Advertisement

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

01:16 AM Apr 27, 2024 | Team Udayavani |

ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಎರಡೂ ಪಕ್ಷದ ಅಭ್ಯರ್ಥಿಗಳು ಶುಕ್ರವಾರ ಬೆಳಗ್ಗೆ ಮತದಾನ ಮಾಡಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ, ಮತಯಾಚನೆಯ ಕಸರತ್ತು ನಡೆಸಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಕೊರ್ಗಿ ಶಾಲೆಯಲ್ಲಿ ಬೆಳಗ್ಗೆ 7 ಕ್ಕೆ ಮತ ಚಲಾಯಿಸಿ, ಕುಂದಾಪುರ, ಬಾರಕೂರು, ಉಡುಪಿ, ಪರ್ಕಳ, ಪೆರ್ಡೂರು, ಕಾಪು, ಕಾರ್ಕಳ ಸೇರಿದಂತೆ ಜಿಲ್ಲೆಯ 4 ವಿಧಾನಸಭಾ ವ್ಯಾಪ್ತಿಯಲ್ಲಿ ಸಂಚರಿಸಿದರು. ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಗ್ರಾ.ಪಂ. ಮತಗಟ್ಟೆ ಯಲ್ಲಿ ಮತದಾನ ಮಾಡಿ ವಿವಿಧೆಡೆ ಭೇಟಿ ನೀಡಿದರು. ಗಿಳಿಯಾರು ಮತಗಟ್ಟೆ ಬಳಿ ಕಾರ್ಯ ಕರ್ತರೊಂದಿಗೆ ಕುಳಿತು ಮತ ಯಾಚಿಸಿದರು.
ಸಂಸದನಾಗಿ ನಾನು ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ರಾಜ್ಯ ಸರಕಾರದ ಗ್ಯಾರಂಟಿ
ಯೋಜನೆಗಳು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪರಿಕಲ್ಪನೆಯಡಿ ಮತ ಯಾಚಿಸಿದ್ದೆ. ಮತದಾರರು ಮತ ಚಲಾಯಿಸಿದ್ದು, ನಿಶ್ಚಿತವಾ ಗಿಯೂ ಗೆಲುವು ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದವರು ಕೆ. ಜಯಪ್ರಕಾಶ್‌ ಹೆಗ್ಡೆ.

ಕೇಂದ್ರ ಸರಕಾರ 10 ವರ್ಷದಲ್ಲಿ ಕೈಗೊಂಡಿ ರುವ ಅಭಿವೃದ್ಧಿ ಕಾರ್ಯ, ದೇಶದ ಭದ್ರತೆ, ಸುರಕ್ಷತೆಯ ಜತೆಗೆ ವಿಕಸಿತ ಭಾರತದ ನಿರ್ಮಾಣ ಸಂಕಲ್ಪದ ಪ್ರಧಾನಿ ನರೇಂದ್ರ ಮೋದಿ ಯವರ ನಾಯಕತ್ವದ ಜತೆ ಅಭಿವೃದ್ಧಿ ವಿಷಯಗಳನ್ನೇ ಮುಂದಿಟ್ಟುಕೊಂಡು ಮತ ಕೇಳಲಾಗಿದೆ. ಖಂಡಿತವಾಗಿ ಜಯ ಸಿಗಲಿದೆ ಎಂದುವರು ಕೋಟ ಶ್ರೀನಿವಾಸ ಪೂಜಾರಿ.

Advertisement

Udayavani is now on Telegram. Click here to join our channel and stay updated with the latest news.

Next