದೊರೆಯುವಂತಾಗಲು ಆ ಭಗವಂತನು ಶಕ್ತಿ ನೀಡಲಿ ಎಂದು ಪೂಜಾರಿ ಹೇಳಿದರು.

ಈ ಹುಡುಗ ನನಗೆ ಮೋಸ ಮಾಡಲ್ಲ
ಇಂದಿರಾ ಪ್ರಧಾನಿಯಾದ ಬಳಿಕ ಒಂದು ದಿನ ಮನೆಗೆ ಕರೆದು ಮಾತಿಗಿಳಿದಿದ್ದರು. ಅವರು ಮಾತನಾಡುತ್ತಿದ್ದಾಗ ಸಂಜಯ್‌ ಗಾಂಧಿ ನಮ್ಮ ಮುಂದೆ ಹೋಗುತ್ತಿದ್ದರು. ಅವರನ್ನು ಕರೆದ ಇಂದಿರಾ ಗಾಂಧಿ, “ಕಮ್‌ ಹಿಯರ್‌, ಯು ನೋ ಹೂ ಈಸ್‌ ದಿಸ್‌ ಜಂಟಲ್‌ ಮ್ಯಾನ್‌’ ಎಂದು ಕೇಳಿದರು. ಸಂಜಯ್‌  ಗಾಂಧಿ “ಇಲ್ಲ’ ಎಂದರು. “ಹಿ ಈಸ್‌ ಮಿಸ್ಟರ್‌ ಜನಾರ್ದನ ಪೂಜಾರಿ. ಅವರು ತುಂಬ ವಿಶ್ವಾಸಾರ್ಹ ವ್ಯಕ್ತಿ. ಕಾಂಗ್ರೆಸ್‌ಗೆ ಕಮಿಟೆಡ್‌ ಆಗಿದ್ದಾರೆ. ನೀನು ನನಗೆ ಮೋಸ ಮಾಡ ಬಹುದು. ರಾಜೀವ್‌ ಮೋಸ ಮಾಡ ಬಹುದು. ಆದರೆ ಈ ಹುಡುಗ ನನಗೆ ಮೋಸ ಮಾಡಲು ಸಾಧ್ಯವಿಲ್ಲ’ ಎಂಬುದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಿಳಿ ಸಿದ್ದರು ಎಂಬುದಾಗಿ ಪೂಜಾರಿ ಅವರು ತಮ್ಮ ಆತ್ಮಕಥೆಯಲ್ಲಿ  ತಿಳಿಸಿದ್ದಾರೆ.

ಊಟಕ್ಕೂ ಗತಿಯಿರಲಿಲ್ಲ !
“ಮಂಗಳೂರಿನ ಬೊಕ್ಕಪಟ್ಣದ ಶಾಲೆಯಲ್ಲಿ ಕಲಿತ ಬಡ ಹುಡುಗ, ತೊಡಲು ಸರಿಯಾದ ಬಟ್ಟೆ ಇರಲಿಲ್ಲ, ತಿನ್ನಲು ಎರಡು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಅಂಗಿ ಇಲ್ಲದೆ ಹರಿದ ಚಡ್ಡಿಯಲ್ಲೇ ಶಾಲೆ ಕಲಿತವನು ಲೋಕಸಭೆಯ ಮೆಟ್ಟಿಲೇರಿದೆ. ಅನಂತರದ ನಾಲ್ಕು ವರ್ಷಗಳಲ್ಲೇ ದೇಶದ ಅರ್ಥಖಾತೆಗೆ ಮಂತ್ರಿಯಾದೆ. ಮುಂದಿನ ಬದುಕಿನಲ್ಲಿ ಬಡತನವೇ ನನಗೆ ದೊಡ್ಡ ಪಾಠ ಕಲಿಸಿತು. ಬಡವರ ಕಣ್ಣೀರು ಒರೆಸುವಲ್ಲಿ ನನಗೆ ಹೆಚ್ಚಿನ ಸಹಾಯ ಮಾಡಿತ್ತು’ ಎಂದು ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ಸಾಲ ಮೇಳದ ಸಂಗ್ರಾಮವಿಡೀ ಗಮನ ಸೆಳೆಯುವ ವಿಚಾರ ಪೂಜಾರಿ ಅವರ “ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿತ್ತು. ಬಿಡುಗಡೆ ಯಾದ ತತ್‌ಕ್ಷಣ ವೇದಿಕೆಯಲ್ಲೇ ಸಾವಿರಕ್ಕೂ ಹೆಚ್ಚು  ಪ್ರತಿಗಳು ಮಾರಾಟವಾಗಿವೆ.  ಪುಸ್ತಕದ ಪ್ರಾರಂಭದಲ್ಲೇ ಪೂಜಾರಿಯವರು “ನನ್ನ ಮಾತು’ ಬರೆದಿದ್ದಾರೆ. ವಕೀಲ ನಾಗಿದ್ದ ತಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದುದಾಗಿ ಮುನ್ನುಡಿ ಯಲ್ಲಿ ಬರೆದುಕೊಂಡಿದ್ದಾರೆ. “ವಕೀಲಿ ವೃತ್ತಿ ಮಾಡುತ್ತಿದ್ದಾಗ ಬಡವರು, ಗೇಣಿದಾರರು, ಪರಿಶಿಷ್ಟ ವರ್ಗ ಮತ್ತು ಜಾತಿಯ ಜನರಿಗೆ ಕೈಲಾದಷ್ಟು ಕಾನೂನು ನೆರವು ನೀಡುವ ಪ್ರಯತ್ನ ಮಾಡಿದ್ದೆ. ಬಡತನದಿಂದ ಶಾಲೆ ಕಲಿತು ಸ್ವಂತ ಕಾಲ ಮೇಲೆ ನಿಲ್ಲುವ ಹೋರಾಟ ನಡೆಸಿದ್ದ ನನಗೆ ಕಷ್ಟಪಟ್ಟು ಕೆಲಸ ಮಾಡುವುದು ತಂದೆಯಿಂದ ಬಂದ ಬಳುವಳಿ. ಸ್ವಂತಕ್ಕಾಗಿ ಯಾರ ಮುಂದೆಯೂ ಕೈ ಚಾಚದಿರುವಂಥ ಮನಃಸ್ಥಿತಿ ನನಗೆ ಬಾಲ್ಯದಿಂದಲೇ ಬಂದದ್ದು’ ಎಂಬುದಾಗಿ ತನ್ನ ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ.

ಖುದ್ದು ಇಂದಿರಾ ಕರೆ: 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ ರಾಷ್ಟ್ರೀಕರಣ ಮಾಡಿದ್ದ ವೇಳೆ ಅವರ ವಕೀಲರೊಂದಿಗೆ ಇಂದಿರಾ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಿದ್ದೆ. 1977ನೇ ಇಸವಿ. ನಾನಾಗ ವಕೀಲ ವೃತ್ತಿ ಮಾಡುತ್ತಿದ್ದೆ. ಅದೊಂದು ದಿನ ಕಚೇರಿಯಲ್ಲಿ ಕುಳಿತಿದ್ದಾಗ ದೂರವಾಣಿ ಕರೆ ಬಂತು. ಅದು ಖುದ್ದು ಇಂದಿರಾ ಗಾಂಧಿ ಅವರಿಂದ. “ನಿಮ್ಮನ್ನು ಲೋಕಸಭಾ ಚುನಾವಣೆಗೆ ನಿಲ್ಲಸಬೇಕೆಂದು ಕಾಂಗ್ರೆಸ್‌ ಪಕ್ಷದಿಂದ ನಿರ್ಧರಿಸಲಾಗಿದೆ. ಆಲ್‌ ದಿ ಬೆಸ್ಟ್‌’ಎಂದರು. “ಥ್ಯಾಂಕ್ಯೂ ಮೇಡಂ’ ಎಂದೆ ಎಂಬುದಾಗಿ ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ  ನಿರೂಪಿಸಿದ್ದಾರೆ. 

ಪೂಜಾರಿ ಅವರ “ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿತ್ತು. ಬಿಡುಗಡೆ ಯಾದ ತತ್‌ಕ್ಷಣ ವೇದಿಕೆಯಲ್ಲೇ ಸಾವಿರಕ್ಕೂ ಹೆಚ್ಚು  ಪ್ರತಿಗಳು ಮಾರಾಟವಾಗಿವೆ. ಪುಸ್ತಕದ ಪ್ರಾರಂಭದಲ್ಲೇ ಪೂಜಾರಿಯವರು “ನನ್ನ ಮಾತು’ ಬರೆದಿದ್ದಾರೆ. ವಕೀಲ ನಾಗಿದ್ದ ತಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದುದಾಗಿ ಮುನ್ನುಡಿ ಯಲ್ಲಿ ಬರೆದುಕೊಂಡಿದ್ದಾರೆ. “ವಕೀಲಿ ವೃತ್ತಿ ಮಾಡುತ್ತಿದ್ದಾಗ ಬಡವರು, ಗೇಣಿದಾರರು, ಪರಿಶಿಷ್ಟ ವರ್ಗ ಮತ್ತು ಜಾತಿಯ ಜನರಿಗೆ ಕೈಲಾದಷ್ಟು ಕಾನೂನು ನೆರವು ನೀಡುವ ಪ್ರಯತ್ನ ಮಾಡಿದ್ದೆ. ಬಡತನದಿಂದ ಶಾಲೆ ಕಲಿತು ಸ್ವಂತ ಕಾಲ ಮೇಲೆ ನಿಲ್ಲುವ ಹೋರಾಟ ನಡೆಸಿದ್ದ ನನಗೆ ಕಷ್ಟಪಟ್ಟು ಕೆಲಸ ಮಾಡುವುದು ತಂದೆಯಿಂದ ಬಂದ ಬಳುವಳಿ. ಸ್ವಂತಕ್ಕಾಗಿ ಯಾರ ಮುಂದೆಯೂ ಕೈ ಚಾಚದಿರುವಂಥ ಮನಃಸ್ಥಿತಿ ನನಗೆ ಬಾಲ್ಯದಿಂದಲೇ ಬಂದದ್ದು’ ಎಂಬುದಾಗಿ ತನ್ನ ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ.
ಖುದ್ದು ಇಂದಿರಾ ಕರೆ: 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ ರಾಷ್ಟ್ರೀಕರಣ ಮಾಡಿದ್ದ ವೇಳೆ ಅವರ ವಕೀಲರೊಂದಿಗೆ ಇಂದಿರಾ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಿದ್ದೆ. 1977ನೇ ಇಸವಿ. ನಾನಾಗ ವಕೀಲ ವೃತ್ತಿ ಮಾಡುತ್ತಿದ್ದೆ. ಅದೊಂದು ದಿನ ಕಚೇರಿಯಲ್ಲಿ ಕುಳಿತಿದ್ದಾಗ ದೂರವಾಣಿ ಕರೆ ಬಂತು. ಅದು ಖುದ್ದು ಇಂದಿರಾ ಗಾಂಧಿ ಅವರಿಂದ. “ನಿಮ್ಮನ್ನು ಲೋಕಸಭಾ ಚುನಾವಣೆಗೆ ನಿಲ್ಲಸಬೇಕೆಂದು ಕಾಂಗ್ರೆಸ್‌ ಪಕ್ಷದಿಂದ ನಿರ್ಧರಿಸಲಾಗಿದೆ. ಆಲ್‌ ದಿ ಬೆಸ್ಟ್‌’ಎಂದರು. “ಥ್ಯಾಂಕ್ಯೂ ಮೇಡಂ’ ಎಂದೆ ಎಂಬುದಾಗಿ ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ  ನಿರೂಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next